ಕಾಶಿನಾಥ್ ಗರಡಿಯಲ್ಲಿ ಪಳಗಿದ ಮೊದಲಿಗರಾಗಿ ಗುರುವನ್ನು ಮೀರಿಸಿದ ಶಿಷ್ಯರೆನಿಸಿದರು. ರೀಮೇಕ್ ಚಿತ್ರಗಳನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಹಿಂದಿ ರೀಮೇಕ್:- ಉಪ್ಪಿದಾದಾ(ಮುನ್ನಾಭಾಯ್)ಎಂಬಿಬಿಎಸ್, ನಾಗರಹಾವು(ಬಾಜ಼ಿಗಾರ್), ಪ್ರೀತ್ಸೆ[ಢರ್] ಮುಂತಾದ ಹಲವು ಸಿನಿಮಾಗಳೂ ಸಕ್ಸಸ್ ಆದವು! ಹೀಗಿದ್ದರೂ ಜನಪ್ರಿಯತೆ ಗಳಿಸಿದ ಉಪ್ಪಿ ತನ್ನ ಪ್ರತಿಯೊಂದು ಚಿತ್ರದಲ್ಲು ವಿಶೇಷತೆ-ವಿಭಿನ್ನತೆ ನೀಡುತ್ತ ಯಶಸ್ಸನ್ನು ಸಾಧಿಸಿದ ಅಪರೂಪ ಚಿತ್ರೋದ್ಯಮಿ! ತಮ್ಮ ಎಕ್ಸ್‌ಟ್ರಾರ್ಡಿನರಿ ವ್ಯಕ್ತಿತ್ವದಿಂದ ವಿಶ್ವದ ಪ್ರಪ್ರಥಮ ಅರ್ಧಕ್ಷರದ ಫ಼ಿಲಂ ’ಶ್..!’ ನೀಡಿದ, ’ನಾನು’ ಮತ್ತು ’ನಾನವನಲ್ಲ’ [ವಿ]ಚಿತ್ರ ಪಾತ್ರಗಳನ್ನು ಸೃಷ್ಟಿಸಿದ ಚಿತ್ರ ಬ್ರಹ್ಮ?! ಕ್ರಿಯಾಶೀಲರಾಗಿ ಪಾಸಾದ ಆದರೆ ರಾಜಕೀಯವಾಗಿ ಫ಼ೇಲಾದ, ಇವರ ಬಹುತೇಕ ಚಿತ್ರಗಳು ಹಿಂದಿ, ತೆಲುಗು, ತಮಿಳು ಭಾಷೆಗೆ ’ಡಬ್/ರಿಮೇಕ್’ ಆಗಿವೆ. ೫೦ ವರ್ಷದ ಹಿಂದೆ ಎಂ.ಆರ್.ರಾಧ ನಟಿಸಿದ್ದ ರಕ್ತಕಣ್ಣೀರ್ ತಮಿಳು ಚಿತ್ರದ ರಿಮೇಕ್ ’ರಕ್ತಕಣ್ಣೀರು’? ಅದೃಷ್ಟವಶಾತ್ ಇದೂಸಹ ದಾಖಲೆ ಮಾಡಿತಾದರೂ ಕಥಾ ವಸ್ತು ಈಕಾಲಕ್ಕೆ ಅನ್ವಯವಾಗದೆ ಹಳಸಲು ಎನಿಸಿ ಅಭಿಮಾನಿಗಳಿಗೆ ನಿರಾಶೆಯಾಯ್ತು! ಇಷ್ಟಾದರೂ ಪ್ರಪಂಚದ ೫೦ ಉತ್ತಮ ನಿರ್ದೇಶಕರ ಲಿಸ್ಟಲ್ಲಿ! ಭಾರತದ ೧೭ಶ್ರೇಷ್ಠ ನಿರ್ದೇಶಕರಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ!ಈ ಕೀರ್ತಿ ಸಂಪಾದಿಸಿದ ಚಂದನವನದ ಏಕೈಕ ಡೈರೆಕ್ಟರ್-ಕಂ-ಆಕ್ಟರ್ ಎಂಬುದು ಕನ್ನಡಿಗರ ಹೆಮ್ಮೆ!\
ಉಪೇಂದ್ರ ನಟಿಸಿರುವ ಫಿಲಂಸ್
ಕ್ರ.ಸಂ. ಸಿನಿಮ ಕ್ರ.ಸಂ. ಸಿನಿಮ
೧ ಕುರುಬರಲಕ್ಕ/೧೯೮೧ ೨೬ ಮಸ್ತಿ
೨ ಅನಂತನಅವಾಂತರ ೨೭ ಲವಕುಶ
೩ ’ಶ್’ ೨೮ ಶ್ರೀಮತಿ
೪ ಆಪರೇಶನ್‌ಅಂತ ೨೯ ಬುದ್ಧಿವಂತ
೫ ಲವ್‌ಮಾಡಿನೋಡು ೩೦ ದುಬೈಬಾಬು
೬ ಎ ೩೧ ಸೂಪರ್
೭ ಉಪೇಂದ್ರ ೩೨ ಆರಕ್ಷಕ
೮ ಪ್ರೀತ್ಸೆ ೩೩ ಕಠಾರಿವೀರ ಸುರಸುಂದರಾಂಗಿ
೯ ಹೆಚ್‌ಟೂಓ ೩೪ ಗಾಡ್‌ಫ಼ಾದರ್
೧೦ ಮನಸಲ್ಲೂನೀನೇ ೩೫ ಕಲ್ಪನ
೧೧ ನಾಗರಹಾವು ೩೬ ಟೋಪಿವಾಲ
೧೨ ನಾನುನಾನೇ ೩೭ ಸೂಪರ್‌ರಂಗ
೧೩ ಹಾಲಿವುಡ್ ೩೮ ಓಂ[ಭಾಗ-೨]
೧೪ ಕುಟುಂಬ ೩೯ ಬ್ರಹ್ಮ
೧೫ ರಕ್ತಕಣ್ಣೀರು[ಕನ್ನಡ-ತೆಲುಗು] ೪೦ ಗೌರಿ
೧೬ ಗೋಕರ್ಣ ೪೧ ಶಿವಂ
೧೭ ಓಂಕಾರ ೪೨ ಉಪ್ಪಿ-೨
೧೮ ಗೌರಮ್ಮ ೪೩ ಕಲ್ಪನ-೨
೧೯ ನ್ಯೂಸ್ ೪೪ ಮುಕುಂದಮುರಾರಿ
೨೦ ಆಟೋಶಂಕರ್ ೪೫ ಉಪೇಂದ್ರ ಮತ್ತೆಬಾ
೨೧ ಅನಾಥರು ೪೬ ಐಲವ್‌ಯು[ನನ್ನೇಪ್ರೀತ್ಸೆ]
೨೨ ಉಪ್ಪಿದಾದಾ ಎಂಬಿಬಿಎಸ್ ೪೭ ನಾಗಾರ್ಜುನ
೨೩ ತಂದೆಗೆತಕ್ಕಮಗ ೪೮ ಹೋಮ್‌ಮಿನಿಸ್ಟರ್
೨೪ ರಜನಿ ೪೯ ಪ್ರೊಡಕ್ಷನ್ ನಂ.೧೦
೨೫ ಐಶ್ವರ್ಯ ೫೦ —–

ಕುಮಾರಕವಿ ಬಿ.ಎನ್.ನಟರಾಜ್
(೯೦೩೬೯೭೬೪೭೧) ಬೆಂಗಳೂರು