ಅತ್ಯಂತ ತಳಮಟ್ಟದಿಂದ ತಮ್ಮ ಸಿನಿಮಾ ಜೀವನದ ಪಯಣ ಪ್ರಾರಂಭಿಸಿದ ಇವರು ಪಾದಾರ್ಪಣೆ ಮಾಡಿದ ಮೊಟ್ಟ ಮೊದಲ ಚಿತ್ರದಲ್ಲಿ ಮಾತ್ರವಲ್ಲ ಸುಮರು ೧೫ ಚಿತ್ರಗಳಲ್ಲಿ ಡೈಲಾಗೇ ಇರಲಿಲ್ಲ ಬದಲಿಗೆ ಕೇವಲ ೧೦/೧೨ ನಿಮಿಷದ ವಿಡಿಯೋ ಮಾತ್ರ ಇರುತ್ತಿತ್ತು.! ಇವರ ಹೈಟು, ವೈಟು, ಕಲರ್, ಫ಼ೇಸ್‌ಕಟ್, ಕಂಡ ಅನೇಕ ನಿರ್ಮಾಪಕ-ನಿರ್ದೇಶಕರು ವ್ಯಂಗ್ಯದಿಂದ ತಿರಸ್ಕಾರದಿಂದ ಕಡೆಗಣಿಸಿದ್ದುಂಟು, ಗೆಟ್ ಔಟ್ ಅಂದದ್ದೂ ಉಂಟು! ಆದರೂ ಎದೆಗುಂದದೆ, ಛಲದಂಕ ಮಲ್ಲನಂತೆ ವಿಕ್ರಮ-ಬೇತಾಳನಂತೆ ತನ್ನ ಗುರಿ ಮುಟ್ಟಲು ಬಹಳ ಕಠಿಣ ಪರಿಶ್ರಮ ಹಾಗೂ ಸತತ ಪ್ರಾಮಾಣಿಕ ಪ್ರಯತ್ನ ಪಟ್ಟು ಅತಿ ಶೀಘ್ರದಲ್ಲಿ ಹೀರೋ ಮಟ್ಟಕ್ಕೆ ವಿರಾಟನಂತೆ ಬೆಳೆದು ನಿಂತರು. ಯಾವುದೆ ಪಾತ್ರವನ್ನು ಕಡೆಗಣಿಸದೆ ಯಾರನ್ನೂ ನೋಯಿಸದೆ ಎಂಥ ಸಂದರ್ಭವನ್ನೂ ವೇಸ್ಟ್ ಮಾಡದೆ ಎಲ್ಲವ(ರ)ನ್ನೂ ಸದುಪಯೋಗ ಪಡಿಸಿಕೊಂಡ ಪ್ರತಿಭಾವಂತ ಕಲಾವಿದ. ನಮ್ಮಲ್ಲಿ ಅನೇಕ ನಟ-ನಟಿಯರು ಇದ್ದಾರೆ ಆದರೆ ಕಲಾವಿದರು ಮಾತ್ರ ಕೇವಲ ಬೆರಳೆಣಿಕೆಯಷ್ಟು!
ಚಂದನವನದ ಇತಿಹಾಸದಲ್ಲಿ ಹುಟ್ಟು ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ! ಅಂಥ ಮಹಾನ್ ಕಲಾವಿದರಲ್ಲಿ ಮೇರುನಟರಾದ ರಾಜ್‌ಕುಮಾರ್ ಉದಯ್‌ಕುಮಾರ್ ಕಲ್ಯಾಣ್‌ಕುಮಾರ್ ರತ್ನತ್ರಯರು. ವಿಷ್ಣುವರ್ಧನ್ ಅಂಬರೀಶ್ ಶಂಕರ್‌ನಾಗ್ ಅಗ್ರಗಣ್ಯರು. ಅನಂತನಾಗ್ ಶ್ರೀನಾಥ್ ರಾಜೇಶ್ ದಿಗ್ಗಜರು. ರವಿಚಂದ್ರನ್ ರಾಘಣ್ಣ ಶಿವಣ್ಣ ಅಪ್ಪು ಅತಿರಥ ಮಹಾರಥರು. ಇಂಥವರ ಸಾಲಿಗೆ ಸೇರದಿದ್ದರೂ ಪರವಾಯಿಲ್ಲ ಕೊನೆಯಪಕ್ಷ ಇವರೆಲ್ಲರ ನಂತರದ ಸ್ಥಾನವನ್ನು ಸ್ವಲ್ಪಮಟ್ಟಿಗಾದರೂ ಪಡೆಯಬೇಕೆಂಬ ಹಂಬಲದಿಂದ ಕಲಾತಪಸ್ಸು ಮಾಡುವುದರ ಜತೆಗೆ ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಕರ್ನಾಟಕ-ಕನ್ನಡಿಗರ ನಾಡು-ನುಡಿ-ನಡೆ ಬಗ್ಗೆ ಒಂದು ಸೋಲೊ ಅಥವ ಕೋರಸ್ ಗೀತೆ ಇದ್ದೇ ಇರುವಂತೆ ನಟಿಸುತ್ತ, ಆಮೂಲಕ ಕೋಟ್ಯಾಂತರ ಕನ್ನಡಿಗರ ಬೆಂಬಲ ಗಳಿಸಿ ಗಟ್ಟಿಯಾಗಿ ನಿಲ್ಲಬೇಕಾದರೆ ವರ್ಷಾನುಗಟ್ಟಲೆ ಸಾಧನೆ ಮಾಡಿದವರು ಜಗ್ಗೇಶ್! ತಾವು ಅಭಿನಯಿಸಿದ ಪ್ರತಿಯೊಂದು ಸಿನಿಮಾದ ಮೂಲಕ ಇಂಥವರ ಸಾಲಿಗೆ ಸೇರಬೇಕೆಂಬ ಹಂಬಲದಲ್ಲಿ ಸತತ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಲೆ ಬರುತ್ತಿರುವ ಅಪ್ಪಟ ಕನ್ನಡ ಕಲಾವಿದ ನವರಸನಾಯಕ ಜಗ್ಗೇಶ್.
