ಮೈಸೂರು: ಕೊರೊನಾದಿಂದ ಮೃತಪಟ್ಟ ಕುಟುಂಬದ ಮನೆಗಳಿಗೆ ಸಾಂತ್ವನ ಹೇಳುವುದಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ನಗರಪಾಲಿಕೆಯ ವಿವಿಧ ಯೋಜನೆಗೆ ಫಲಾನುಭವಿಗಳನ್ನಾಗಿ ಮಾಡುವ ಕಾರ್ಯಕ್ಕೆ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.
ಕೆ.ಆರ್ ಕ್ಷೇತ್ರದ ಜೆಸಿನಗರ, ರಾಮಾನುಜ ರಸ್ತೆ, ಬೆಸ್ತರಗೇರಿ, ಕನಕಗಿರಿ, ಜಯನಗರ, ಚಿನ್ನಗಿರಿ ಕೊಪ್ಪಲ್ ನಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಮನೆಗಳಿಗೆ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್ ಅವರು ಮೊದಲಿಗೆ ಕುಟುಂಬದವರನ್ನು ಭೇಟಿ ಮಾಡಿ ಅವರ ಯೋಗ ಕ್ಷೇಮ ವಿಚಾರಿಸಿದರಲ್ಲದೆ, ಸಾಂತ್ವನ ಹೇಳಿ ಸರ್ಕಾರದ ಪಿಂಚಣಿ ಯೋಜನೆ, ನಗರಪಾಲಿಕೆಯ ವಿವಿಧ ಯೋಜನೆಯನ್ನು ಕೊಡಿಸುವ ಭರವಸೆ ನೀಡುವುದರೊಂದಿಗೆ ಈ ವಿನೂತನ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋವಿಡ್ ನಿಂದ ಸಾವಿನ್ನಪ್ಪಿರುವವರ ಕುಟುಂಬದ ಪಟ್ಟಿಯನ್ನು ಮಾಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಮೊದಲನೆಯದಾಗಿ ಡೆತ್ ಸರ್ಟಿಫಿಕೇಟ್ ಮನೆಗೆ ತಲುಪಿಸುವ ಕೆಲಸದ ಜೊತೆಗೆ ಸಾಮಾಜಿಕ ಭದ್ರತೆ, ವಿಧವಾ ಪಿಂಚಣಿ ಹಾಗೂ ಸಂಸ್ಕಾರದ ಹಣ ಹೀಗೆ ಸರ್ಕಾರದ ಸವಲತ್ತುಗಳ ಜೊತೆಗೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ ಇದಾದ ನಂತರದಲ್ಲಿ ನಮ್ಮ ನಗರಪಾಲಿಕಾ ಸದಸ್ಯರು ಹಾಗೂ ಕಾರ್ಯಕರ್ತರು ಕ್ಷೇತ್ರದ ಎಲ್ಲ ಮನೆಗಳಿಗೂ ತೆರಳಿ ಸಾಂತ್ವನ ಹೇಳಿ ಕೈಲಾದ ಸಹಾಯ ಮಾಡಲಿದ್ದಾರೆ ಎಂದರು.
ಈ ವೇಳೆ ನಗರಪಾಲಿಕೆ ಸದಸ್ಯರಾದ ಬಿ.ವಿ ಮಂಜುನಾಥ್, ಛಾಯಾದೇವಿ, ಗೀತಾಶ್ರೀ ಯೋಗಾನಂದ್, ಬಿಜೆಪಿ ಕೆ.ಆರ್ ಕ್ಷೇತ್ರದ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, ಬಿಜೆಪಿ ಪ್ರಮುಖರಾದ ಯೋಗಾನಂದ್, ಹರೀಶ್, ನವೀನ್, ಸಂತೋಷ್, ವೆಂಕಟೇಶ್, ಸುಭಾಷ್, ಗುರು, ಸಂತೋಷ್, ಪುರುಷೋತ್ತಮ, ವೆಂಕಟೇಶ್, ಪ್ರದೀಪ್, ನಾಗರಾಜ್, ಅಂಗಡಿ ಸೋಮಣ್ಣ, ಚಿನ್ಮಯ್, ಲೋಕೇಶ್ , ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು.