ಹಿರಿಯ ನಾಗರೀಕರ ಕಲ್ಯಾಣ ಕಾರ್ಯಕ್ರಮಗಳು, ಮಹಿಳಾ‌‌ ಸಶಕ್ತತಾ ತರಬೇತಿಗಳು‌‌ ಹಾಗೂ ಸಮುದಾಯ ಆಧಾರಿತ ಕಾರ್ಯಕ್ರಮಗಳ ಮೂಲಕ ಕಳೆದ ಒಂದು‌ ವರ್ಷದಿಂದ ಸಮರೋಪಾದಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಸೇವಾಯಾನ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು‌ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಜಯನಗರ ಭಾಗದ ನಗರ ಪಾಲಿಕೆ ಸದಸ್ಯ ಎಸ್.ಯು ಸುಬ್ಬಯ್ಯನವರು ಭಾಗವಹಿಸಿ ಮಾತನಾಡಿದರು.‌ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಸಂಘ-ಸಂಸ್ಥಾಗಳು‌ ಮಾಡುತ್ತಿವೆ ಇಂತಹ ಒಳ್ಳೆಯ ಕೆಲಸಗಳಿಗೆ ನೆರವು ಸಿಕ್ಕೇ ಸಿಗುತ್ತದೆ ಎಂದರು.
ಗ್ರಾಮ್ ಸಂಸ್ಥೆಯ ಮುಖ್ಯಸ್ಥರಾದ ಡಾ.ಬಸವರಾಜು ಆರ್ ಶ್ರೇಷ್ಠರವರು ಮಾತನಾಡಿ ಇಂದಿನ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ವೃದ್ದಾಶ್ರಮಗಳ ಅವಶ್ಯಕತೆ ಬಹಳಷ್ಟಿದೆ. ಶೇ.50ರಷ್ಟು ವೃದ್ಧರು ತಮಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದು ದೇಶದ ಬಹುದೊಡ್ಡ ಅಭಿವೃದ್ಧಿಯ ತೊಡಕೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಸೇವಾಯಾನ ಸಂಸ್ಥೆ ಕಷ್ಟದಲ್ಲಿರುವ ಹಿರಿಯರಿಗೆ ಉಚಿತವಾಗಿ ಆಶ್ರಯ ನೀಡಿ, ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವು ಶ್ಲಾಘನೀಯ ವಿಚಾರ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಪ್ರಭಾಮಣಿಯವರು ಒಂದು ಸಂಸ್ಥೆಯ ವಾರ್ಷಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, ಅತಿಥಿಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ‌ ಸಮಾಜಸೇವಕರಾದ  ಗೋಪಾಲಸ್ವಾಮಿ, ಲಯನ್ ಡಾ. ವಿಶ್ವನಾಥ್, ಹಿನಕಲ್ ಗ್ರಾಮಪಂಚಾಯಿತಿ‌ ಸದಸ್ಯರಾದ ಹೊನ್ನಪ್ಪ ಸಂಸ್ಥೆಯ ಕಾರ್ಯದರ್ಶಿಗಳಾದ ಅಂಜು ಇದ್ದರು.
ಕಾರ್ಯಕ್ರಮದಲ್ಲಿ ಸೇವಯಾನ ಸದಸ್ಯರುಗಳಾದ ಮಂಜುನಾಥಸ್ವಾಮಿ, ರಂಜಿತ್, ಪ್ರಭುಶಂಕರ್ ಹಾಗೂ ಸ್ವಯಂಸೇವಕರುಗಳಾದ ಜಾಹ್ನವಿ, ನಂದಿನಿ, ಆರ್.ಕೆ.ಸ್ವಾಮಿ, ಚೆನ್ನಬಸಪ್ಪ, ಮಲ್ಲೇಶ್, ಕಿರಣ್, ವಿನೋದ್, ಸಿದ್ದು, ಸೋಮು, ಪೃಥ್ವಿ ಸೇರಿದಂತೆ ಸುಮಾರು ಇನ್ನೂರು ಜನರು ಇದ್ದರು.

By admin