ಮೈಸೂರು: ಕೇದಾರನಾಥ್ ಕ್ಷೇತ್ರದಲ್ಲಿ  ಪ್ರತಿಷ್ಠಾಪಿಸಲುದ್ದೇಶಿಸಿರುವ  ಶ್ರೀ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿರುವ  ಮೈಸೂರಿನ ಶಿಲ್ಪಿ ಅರುಣ್ ಅವರನ್ನು ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಪದಾಧಿಕಾರಿಗಳು ಸನ್ಮಾನಿಸಿ, ಅಭಿನಂದಿಸಿದರು.

ಸರಸ್ವತಿಪುರಂನಲ್ಲಿರುವ ಶಿಲ್ಪ ಕಲಾ ಕೇಂದ್ರದಲ್ಲಿ  ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಅವರು 8ನೇ ಶತಮಾನದಲ್ಲಿ 32ನೇ ವರ್ಷದ ಜೀವಿತಾವಧಿಯಲ್ಲಿಯೇ ಕೇರಳದಿಂದ ಕಾಶ್ಮೀರದವರೆಗೆ ಬರಿಗಾಲಿನಲ್ಲೇ ಪರ್ಯಟನೆ ಮಾಡಿ ಭಾರತದಲ್ಲಿ ಹಿಂದೂ ಧರ್ಮ ಬಲಿಷ್ಠವಾಗಿ ಬೇರೂರುವಂತೆ ಮಾಡಿದ ಪ್ರಾತಃ ಸ್ಮರಣೀಯರಾದ ಶ್ರೀಶಂಕರಾಚಾರ್ಯರ ಐಕ್ಯಕ್ಷೇತ್ರವಾದ ಉತ್ತಾರಕಾಂಡದ ಕೇದರಾನಾಥ ಸನ್ನಿಧಿಯಲ್ಲಿ ಶಂಕರಚಾರ್ಯರ ಭವ್ಯಪ್ರತಿಮೆ ನಿರ್ಮಾಣವಾಗಲಿದ್ದು, ಈ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ರವರು ನಿರ್ಮಿಸುತ್ತಿರುವುದೇ ಮೈಸೂರಿಗರಿಗೆ ಹೆಮ್ಮೆಯ ವಿಚಾರವಾಗಿದೆ ಎಂದ ಅವರು ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ರವರು ಅನಾವರಣಗೊಳಿಸಲಿದ್ದಾರೆ. ಹಾಗೆಯೇ  ಶ್ರೀಶಂಕರರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ ಸ್ಥಾಪನೆ ಮಾಡುತ್ತಿರುವುದನ್ನು ಶ್ಲಾಘಿಸುವುದಾಗಿ ಹೇಳಿದರು.

ಈ ಸಂದರ್ಭ ಬ್ರಾಹ್ಮಣ ಯುವ ವೇದಿಕೆಯ ಉಪಾಧ್ಯಕ್ಷ  ಅಜಯ್ ಶಾಸ್ತ್ರಿ, ಸಂಘಟನಾ ಕಾರ್ಯದರ್ಶಿ ಜಯಸಿಂಹ ಶ್ರೀಧರ್, ರಂಗನಾಥ್, ಕೆ.ಆರ್.ಎಸ್ ಗ್ರಾಮ ಪಂಚಾಯತಿ ಸದಸ್ಯ ವಿಜಯ್ ಕುಮಾರ್, ಪ್ರಶಾಂತ್, ಶ್ರೀಕಾಂತ್ ಕಶ್ಯಪ್ ಇನ್ನಿತರರು ಇದ್ದರು.

By admin