ಮೈಸೂರು -28 ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42 ಲಕ್ಷದ 48 ಸಾವಿರ 987 ಇದ್ದು ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ 6.95 % ರಷ್ಟು ಇರುತ್ತದೆ. ಈ ಈ ಜನಸಂಖ್ಯೆಯ ಪ್ರಮಾಣವು ಈಗಾಗಲೇ ಜಣಗಣತಿ ಪಡೆದು 8 ವರ್ಷಗಳು ಕಳೆದಿರುವುದರಿಂದ್ದ ಜನಸಂಖ್ಯೆಯು ಶೇಕಡ 7% ಕ್ಕೂ ಹೆಚ್ಚು ಇದ್ದು ಪರಿಶಿಷ್ಟ ಪಂಗಡದವರಿಗೆ ಅನೇಕ ದಶಕಗಳಿಂದ ಅನ್ಯಾಯವಾಗಿರುತ್ತದೆ. ಅದ್ದರಿಂದ ಪರಿಶಿಷ್ಟ ಪಂಗಡದವರಿಗೆ ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ ಮೀಸಲಾತಿ ಪ್ರಮಾಣವು ಶೇ.3 % ರಿಂದ ಶೇ.7.5 ಗೆ ಹೆಚ್ಚಿಸಬೇಕು.
ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕರ ಧ್ವನಿ ಗುರುವಾರ ಮೈಸೂರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಶೇಕಡ 7.5 ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು.ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತು ಕೂಡಲೇ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಘೋಷಣೆ ಮಾಡಬೇಕು.ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವೇಳೆ ವಾಲ್ಮೀಕಿ ನಾಯಕರ ಧ್ವನಿಯ ಮುಖಂಡರಗಳಾದ ಲೋಕೆಶ್ ಜಯಸಿಂಹ, ಮಹೇಶ್,ಇಟ್ಟಿಗೆಗೂಡು,ಯೊಗೇಶ್, ಡಿ ಮಾದೇಶ, ಶಿವು,ರಮ್ಮನಹಳ್ಳಿ.ಯೋಗೇಶ್,ಆರ್ ಮುಂತಾದವರು ಹಾಜರಿದ್ದರು.