ಮೈಸೂರು: ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಕಲಾವಿದರ ಸಮೂಹ ವತಿಯಿಂದ  ವಿಶ್ವಸಂಗೀತ ದಿನಾಚರಣೆ ಅಂಗವಾಗಿ ಸಾಧಕರಿಗೆ ಸಂಗೀತ ‘ಕಲಾ ಸಾರಥಿ’ ಪ್ರಶಸ್ತಿ ಪ್ರದಾನ‌ ಮಾಡಲಾಯಿತು

ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಕಲಾಸಾರಥಿ ಪ್ರಶಸ್ತಿಯನ್ನು ವಿದ್ವಾನ್  ರಾಘವೇಂದ್ರ ಪ್ರಸಾದ್ (ತಾಳವಾದ್ಯ), ವಿದುಷಿ ಶೋಭಾ ರಾಘವೇಂದ್ರ (ಶಾಸ್ತ್ರೀಯ ಗಾಯನ ಗಮಕ ), ವಿದ್ವಾನ್ ರಘುನಾಥ್ (ತಬಲ ವಾದ್ಯ), ವಿದ್ವಾನ್ ಬಾಲಕೃಷ್ಣ (ಕೀಬೋರ್ಡ್) ವಿದ್ವಾನ್ ಹರೀಶ್ ಪಾಂಡವ (ಸ್ಯಾಕ್ಸೋಫೋನ್), ವಿದ್ವಾನ್ ಷಣ್ಮುಗ  (ಶಾಸ್ತ್ರೀಯ ಕೀಬೋರ್ಡ್)  ವರಲಕ್ಷ್ಮಿ (ಗಾಯಕಿ), ರುಚಿತಾ ರಾಜೇಶ್ (ಸುಗಮ ಸಂಗೀತ ಗಾಯಕಿ ) ಅವರು ಸ್ವೀಕರಿಸಿದರು.

ಇದೇ ವೇಳೆ ನಡೆದ  ಸಂಗೀತದಿಂದ ಆರೋಗ್ಯ ಕುರಿತಂತೆ ವಿಚಾರಮಂಥನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ  ಆರ್. ಚೆನ್ನಪ್ಪ ರವರು ಮಾತನಾಡಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗೆ ಹಲವಾರು ಆಸ್ತಿ ಭೂಮಿಗಳಿವೆ, ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಲಾವಿದರೇ ಆಸ್ತಿಯಿದ್ದಂತೆ. ಅವರನ್ನು  ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ, ಕೊರೊನಾ ಲಾಕ್ ಡೌನ್ ನಿಂದಾಗಿ  ಕಲಾಪ್ರದರ್ಶನಗಳು ಸ್ಥಗಿತವಾಗಿರಬಹುದು ಆದರೆ ಕಲಾವಿದನಲ್ಲಿ ಕಲಾಸಕ್ತಿ ಮತ್ತು ಕಲಾಸೇವೆ ನಿರಂತವಾಗಿದೆ. ಮೈಸೂರಿನಲ್ಲಿ 4500 ಕಲಾವಿದರಿದ್ದು ಅದರಲ್ಲಿ ವೃತ್ತಿಪರ ಕಲಾವಿದರು ಬಹಳಷ್ಟು ಮಂದಿ ಕಷ್ಟದಲ್ಲಿದ್ದಾರೆ, ಕನ್ನಡ ಸಂಸ್ಕೃತಿ ಇಲಾಖೆಯಿಂದ 3ಸಾವಿರ ರೂಗಳ ಆರ್ಥಿಕ ಪರಿಹಾರಧನ ನೀಡಲಾಗುತ್ತಿದೆ, ಮತ್ತು  ಕಲಾವಿದರ ಸಮಿತಿ ರಚಿಸಿ ಆಹಾರ ದಿನಸಿ ಕಿಟ್ ಮತ್ತು ಕೋವಿಡ್ ಶೀಲ್ಡ್  ಲಸಿಕೆ ಕೊಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು

ಆಕಾಶವಾಣಿ ಸಂಗೀತ ಸಂಯೋಜಕರಾದ ಪುಷ್ಪಲತಾ ರವರು ಮಾತನಾಡಿ ಮೈಸೂರು  ಆಕಾಶವಾಣಿ ಸಹಸ್ರಾರು ಕಲಾವಿದರಿಗೆ ಅವಕಾಶ ಕಲ್ಪಿಸಿದೆ ಅವರ ಪ್ರತಿಭೆಯನ್ನ ಮುಖ್ಯವಾಹಿನಿಗೆ ತಂದು ಪರಿಚಯಿಸಿದೆ. ಕನ್ನಡ ಸಂಸ್ಕೃತಿ ಇಲಾಖೆ ರಾಜ್ಯ ವಿಭಾಗ ಕಲಾವಿದರು ಮತ್ತು ಕಲಾಪ್ರಕಾರವನ್ನು ಗುರುತಿಸಿ ಕಲಾರಕ್ಷಣೆ ಯೋಜನೆ ರೂಪಿಸಬೇಕಿದೆ ಎಂದರು,

ಕರ್ನಾಟಕ ವಸ್ತುಪ್ರದರ್ಶನ ಅಧ್ಯಕ್ಷ  ಹೇಮಂತ್ ಕುಮಾರ್ ಗೌಡ ರವರು ಮಾತನಾಡಿ ಕೊರೊನಾ ಲಾಕ್ ಡೌನ್ ನಿಂದಾಗಿ ಕಲಾಪ್ರದರ್ಶನಗಳು ಸಮಾರಂಭಗಳು ಸ್ಥಗಿತವಾಗಿರುವ ಕಾರಣ ಹಲವಾರು ಕಲಾವಿದರು ತೊಂದರೆಯಲ್ಲಿರುವ ಸಮಸ್ಯೆಯನ್ನು ಪರಿಹರಿಸಲು 365 ದಿನಗಳು ನಿರಂತರ ವಸ್ತುಪ್ರದರ್ಶನ ನಡೆಯುವ ಯೋಜನೆಯಲ್ಲಿ ಕಲಾವಿದರ ಪ್ರದರ್ಶನಕ್ಕೆ ಒತ್ತು ಕೊಡಲಾಗುತ್ತಿದೆ, ಆನಲೈನ್ ಕಲಾಪ್ರದರ್ಶನ ಆಯೋಜಿಸಲು ಯೋಜನೆ ಚಿಂತಿಸಲಾಗುತ್ತಿದ್ದು ಆಕಾಶವಾಣಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು  ಕಲಾವಿದರ ಸಮೂಹ ಬಳಸಿ ವೇದಿಕೆ ವೇದಿಕೆ  ಮಾಡಿಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ, ಕರ್ನಾಟಕ ವಸ್ತುಪ್ರದರ್ಶನ ಮಾಜಿ ಅಧ್ಯಕ್ಷ  ಬಿಪಿ. ಮಂಜುನಾಥ್, ಹಿರಿಯ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಮೂಡ ಸದಸ್ಯರಾದ ನವೀನ್ ಕುಮಾರ್, ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಹಿರಿಯ ಕಲಾವಿದರಾದ ಅಂಬಾಪ್ರಸಾದ್, ಬನ್ನೂರು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷರಾದ ಮಹೇಂದ್ರಸಿಂಗ್ ಕಾಳಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಬಿಜೆಪಿ ಯುವ ಮುಖಂಡರಾದ ಲೋಹಿತ್, ಸುಚೀಂದ್ರ, ನವೀನ್, ಚಕ್ರಪಾಣಿ, ಜಗದೀಶ್, ಚೇತನ್ ಮುಂತಾದವರು ಇದ್ದರು

By admin