ಕನ್ನಡ ಚಿತ್ರರಂಗದ ಪ್ರಪ್ರಥಮ ’ಚಾಕ್ಲೆಟ್ ಬಾಯ್’ ಅವತ್ತಿನ ಕಾಲಕ್ಕೆ ಕಿರಿಯ ವಯಸ್ಸಿನ ಮುದ್ದು ನಟ! ’ಬಭ್ರುವಾಹನ’ ಚಿತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದು, ಒಂದು ಸನ್ನಿವೇಷದಲ್ಲಿ ಅರ್ಜುನನ ಪಾತ್ರ ಅಭಿನಯಿಸಿದ್ದ ಮೇರುನಟ ಡಾ.ರಾಜ್‌ರವರು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಪಾದ ಮುಟ್ಟಿ ನಮಸ್ಕರಿಸುವಾಗ ಬಹಳ ಮುಜುಗರಕ್ಕೆ ಒಳಗಾದ ರಾಮಕೃಷ್ಣರನ್ನು ಸ್ವತ: ಡಾ.ರಾಜ್ ಕುಮಾರ್‌ರವರೇ ಸಮಾಧಾನಪಡಿಸಿ ಪ್ರೋತ್ಸಾಹಿಸಿದ್ದರು! ’ರಂಗನಾಯಕಿ’ ಚಿತ್ರದಲ್ಲಿ ತಾಯಿ ಪಾತ್ರದಲ್ಲಿದ್ದ ಆರತಿಯ ಮಗನ ಪಾತ್ರ ಅಭಿನಯಿಸಿದ್ದರು. ಅದರಲ್ಲಿನ ’ಈಡಿಪಸ್ ನಾಟಕ’ದ ರಿ-ಹರ್ಸಲ್ ಸನ್ನಿವೇಶದಲ್ಲಿ (ತಾಯಿಯೆಂದು ತಿಳಿಯದೆ) ರಂಗನಾಯಕಿಯನ್ನೆ ಪ್ರೇಮಿಸಲು ಹೊರಟಾಗ, ಆರತಿಯಿಂದ ಕಪಾಳಕ್ಕೆ ಹೊಡೆಸಿಕೊಂಡು ಬುದ್ದಿ ಹೇಳಿಸಿ ಕೊಳ್ಳುವ ಮಗನ ಪಾತ್ರ ಅದ್ಭುತವಾಗಿದೆ! ’ಮಾನಸಸರೋವರ’ ’ತಾಯಿಯನುಡಿ’ ಬೆಳ್ಳಿಮೋಡಗಳು ’ಅಮೃತಘಳಿಗೆ’ ಮುಂತಾದ ಅನೇಕ ಚಿತ್ರಗಳಲ್ಲಿ ಇವರ ಪಾತ್ರ ಉತ್ತಮವಾಗಿದ್ದು, ಯಾವ ನಾಯಕನಟನಿಗೇನೂ ಕಡಿಮೆಯಿಲ್ಲದಂತೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ. ’ಪಡುವಾರಹಳ್ಳಿ ಪಾಂಡವರು’ ಚಿತ್ರವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ರಿ-ಮೇಕ್ ಆಯಿತು. ಹಿಂದಿ ಅವತರಣಿಕೆಯ ಚಿತ್ರದಲ್ಲೂ ರಾಮಕೃಷ್ಣರ ಪಾತ್ರವನ್ನು ಅವರಿಂದಲೆ ಮಾಡಿಸಲ್ಪಟ್ಟಾಗ ನಿರ್ಮಾಪಕಿ ಹೇಮಮಾಲಿನಿ ಅವರಿಂದ ’ಸೈ’ ಎನಿಸಿಕೊಂಡರು.’ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ಮಿಮಿಕ್ರಿ ಮಾಡುವ ವಿಕಟಕವಿಯ ಪಾತ್ರ. [ತಮಿಳಿನ ಕೆ.ಬಾಲಚಂದರ್‌ರವರ ’ಅವಳ್‌ಒರುತೊಡರ್‌ಕದೈ ಚಿತ್ರದಲ್ಲಿ ಕಮಲಹಾಸನ್ ನಿರ್ವಹಿಸಿದ್ದ] ಈ ಪಾತ್ರವನ್ನು ಯುವ ಕನ್ನಡ ನಟ ರಾಮಕೃಷ್ಣ ನಿರ್ವಹಿಸಿದಾಗ ಸ್ವಯಂ ಕಮಲ ಹಾಸನ್‌ರವರೆ ರಾಮಕೃಷ್ಣರಿಗೆ ಶಹಬ್ಬಾಸ್‌ಗಿರಿ ನೀಡಿ ಪ್ರೋತ್ಸಾಹ ನೀಡಿದ್ದರು. ರಾಮಕೃಷ್ಣ ಪೋಷಕ ಪಾತ್ರದಲ್ಲಿ ನೀಡಿದ ಅತ್ಯುತ್ತಮ ಅಭಿನಯಕ್ಕಾಗಿ ಹಲವಾರು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫ಼ಿಲಂ ಫ಼ೇರ್ ಪ್ರಶಸ್ತಿ, ಕನ್ನಡ ಚಿತ್ರ ರಸಿಕರ ಸಂಘದ ಪ್ರಶಸ್ತಿ ಹಾಗೂ ರಾಜ್ಯದಾದ್ಯಂತ ಅನೇಕ ಅಭಿಮಾನಿ ಸಂಘಗಳಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಮಕೃಷ್ಣ, ಇಂದಿಗೂ ಸಹ ಯiವುದೇ ಪಾತ್ರ ನೀಡಿದರೂ ಪ್ರಾಮಾಣಿಕತೆ, ಶ್ರದ್ಧೆ, ಆಸಕ್ತಿಯಿಂದ ನಿರ್ವಹಿಸುವ ಉತ್ತಮ ಕಲಾವಿದ. ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಡನೆ ಸುಖ ಜೀವನ ನಡೆಸುತ್ತಿದ್ದಾರೆ!ರಾಮಕೃಷ್ಣ ನಟಿಸಿದ ಫ಼ಿಲಂಸ್