ಪಾತಿ ಫೌಂಡೇಷನ್ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ‘ಸಂಕ್ರಾಂತಿಯ ಸುಗ್ಗಿ’ ಎಂಬ ಕಾರ್ಯಕ್ರಮ ವನ್ನು ಪೌರ ಕಾರ್ಮಿಕರು ಹಾಗೂ ಸಹಾಯಕ ಮಹಿಳೆಯರಿಗೆ ಸೀರೆ ,ಕೊಪ್ಪ ಬಳೆ,ಎಳ್ಳು ಬೆಲ್ಲ ,ಕುಂಕುಮ ಅರಿಶಿನ , ಬಾಗಿನ ನೀಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದರಾದ ಸಿ ಎಚ್ ವಿಜಯಶಂಕರ್ ಕಳೆದ 14ವರ್ಷದಿಂದ ನಿರಂತರವಾಗಿ ಸಂಕ್ರಾಂತಿಯ 1ದಿನ ಮುಂಚಿತವಾಗಿಯೇ ನಿರಾಶ್ರಿತರು ಹಾಗೂ ಪೌರ ಕಾರ್ಮಿಕರಿಗೂ ಬಾಗಿನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ,
ಸಂಕಷ್ಟ ಎದುರಿಸುವುದೇ ನಿಜವಾದ ಸಂಕ್ರಮಣ
ನಮ್ಮ ಜೀವನದಲ್ಲಿ ಸ್ಥಿತ್ಯಂತರಗಳಿಂದ ಸುಖ .ದುಃಖ ಸಂತೋಷ ಇದೆ ಇರುತ್ತದೆ.ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು. ಬರುವ ಸಂಕಷ್ಟಗಳನ್ನು ಎದುರಿಸುವುದೇ ನಿಜವಾದ ಸಕ್ರಮವಾಗಿದೆ ,
ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ನಾವು ಸದಾ ಸಿದ್ಧರಾಗಿರಬೇಕು. ಸಂಕ್ರಮಣವು ಸಂತೋಷ ಪಡುವ ಹಬ್ಬವಾಗಿದು .
ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕವಾಗಿ ಕಂಡು ಅದಕ್ಕೆ ಧಾರ್ಮಿಕ ಲೇಪನ ಕೊಟ್ಟಿದ್ದಾರೆ .ಸುಗ್ಗಿಯ ಸಂಭ್ರಮದ ಹಾಗೂ ಎಳ್ಳು ಬೆಲ್ಲದ ವಿಶೇಷತೆಯನ್ನು ಕನ್ನಡ ಸಾಹಿತ್ಯದಲ್ಲಿ ಸಂಕ್ರಮಣದ ಸೊಗಡನ್ನು ವೈವಿಧ್ಯಮಯವಾಗಿ ಬಿಂಬಿಸಲಾಗಿದೆ ಎಂದು ಹೇಳಿದರು
ನಂತರ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮಾತನಾಡಿ
ಸಂಕ್ರಾಂತಿ ಸಡಗರ ಕನ್ನಡ ಸಾಹಿತ್ಯದಲ್ಲಿ ವಿವಿಧ ಹಂತಗಳಲ್ಲಿ ಬಿಂಬಿತವಾಗಿದೆ. ಜನಪದರಂತೂ ತಮ್ಮ ಜೀವನಕ್ಕೂ .ಸಂಕ್ರಮಣಕ್ಕೆ ಅವಿನಾಭಾವ ಸಂಬಂಧ ಕಲ್ಪಿಸಿ ಕಾವ್ಯ ಕಟ್ಟಿ ಹಾಡಿದ್ದಾರೆ .
ಸುಗ್ಗಿಯ ಸಂಭ್ರಮದ ಹಾಗೂ ಎಳ್ಳು ಬೆಲ್ಲದ ವಿಶೇಷತೆಯನ್ನು ಕನ್ನಡ ಸಾಹಿತ್ಯದಲ್ಲಿ ಸಂಕ್ರಮಣದ ಸೊಗಡನ್ನು ವೈವಿಧ್ಯಮಯವಾಗಿ ಬಿಂಬಿಸಲಾಗಿದೆ .
ಸಂಕ್ರಾಂತಿ ಬದುಕಿನ ಬದಲಾವಣೆಯ ಪರ್ವ ಸಂಕ್ರಾಂತಿ ಕೇವಲ ಅದೊಂದು ಹಬ್ಬವಲ್ಲ ಬದಲಿಗೆ. ಅನೇಕ ಮೌಲ್ಯಗಳನ್ನು ಸಾರುವ ವಾಹಕವಾಗಿದೆ ಸೂರ್ಯ ತನ್ನ ದಿಕ್ಕನ್ನು ಬದಲಾವಣೆ ಮಾಡುವ ಮೂಲಕ .ಪ್ರಕೃತಿಯಲ್ಲಿ ಬದಲಾವಣೆ ಯಾಗುವುದರ ಜೊತೆಗೆ .ಮಾನವ ಬದುಕಿನ ಬದಲಾವಣೆಗೆ ತನ್ನದೇ ಆದ ಅನೇಕ ಮೌಲ್ಯಗಳನ್ನು ನೀಡುವ ಮೂಲಕ. ಪರಿವರ್ತನೆಯ ಸಾಧನದಂತೆ ಕಾರ್ಯ ಮಾಡುತ್ತದೆ ಎಂದು ಹೇಳಿದರು
ನಂತರ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ
ಭಾರತದ ಸಂಸ್ಕೃತಿ ಪರಂಪರೆ ಇಡೀ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡದೆ ನಮ್ಮದೇ ಆದ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ಈ ನಿಟ್ಟಿನಲ್ಲಿ ಹಬ್ಬಗಳನ್ನು ತನ್ನದೇ ಆದ ಮಹತ್ವ ಪಡೆದಿವೆ ಇಂತಹ ಹಬ್ಬಗಳು ಮೇರು ಸಂದೇಶಗಳನ್ನು ವಿಶ್ವಸಂಸ್ಥೆಗೆ ಮುಟ್ಟಿಸುವ ಕಾರ್ಯವಾಗಬೇಕೆಂದು ಆಶಯ ವ್ಯಕ್ತಪಡಿಸಿದರು,
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರಾದ ಸಿ ಎಚ್ ವಿಜಯಶಂಕರ್ ,ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ,ಪಾತಿ ಫೌಂಡೇಷನ್ ಅಧ್ಯಕ್ಷರಾದ ಎಂ ಡಿ ಪಾರ್ಥಸಾರಥಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಅಕ್ಕನ ಬಳಗ ಶಾಲೆಯ ಮುಖ್ಯಶಿಕ್ಷಕರಾದ ಸುಗುಣ, ಉದ್ಯಮಿ ಕುಮಾರ್ ಆರಾಧ್ಯ ,ಕಲಾವಿದರಾದ ಕೃಷ್ಣಮೂರ್ತಿ ,ಹರೀಶ್ ನಾಯ್ಡು, ಚಕ್ರಪಾಣಿ,ಶಿಕ್ಷಕರಾದ ಜಿ ಪುಷ್ಪಾವತಿ ,ಹಾಗೂ ಇನ್ನಿತರರು ಹಾಜರಿದ್ದರು

By admin