ಇವರನ್ನು ಜೂನಿಯರ್ ರಜನೀಕಾಂತ್ ಎಂದೂ ಇವರ ಅಭಿಮಾನಿಗಳು ಗುರುತಿಸಿದ್ದಾರೆ. ಕನ್ನಡದ ಪ್ರಪ್ರಥಮ ಕಾಮಿಡಿ ಹೀರೋ ಎಂಬ ಹೆಗ್ಗಳಿಕೆ ಇವರದು?! ಕಾಂಟ್ರವರ್ಸಿ ಇಲ್ಲದ ಇವರ ಸಿನಿಮಾಗಳಲ್ಲಿ ಒಂದಾದರೂ ಸೋಶಿಯಲ್ ಮೆಸೇಜ್ ಇದ್ದೇ ಇರುವುದರ ಜತೆಗೆ ಇಡೀ ಕುಟುಂಬದವರು ಒಟ್ಟಾಗೆ ಕುಳಿತು ಎಂಜಾಯ್ ಮಾಡುವಂತೆ ಇರುತ್ತದೆ. ಇದೇ ಕಾರಣಕ್ಕೆ ಹಿಂದೂ- ಮುಸ್ಲಿಂ-ಕ್ರೈಸ್ತರಾದಿಯಾಗಿ ಎಲ್ಲವರ್ಗದ ಪ್ರೇಕ್ಷಕರು, ಆಬಾಲವೃದ್ಧರಾದಿ ಹಾಗೂ ಎಲ್ಲವಯಸ್ಸಿನ ಸ್ತ್ರೀ-ಪುರುಷರು ಇಷ್ಟಪಟ್ಟು ಜಗ್ಗೇಶ್ ಸಿನಿಮ ನೋಡುತ್ತಾರೆ. ಕ್ಲಾಸ್&ಮಾಸ್ ಪ್ರೇಕ್ಷಕರನ್ನು ಹೊಂದಿರುವ ಕನ್ನಡದ ಅಪರೂಪದ ಕಲಾವಿದ ಜಗ್ಗೇಶ್! ಅಹಂ ಇಲ್ಲದ ಸರಳ-ಸಜ್ಜನ ಜಗ್ಗೇಶ್‌ರಿಗೆ ಒಮ್ಮೆ ರಾಜಕುಮಾರ್ ’ನವರಸನಾಯಕ’ ಬಿರುದು ಅನ್ವರ್ಥವಾಗಿದೆ ಎಂಬ ಪ್ರಶಂಸೆ ನೀಡಿದ್ದುಂಟು! ಅಣ್ಣಾವ್ರ ಈ ಒಂದೇಬಿರುದು ಸಾವಿರಾರುಪ್ರಶಸ್ತಿ ಬಹುಮಾನಗಳಿಗೆ ಸರಿಸಮಾನ?!ಇತ್ತೀಚೆಗೆ ದೇಶದಸಂಸತ್ ರಾಜ್ಯಸಭಾ ಸದಸ್ಯರಾಗಿ ಚಂದನವನದ ಕಿರೀಟಕ್ಕೆ ಹೊನ್ನಗರಿ ತೊಡಿಸಿದ್ದಾರೆ. ಜಗ್ಗೇಶ್ ನಟಿಸಿದ ಫಿಲಂಸ್
೧ ಇಬ್ಬನಿ ಕರಗಿತು/೧೯೮೨ ೨೬ ರೋಲ್‌ಕಾಲ್ ರಾಮಕೃಷ್ಣ
೨ ಶ್ವೇತಗುಲಾಬಿ ೨೭ ಕಳ್ಳಮಳ್ಳ
೩ ಹೊಸನೀರು ೨೮ ರೌಡಿ & ಎಮ್‌ಎಲ್‌ಎ
೪ ಸಂಗ್ರಾಮ ೨೯ ಅರಣ್ಯದಲ್ಲಿ ಅಭಿಮನ್ಯು
೫ ರಣಧೀರ ೩೦ ಹಠಮಾರಿಹೆಣ್ಣು ಕಿಲಾಡಿಗಂಡು
೬ ಭೂಮಿ ತಾಯಾಣೆ ೩೧ ಸಿಂಧೂರತಿಲಕ
೭ ಸಾಂಗ್ಲಿಯಾನ ೩೨ ಸೋಲಿಲ್ಲದ ಸರದಾರ
