ಕ್ರಿ.ಶ.೧೯೫೧ನೆ ಇಸವಿ ಮೇ ತಿಂಗಳ ೮ನೇ ತಾರೀಖಿನಂದು ಮಲೆನಾಡಿನ ಐಸಿರಿ ಕುಂದಾಪುರದಲ್ಲಿ ಜನಿಸಿದರು ಕಾಶೀನಾಥ ಹಥ್ವಾರ ಎಂಬ ವಿಶೇಷ ವ್ಯಕ್ತಿ. ಅ-ಸಾಧಾರಣ ಕಲಾಕಾರ ಎನಿಸಿದ ಇವರಂಥ ಚಿತ್ರ್ಯೋದ್ಯಮಿ ಮತ್ತೊಮ್ಮೆ ಚಂದನವನದಲ್ಲಿ ದೊರಕುವುದು ಬಹಳ ವಿರಳ. ಏಕೆಂದರೆ ಇವರ ಪ್ರತಿಯೊಂದು ಸಿನಿಮಾ, ಅದರಲ್ಲಿನ ಪಾತ್ರಗಳು, ಇವರ ಅಭಿನಯ-ನಿರ್ಮಾಣ-ನಿರ್ದೇಶನ-ಕಥೆ-ಚಿತ್ರಕಥೆ-ಸಂಭಾಷಣೆ-ಹಾಡುಗಳ ಜತೆಗೆ

ಚಿತ್ರೀಕರಿಸುತ್ತಿದ್ದ ಸನ್ನಿವೇಷ ಹಾಗೂ ದೃಶ್ಯಾವಳಿಗಳು ಚೀಪ್-ಅಂಡ್-ಬೆಸ್ಟ್ ಆಗಿರುತ್ತಿತ್ತು?! ಅರ್ಥಗರ್ಭಿತವಾಗಿದ್ದು ನೈಜತೆಗೆ ಒತ್ತುಕೊಟ್ಟು ಸಹಜತೆಗೆ ಹತ್ತಿರವಾಗುವಂತಿತ್ತು! ಕ್ಲಾಸ್ ಮತ್ತು ಮಾಸ್ ಎರಡೂ ವಿಭಾಗದ ಪ್ರತಿಯೊಬ್ಬ ಪ್ರೇಕ್ಷಕನಿಗು ಸರಳವಾಗಿ ಅರ್ಥವಾಗುವಂತೆ ಇರುತ್ತಿತ್ತು. ಹಾಗಾಗಿ ಕಾಶಿನಾಥ್ ಸ್ಟೈಲ್, ಕಾಶಿನಾಥ್ ಪರ್ವ, ಕಾಶಿನಾಥ್ ಡಬ್ಬಲ್ ಮೀನಿಂಗ್ ಡೈಲಾಗ್, ಕಾಶೀನಾಥ್ ಟ್ರೆಂಡ್ ಮುಂತಾದ್ದು ಹುಟ್ಟಿಕೊಂಡವು. ಆಶ್ಚರ್ಯವೆಂದರೆ ಮೆಘಾ ಸ್ಟಾರ್ ಲೆವೆಲ್ ಅಲ್ಲದಿದ್ದರೂ ಒಟ್ಟಾರೆ ಕಾಶಿನಾಥ್ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದಂತೂ ನಿಜ! ಇವರನ್ನು ಕರ್ನಾಟಕದ ಭಾಗ್ಯರಾಜ್ ಎಂದೂ ಅಡ್ಡಹೆಸರಿಂದ ಕರೆಯಲಾಗುತ್ತಿತ್ತು ಎಂಬುದು ವಿಚಿತ್ರವಾದರೂ ಕಟುಸತ್ಯ?! ಈ ಅಪರೂಪದ ಕನ್ನಡದ ಕಟ್ಟಾಳು ತನ್ನ ಬೆಳವಣಿಗೆ ಜತೆಯಲ್ಲೇ ತನ್ನನ್ನು ನಂಬಿ ಬಂದವರ ಪ್ರತಿಯೊಬ್ಬರನ್ನೂ ಬೆಳೆಸಿದರು. ತಮ್ಮಲ್ಲಿದ್ದ ಕಲಾಪ್ರತಿಭೆಯ ಎಲ್ಲವನ್ನೂ ಅವರ ಶಿಷ್ಯವೃಂದಕ್ಕೆ ಧಾರಾಳವಾಗಿ ಧಾರೆ ಎರೆದರು. ಅಂಥ ಶಿಷ್ಯರಲ್ಲೊಬ್ಬರೆ ಸೂಪರ್‌ಸ್ಟಾರ್-ರಿಯಲ್‌ಸ್ಟಾರ್ ಉಪ್ಪಿ₨ಉಪೇಂದ್ರ.


