ಸರಗೂರು ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಂದೇಗಾಲ ಶಿವರಾಜು ಆಯ್ಕೆ

ಪಕ್ಷದ ಸಂಘಟನೆಗೆ ಶ್ರಮಿಸುವೆ: ಶಿವರಾಜು

ಸರಗೂರು: ಕಾಂಗ್ರೆಸ್‍ನ ಭದ್ರಕೋಟೆ ಸರಗೂರಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಯುವಕರ ಪಾತ್ರ ಬಹಳ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನ್ಮೋಖರಾಗಬೇಕು ಎಂದು ಜಿ.ಪಂ.ಮಾಜಿ ಸದಸ್ಯ ಚಿಕ್ಕವೀರನಾಯಕ ಸಲಹೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರಗೂರು ಬ್ಲಾಕ್ ಕಾಂಗ್ರೆಸ್‍ನಿಂದ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಪ್ರದೇಶ ಸಮಿತಿಯ ಸರಗೂರು ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ವಕೀಲ ಕಂದೇಗಾಲ ಶಿವರಾಜು ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಇತ್ತೀಚಿಗೆ ನಡೆದ ಯುವ ಕಾಂಗ್ರೆಸ್ ಅಧ್ಯಕ್ಷತೆಗಾಗಿ ನಡೆದ ಆನ್ಲೈನ್ ಚುನಾವಣೆಯಲ್ಲಿ ಶಿವರಾಜು ವಿಜಯಿಯಾಗಿರುವುದು ಸಂತಸ ತಂದಿದೆ. ಇವರ ಗೆಲುವಿಗಾಗಿ ಡಾ.ಜಿ.ಪರಮೇಶ್ವರ ಯುವ ಸೈನ್ಯದ ತಾಲ್ಲೂಕು ಅಧ್ಯಕ್ಷ ಮಂಜು ಮಾಗುಡಿಲು, ವೆಂಕಟೇಶಮೂರ್ತಿ, ಕಳಸೂರು ಬಸವರಾಜು ಮತ್ತು ತಂಡ ಬಹಳ ಶ್ರಮವಹಿಸಿದೆ. ಹೀಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಗ್ರಾಮೀಣ ಭಾಗದಲ್ಲಿಯೂ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಅವರು ತಿಳಿಸಿದರು.

ಜಿ.ಪಂ.ಮಾಜಿ ಸದಸ್ಯ ನರಸೀಪುರ ಪಿ.ರವಿ ಮಾತನಾಡಿ, ನೂತನ ತಾಲ್ಲೂಕು ಸರಗೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಮಾಜಿ ಸಂಸದ ಆರ್.ಧ್ರುವನಾರಾಯಣ, ಶಾಸಕ ಅನಿಲ್ ಚಿಕ್ಕಮಾಧು ಅವರ

ಬೆನ್ನೆಲುಬಾಗಿ ಯುವಪಡೆ ಕಾರ್ಯನಿರ್ವಹಿಸಬೇಕು. ಸರಗೂರು ಬ್ಲಾಕ್‍ನ ನೂತನ ಅಧ್ಯಕ್ಷರಾಗಿ ಕಂದೇಗಾಲ ಶಿವರಾಜು ಆಯ್ಕೆಯಾಗಿರುವುದು ಪಕ್ಷದ ಬಲವರ್ಧನೆಗೆ ಅಡಿಪಾಯವಾಗಿದೆ. ಮುಂಬರುವ ಚುನಾವಣೆಗಳಿಗೂ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ವಾಗ್ಮೀ ಯುವ ವಕೀಲ ಕಂದೇಗಾಲ ಶಿವರಾಜು ಮಾತನಾಡಿ, ನನಗೆ ಈ ಒಂದು ಚುನಾವಣೆಯಲ್ಲಿ ಸಹಕಾರ ನೀಡಿದ ಆತ್ಮೀಯ ಸ್ನೇಹ ಬಂಧುಗಳು, ಮತ ನೀಡಿದ ಎಲ್ಲಾ ಹಿತೈಷಿಗಳಿಗೆ ಕಾಂಗ್ರೆಸ್, ವೈಯಕ್ತಿಕವಾಗಿ ತುಂಬು ಹೃದಯದ ಧನ್ಯವಾದಗಳು. ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ತುಂಬಾ ಚಿರಋಣ ಯಾಗಿರುತ್ತೇನೆ. ಅಲ್ಲದೆ ಸರಗೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಜವಾಬ್ದಾರಿಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

ಜಿ.ಪಂ.ಮಾಜಿ ಸದಸ್ಯ ನರಸೀಪುರ ಪಿ.ರವಿ, ಕಾಂಗ್ರೆಸ್ ಮುಖಂಡರಾದ ಗುರುಸ್ವಾಮಿ, ಪುರದಕಟ್ಟೆ ಬಸವರಾಜು, ಸರಗೂರು ಪ್ರಭುಸ್ವಾಮಿ, ಬಿರ್ವಾಳ್ ಚಿಕ್ಕಣ್ಣ, ಭೀಮಯ್ಯ, ಇದಿಂiÀiಪ್ಪ, ಗೋಪಾಲ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್, ಗ್ರಾ.ಪಂ.ಮಾಜಿ ಸದಸ್ಯ ಉಯ್ಯಂಬಳ್ಳಿ ನಾಗರಾಜು, ಡಾ.ಜಿ.ಪರಮೇಶ್ವರ ಯುವ ಸೈನ್ಯದ ತಾಲೂಕು ಅಧ್ಯಕ್ಷ ಮಂಜು ಮಾಗುಡಿಲು, ಉಪಾಧ್ಯಕ್ಷ ವೆಂಕಟೇಶಮೂರ್ತಿ, ಯುವ ಮುಖಂಡ ಕಳಸೂರು ಬಸವರಾಜು, ಹಾದನೂರು ಗ್ರಾ.ಪಂ.ಸದಸ್ಯ ಶಿವರಾಜು, ಸುಭಾನ್, ಸುರೇಶ್, ಹೂವಿನಕೊಳ ಸುರೇಶ್, ಸಂತೋಷ್, ಶಿವಣ್ಣ, ಮೋಹನ್‍ಕುಮಾರ್, ಚೆನ್ನಿಪುರ ಚಲುವರಾಜು, ಶಶಿ, ಶ್ರೀಕಂಠ ಸೇರಿದಂತೆ ಇನ್ನಿತರರು ಹಾಜರಿದ್ದರು.

 

 

By admin