೮ ರಣರಂಗ ೩೩ ಭಂಡ ನನ್ನ ಗಂಡ
೯ ಮಾಧುರಿ ೩೪ ಕನಸಿನರಾಣಿ
೧೦ ಯುದ್ಧಕಾಂಡ ೩೫ ತರ‍್ಲೆ ನನ್‌ಮಗ
೧೧ ಮನ್ಮಥರಾಜ ೩೬ ಸಾಹಸಿ
೧೨ ಪರಶುರಾಮ ೩೭ ಪೊಲೀಸ್‌ಫ಼ೈಲ್
೧೩ ಪೋಲಿಹುಡುಗ ೩೮ ಮೇಘಮಂದಾರ
೧೪ ರಾಜಯುವರಾಜ ೩೯ ಸೂಪರ್ ನನ್‌ಮಗ
೧೫ ಕೃಷ್ಣನೀಕುಣಿದಾಗ ೪೦ ಅಲ್ಲಿರಾಮಾಚಾರಿ ಇಲ್ಲಿಬ್ರಹ್ಮಚಾರಿ
೧೬ ರಣಭೇರಿ ೪೧ ಸರ್ವರ್ ಸೋಮಣ್ಣ
೧೭ ಅಜಯ್‌ವಿಜಯ್ ೪೨ ಬೊಂಬಾಟ್ ಹುಡುಗ
೧೮ ಕೆಂಪುಗುಲಾಬಿ ೪೩ ಗಡಿಬಿಡಿಗಂಡ
೧೯ ರಾಣಿಮಹಾರಾಣಿ ೪೪ ಗುಂಡನಮದುವೆ
೨೦ ಪ್ರತಾಪ್ ೪೫ ಶಿವಣ್ಣ
೨೧ ಚಾಲೆಂಜ್ ೪೬ ಊರ್ವಶಿಕಲ್ಯಾಣ
೨೨ ವರಗಳಬೇಟೆ ೪೭ ಬೇವುಬೆಲ್ಲ
೨೩ ಸುಂದರಕಾಂಡ ೪೮ ಮಿಲಿಟರಿ ಮಾವ
೨೪ ಕದನ ೪೯ ರೂಪಾಯಿ ರಾಜ
೨೫ ಸಿ.ಬಿ.ಐ.ಶಿವ ೫೦ ರಾಯರಮಗ
೫೧ ಭೈರವ ೯೧ ತೇಜ
೫೨ ಬೇಡ ಕೃಷ್ಣ ರಂಗಿನಾಟ ೯೨ ರಾಮಕೃಷ್ಣ
೫೩ ಇಂದ್ರನ ಗೆದ್ದ ನರೇಂದ್ರ ೯೩ ಹಾಸಿಗೆ ಇದ್ದಷ್ಟು ಕಾಲು ಚಾಚು
೫೪ ಪ್ರೇಮಸಿಂಹಾಸನ ೯೪ ಮಿಸ್ಟರ್‌ಬಕ್ರ
೫೫ ಬಲ್ ನನ್‌ಮಗ ೯೫ ಪಾಂಡವರು
೫೬ ಈಶ್ವರ್ ೯೬ ಹನಿಮೂನ್ ಎಕ್ಸ್‌ಪ್ರೆಸ್
೫೭ ಸೋಮ ೯೭ ಮಠ
೫೮ ಪಟ್ಟಣಕ್ಕೆ ಬಂದ ಪುಟ್ಟ ೯೮ ತೆನಾಲಿರಾಮ
೫೯ ಭಂಡ ಅಲ್ಲ ಬಹದ್ದೂರ್ ೯೯ ಗೋವಿಂದ ಗೋಪಾಲ
೬೦ ಅಳಿಯ ಅಲ್ಲ ಮಗಳಗಂಡ ೧೦೦ ಮನ್ಮಥ
೬೧ ರಂಗಣ್ಣ ೧೦೧ ಗಣೇಶ
೬೨ ಅಣ್ಣ ಅಂದ್ರೆ ನಮ್ಮಣ್ಣ ೧೦೨ ನೀಟಾಟ ನಾಬಿರ‍್ಲ
೬೩ ಅರ್ಜುನ್ ಅಭಿಮನ್ಯು ೧೦೩ ಕೋಡಗನ ಕೋಳಿ ನುಂಗಿತ್ತಾ
೬೪ ಜೈದೇವ್ ೧೦೪ ಧಿಮಾಕು
