ಮೈಸೂರು, ಡಿಸೆಂಬರ್:28- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಎಸ್.ಎಪ್.ಸಿ ಮುಕ್ತನಿಧಿ ಮತ್ತು ಪುರಸಭಾ ಸಾಮಾನ್ಯ ನಿಧಿ ಅನುದಾನದಡಿ ಮಿಸಲಿರಿಸಿರುವ ಶೇ. 24.10 ರಲ್ಲಿ ಪ.ಜಾ ಮತ್ತು ಪ. ಪಂ. ಜನಾಂಗದವರಿಗೆ ಮತ್ತು ಶೇ. 7.25ರಲ್ಲಿ ಹಿಂದುಳಿದ ವರ್ಗದ ಬಡ ಜನರಿಗೆ ಸ್ವ ಉದ್ಯೋಗಕ್ಕೆ ಹೊಲಿಗೆ ಯಂತ್ರ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಕಛೇರಿಯಿಂದ ನಿಗಧಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ 2022ನೇ ಜನವರಿ 31 ರಂದು ಸಂಜೆ:-5.30 ರೊಳಗೆ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ರಾಘವೆಂದ್ರ ದ್ವಿ.ದ.ಸ. ಕೊಠಡಿ ಸಂಖ್ಯೆ 17 ರಲ್ಲಿ ಇವರನ್ನು ಸಂಪರ್ಕಿಸಿ ಅರ್ಜಿ ನಮೂನೆ  ಪಡೆಯ ಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಅವರು ಪ್ರಕಟಣೆಯಲಿ ತಿಳಿಸಿರುತ್ತಾರೆ.