೧೯೬೩ರಲ್ಲಿ ತೆರೆಕಂಡ ರಾಜ್‌ಕುಮಾರ್-ಸಾಹುಕಾರ್‌ಜಾನಕಿ ಅಭಿನಯದ’ಗೌರಿ’ಫ಼ಿಲಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ. ಹಾಗೂ ಹೀಗೂ ಏಗುತ್ತಲೇ ಅವರ ೪೦ವಯಸ್ಸು ದಾಟಿದನಂತರ ’ಹೀರೋ’ ಆದವರು ಇದೂ ಸಹ ಚಂದನವನ ಚರಿತ್ರೆಯಲ್ಲಿ ನೂತನ ದಾಖಲೆ. ರೀಮೇಕ್ ರಾಜ ಎಂಬ ಬಿರುದು ಅಂಟಿಕೊಳ್ಳಲು ಕಾರಣವೂ ಇತ್ತು. ತಮಿಳು ಚಿತ್ರರಂಗದ ವಿಶೇಷವಾಗಿ ಭಾಗ್ಯರಾಜ್ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್ ಮಾಡುವುದರಲ್ಲಿ ನಿಸ್ಸೀಮ ಎನಿಸಿದ್ದರು. ರವಿಚಂದ್ರನ್, ಸುದೀಪ್ ನಂತರದ ಹೆಚ್ಚು ರೀಮೇಕ್ ಕನ್ನಡ ಚಿತ್ರಗಳು ಇವರದ್ದಾಗಿತ್ತು. ಇದೇವೇಳೆ ಇವರ ಒರಿಜಿನಲ್ ಕನ್ನಡ ಕಥಾವಸ್ತುವಿನ ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೂ ರೀಮೇಕ್-ಡಬ್ ಆಗಿರುವುದು ಶ್ಲಾಘನೀಯ! ಇವರು ನಟಿಸಿದ ಕಟ್ಟಕಡೆಯ ಫ಼ಿಲಂ ದ್ವಾರಕೀಶ್ ನಿರ್ಮಾಣದ ’ಚೌಕ’. ಇದರಲ್ಲಿ ಕಾಶೀನಾಥ್‌ರ ಅಮೋಘ ಅಭಿನಯವು ಅವರ ಜೀವಿತಾವಧಿಯಲ್ಲೆ ಅತ್ಯುತ್ತಮ! ಅಷ್ಟು ಮನೋಜ್ಞವಾಗಿ ಹೃದಯಸ್ಮರ್ಶಿಯಾಗಿ ನಟಿಸಿದ್ದರು. ೧೨.ಎಂ.ಎಂ.ಮಧ್ಯರಾತ್ರಿ ಫ಼ಿಲಮ್‌ನಲ್ಲಿ ತಮ್ಮ ಪುತ್ರನನ್ನು ಹೀರೊ ಆಗಿಸಿ ಪರಿಚಯಿಸಿದ್ದರು. ಹಲವಾರು ರಾಜ್ಯ ರಾಷ್ಟ್ರ ಹಾಗೂ ಫ಼ಿಲಂಫ಼ೇರ್ ಪ್ರಶಸ್ತಿ ಇವರಿಗೂ ಲಭಿಸಿತ್ತು!


