ಮೈಸೂರು: ಚಾಮರಾಜ ಕ್ಷೇತ್ರದಲ್ಲಿರುವ ಹಿಂದುಳಿದ ವರ್ಗದವರಿಗೆ ಸವಲತ್ತು ನೀಡುವುದೇ ನನ್ನ ಗುರಿ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ
ನಗರದ ಹೆಬ್ಬಾಳ ನಲ್ಲಿರುವ ಬಸವನ ಗುಡಿ ಕಲ್ಯಾಣ ಮಂಟಪ ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿಂದುಳಿದಿರುವ, ಅಸಂಘಟಿತ, ಕೂಲಿ ಕೆಲಸ,ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಟೈಲರಿಂಗ್ ,ಸವಿತಾ ಸಮಾಜ,ಮಡಿವಾಳ, ಸಮಾಜದ ಎಲ್ಲರಿಗೂ ರಾಜ್ಯ ಸರ್ಕಾರ ಮೊದಲು ಘೋಷಿಸಿ ದ ಪ್ಯಾಕೇಜ್ ನಲ್ಲಿ ಕೆಲವರಿಗೆ ಎರಡರಿಂದ ಮೂರು ಸಾವಿರ ರೂ.ಗಳ ನೋಂದಣಿ ಮಾಡಿಸಿ,ಪತ್ರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸರಿ ಸುಮಾರು ಒಂದು ಲಕ್ಷದಷ್ಟು ಹಿಂದುಳಿದ ವರ್ಗದವರಿದ್ದು, ಕೋವಿಡ್ 2.0ನ ಸಂದರ್ಭದಲ್ಲಿ ಅವರಿಗೆ ಕೂಲಿ ಕೆಲಸವೇ ಇಲ್ಲದಾಗಿದೆ. ಇದನ್ನರಿತು ಮುಖ್ಯಮಂತ್ರಿ ಗಳು ಹಣಕಾಸಿನ ನೆರವು ಹಾಗೂ ಕೋವಿಡ್ ನಲ್ಲಿ ತೀರಿದ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ ಗಳನ್ನು ಘೋಷಿಸಿದ್ದಾರೆ. ಕೋವಿಡ್ ಎಂಬ ಮಹಾ ಮಾರಿಯಿಂದ ಚಾಮರಾಜ ಕ್ಷೇತ್ರವನ್ನು ಮುಕ್ತ ಮಾಡಲು ಸಾರ್ವಜನಿಕ ರು ಸಾಮಾಜಿಕ ಅಂತರ ಹಾಗೂ ಮಾಸ್ಕ್, ಸ್ಯಾನಿಟೈಸರ್ ಬಳಸುವ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ವಾರ್ಡ್ ವ್ಯಾಪ್ತಿಯಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮೊರ್ಚಾದ ನಗರ ಅಧ್ಯಕ್ಷ ಜೋಗಿಮಂಜು ಮಾತನಾಡಿ ರಾಜ್ಯ ಸರ್ಕಾರ ಕೋವಿಡ್ ನ ಸಂದರ್ಭದಲ್ಲಿ ಹಿಂದುಳಿದವರ ಪರ ಇದೆ ಎನ್ನುವುದಕ್ಕೆ ಇಂತಹ ಯೋಜನೆಗಳೆ ಸಾಕ್ಷಿ, ಇಲ್ಲಿ ಬಂದಿರ ತಕ್ಕಂತಹ ಎಲ್ಲರೂ ಕೂಡ ನಿಮ್ಮೊಂದಿಗೆ ಇರುವ ಇತರೆ ಸಮಾಜದವರಿಗೂ ಸರ್ಕಾರದ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸುಪ್ರೀಂ ಮಂಜು,ನಗರ ಪಾಲಿಕೆ ಸದಸ್ಯ ಚಿಕ್ಕ ವೆಂಕಟ್, ನಗರ ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ, ಶಿವರಾಜ್, ಸೋಮು, ವೆಂಕಟಾಚಲ, ಸಿದ್ದೆಗೌಡ, ಕುಮಾರಣ್ಣ, ಚೌಡಪ್ಪ, ಅಭಿಲಾಶ್ ಕೊಟ್ಟಾಯ್ ಇದ್ದರು