೬೫ ಮಾತಿನಮಲ್ಲ ೧೦೫ ಚಿಕ್ಕಪೇಟೆಸಾಚಾಗಳು
೬೬ ಮಾರಿಕಣ್ಣು ಹೋರಿಮ್ಯಾಗೆ ೧೦೬ ಚಮ್‌ಕಾಯಿಸಿ ಚಿಂದಿಉಡಾಯಿಸಿ
೬೭ ಯಾರೇನೀನುಚೆಲುವೆ ೧೦೭ ಎದ್ದೇಳುಮಂಜುನಾಥ
೬೮ ಜಗತ್ ಕಿಲಾಡಿ ೧೦೮ ಲಿಫ಼್ಟ್‌ಕೊಡ್ಲ
೬೯ ವೀರಣ್ಣ ೧೦೯ ಐತಲಕ್ಕಡಿ
೭೦ ದ್ರೋಣ ೧೧೦ ಡಬ್ಬಲ್‌ಡೆಕ್ಕರ್
೭೧ ಪಟೇಲ ೧೧೧ ದುಡ್ಡೇದೊಡ್ಡಪ್ಪ
೭೨ ಕುಬೇರ ೧೧೨ ಅವರ‍್ನ್‌ಬಿಟ್ಟು ಇವರ‍್ನ್‌ಬಿಟ್ ಅವರ‍್ಯಾರು
೭೩ ನನ್ನಾಸೆಯ ಹೂವೆ ೧೧೩ ಮರಣಮೃದಂಗ
೭೪ ಆಹಾ ನನ್ನ ಮದುವೆಯಂತೆ ೧೧೪ ಅಲ್ಲಿದೆ ನಮ್ಮನೆ ಇಲ್ಲಿಬಂದೆ ಸುಮ್ಮನೆ
೭೫ ಕಿಲಾಡಿ ೧೧೫ ಬಾಡಿಗಾರ್ಡ್
೭೬ ಮುಂದೈತೆ ಊರಹಬ್ಬ ೧೧೬ ಮಂಜುನಾಥ ಬಿ.ಎ.ಎಲ್.ಎಲ್.ಬಿ
೭೭ ಸುಲ್ತಾನ್ ೧೧೭ ಸಿ.ಐ.ಡಿ.ಈಶ
೭೮ ಜಿಪುಣ ನನ್ನಗಂಡ ೧೧೮ ಕೂಲ್‌ಗಣೇಶ
೭೯ ಶುಕ್ರದೆಸೆ ೧೧೯ ಅಗ್ರಜ
೮೦ ಜೋಡಿ ೧೨೦ ಸಾಫ಼್ಟ್‌ವೇರ್‌ಗಂಡ
೮೧ ಜಿತೇಂದ್ರ ೧೨೧ ಡವ್
೮೨ ಪ್ರೇಮರಾಜ್ಯ ೧೨೨ ವಾಸ್ತುಪ್ರಕಾರ
೮೩ ರುಸ್ತುಂ ೧೨೩ ನೀರ್‌ದೋಸೆ
೮೪ ಹಾಲುಸಕ್ಕರೆ ೧೨೪ ಮೇಲುಕೋಟೆಮಂಜ
೮೫ ವಂಶಕ್ಕೊಬ್ಬ ೧೨೫ ಮುಗುಳುನಗೆ
೮೬ ಮೇಕಪ್ ೧೨೬ ೮ಎಂ.ಎಂ.ಬುಲೆಟ್
೮೭ ಕಾಸುಇದ್ದೋನೆಬಾಸು ೧೨೭ ಕಾಳಿದಾಸ ಕನ್ನಡ ಮೇಷ್ಟ್ರು
೮೮ ಹುಚ್ಚನಮದುವೇಲಿ ಉಂಡೋನೆಜಾಣ ೧೨೮ ಪ್ರೀಮಿಯರ್‌ಪದ್ಮಿನಿ
೮೯ ಯಾರ್ದೋದುಡ್ಡು ಯಲ್ಲಮ್ಮನ್‌ಜಾತ್ರೆ ೧೨೯ ತೋತಾಪುರಿ
೯೦ ಆಗೋದೆಲ್ಲಾಒಳ್ಳೇದಕ್ಕೆ ೧೩೦ ಪ್ರೊಡಕ್ಷನ್‌ನಂ.೧?
ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು-೫೬೦೦೭೨