ಚಂದನವನ ಚರಿತ್ರೆಯಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಪರಿಚಯಿಸಿ ಜಾರಿಗೊಳಿಸಿದ ಮೊಟ್ಟಮೊದಲ ಕೀರ್ತಿ ಇವರದ್ದು?! ಶಕ್ತಿಗಿಂತಲೂ ಯುಕ್ತಿ ಗೆಲ್ಲುತ್ತದೆ ಮತ್ತು ಯುಕ್ತಿಗಿಂತಲೂ ಕು-ಯುಕ್ತಿ ಗೆದ್ದೇ ಗೆಲ್ಲುವುದೆಂಬ ಹೊಸತನ ಪ್ರತಿಪಾದಿಸುವ ಚಿತ್ರಗಳನ್ನು ಕೊಡುಗೆ ನೀಡಿದ ಸಕಲ ಕಲಾವಲ್ಲಭ! ಸಮಾಜದ ನೈಜ ಘಟನೆಗಳ ಆಧಾರದಿಂದ ಶ್ರೀಸಾಮಾನ್ಯನ ಜೀವನಕ್ಕೆ ಹತ್ತಿರದ ವಾಸ್ತವತೆಗೆ ಒತ್ತು ನೀಡುವಂಥ ಫ಼ಿಲಂಸ್‌ನ್ನು ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ, ಯಾವುದೆ ಮುಲಾಜಿಲ್ಲದೆ, ಎಂಥ ಕಾಂಪ್ರಮೈಸ್‌ಗೂ ಶರಣಾಗದೆ, ತಮ್ಮನ್ನು ಕನ್ನಡ ಬೆಳ್ಳಿತೆರೆಗೆ ಸಮರ್ಪಿಸಿಕೊಂಡ ಚಂದನವನದ ಮಹಾನ್ ವ್ಯಕ್ತಿ-ಶಕ್ತಿ ಇನ್ನಿಲ್ಲವಾದುದು ತುಂಬಲಾರದ ನಷ್ಟ?!

೧೮.೧.೨೦೧೮ರಂದು ಬೆಂಗಳೂರು ನಗರದಲ್ಲಿ ಪತ್ನಿ ಶ್ರೀಮತಿ ಚಂದ್ರಪ್ರಭ ಮತ್ತು ಇಬ್ಬರು ಮಕ್ಕಳನ್ನು ತೊರೆದು ಪಂಚ ಭೂತಗಳಲ್ಲಿ ಲೀನವಾದಾಗ ಕಾಶೀನಾಥ್ ಯುಗವು ಅಂತ್ಯವಾಯಿತು. ಇವರ ಪಟ್ಟಾಶಿಷ್ಯ ಉಪೇಂದ್ರರವರ ನವಯುಗ ಚಾಲ್ತಿಯಲ್ಲಿದ್ದು ಗುರುಗಳನ್ನು ನೆನಪಿಸಿಕೊಳ್ಳುವಂತೆ ಮಾಡಬಹುದು?! ರಸಿಕತೆ ಮತ್ತು ಶೃಂಗಾರದ ಸಿನಿಮಾಗಳ ಮೂಲಕವೂ ಸಾಮಾಜಿಕ ಸಂದೇಶ ಸಾರಬಹುದೆಂದು ರುಜುವಾತು ಪಡಿಸಿದ ಕಲಾಮನ್ಮಥನು ಹಣ-ಜನ, ಯಶಸ್ಸು-ಕೀರ್ತಿ, ಎಲ್ಲವನ್ನು ಸಂಪಾದಿಸಿದ್ದರು. ಇಂಥವರು ಅಕ್ಷರಶಃ ಅಜರಾಮರ!