ದಿನಾಂಕ ೧೫ನೇ ನವೆಂಬರ್ ೧೯೧೫ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೇರುನಟಿ ಹಿರಿಯ ರಂಗ ಕಲಾವಿದೆ ಬಿ.ಜಯಮ್ಮನವರು ತಮ್ಮ ೯ನೆ ವಯಸ್ಸಿಗೆ ತಾರಾಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಟ ಆಡುತ್ತಾ ಪಾಠ ಕಲಿಯುವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ದೇಶದ ಅತ್ಯಂತ ಕಿರಿಯ ವಯಸ್ಸಿನ ಸರಸ್ವತೀಪುತ್ರಿ. ತಮ್ಮ ಹದಿನೈದನೆ ವಯಸ್ಸಿಗೆ ಮೂಕಿ ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪ್ರವೇಶ ಮಾಡಿದ ಮಹಾನ್ ಸಾಧಕರು. ಸಾವಕಾಶವಾಗಿ ವಿಧಿ ಲಿಖಿತದಂತೆ ನಟ-ನಿರ್ಮಾಪಕ-ನಿರ್ದೇಶಕ ಹಾಗೂ ವಿಖ್ಯಾತ ನಾಟಕರತ್ನ ಡಾ.ಗುಬ್ಬಿವೀರಣ್ಣ ಅವರನ್ನು ವಿವಾಹವಾದರು. ತಮ್ಮ ಕಲಾಸೇವೆಯನ್ನು ತಟಸ್ಥಗೊಳಿಸದೆ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡನ್ನೂ ಹೊಂದಿಸಿಕೊಂಡು, ಪತಿಯ ಕಡೆಯಿಂದಲೂ ಬೆಂಬಲ ಪ್ರೋತ್ಸಾಹ ದೊರಕಿಸಿಕೊಂಡು ಶ್ರೀಮತಿಯಾದ ನಂತರವೂ ಜಯಮ್ಮ ಹಲವಾರು ನಾಟಕ-ಸಿನಿಮಾಗಳಲ್ಲಿ ಅಪ್ರತಿಮ ಸಾಧನೆ ಗೈದರು. ಭಾರತದ ಆರುಭಾಷೆಯ ಚಿತ್ರರಂಗದಲ್ಲು ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ ಪ್ರಥಮ ಅಭಿನೇತ್ರಿ ಎಂಬ ಕೀರ್ತಿಗೆ ಭಾಜನರಾದರು ಜಯಮ್ಮನವರ ಮೊಟ್ಟಮೊದಲ ವಾಕ್[ಟಾಕೀ]ಚಿತ್ರ ಕನ್ನಡ ಭಾಷೆಯಲ್ಲಿ ತೆರೆಕಂಡ ಸದಾರಮೆ(೧೯೩೫). ಆದರೆ, ಇದಕ್ಕೂ ಮುನ್ನ ಎರಡು ಮೂಕಿಚಿತ್ರ [ಸೈಲೆಂಟ್ ಮೂವಿ]ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸಿನಿಮ ಹೀರೋಯಿನ್ ಆದ ನಂತರವೂ ತಮ್ಮ ಬಣ್ಣದ ಲೋಕದ ಭಾಗ್ಯದ ಬಾಗಿಲು ತೆರೆದ ರಂಗಭೂಮಿಯನ್ನು ಮರೆಯದೇ ಸದಾ ಋಣಿಯಾಗಿದ್ದರು. ಹಾಗಾಗಿ ನೂರಾರು ನಾಟಕದಲ್ಲಿ ಅಭಿನಯಿಸುವುದರ ಜತೆಜತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದರು. ಗುಬ್ಬಿ ವೀರಣ್ಣನವರ ಮೂವರು ಪತ್ನಿಯರಲ್ಲಿ ಒಬ್ಬರಾದ ಜಯಮ್ಮನವರ ಮೊಮ್ಮಕ್ಕಳು ಸಹ ಚಂದನವನದ ಖ್ಯಾತ ಕಲಾವಿದೆಯರು. ನಟಿ-ಹಿನ್ನೆಲೆಗಾಯಕಿ ಜಾನಪದ ತಜ್ಞೆ ರಂಗಾಯಣ-ನಾಟಕ ಕರ್ನಾಟಕ ಅಧಿಕಾರಿ ಬಿ.ಜಯಶ್ರೀ, ಹಿರಿಯ ನಟಿ ಬಿ.ಸುಂದರಶ್ರೀ ಹಾಗೂ ಬಿ.ಶಿವಶ್ರೀ (ಇವರ ಪುತ್ರ ಖ್ಯಾತ ನಟ-ನಿರ್ದೆಶಕ ಪ್ರೀತಮ್‌ಗುಬ್ಬಿ).
೧೯೮೦ರಲ್ಲಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯೆ [ಎಂಎಲ್‌ಸಿ] ಆಗಿಯೂ ಅಮೋಘ ಸೇವೆ ಸಲ್ಲಿಸಿದರು. ಕಲಾವಿದರ ಕುಟುಂಬದ ಪ್ರತಿಭಾವಂತ ಹಿರಿಯ ನಟಿ, ಹಿನ್ನೆಲೆಗಾಯಕಿ ಹಾಗೂ ರಾಜಕಾರಣಿ ಬಿ.ಜಯಮ್ಮನವರು ದಿನಾಂಕ ೨೦ನೇ ಡಿಸೆಂಬರ್ ೧೯೮೮ ರಂದು ತಮ್ಮ ೭೩ನೇ ವಯಸ್ಸಲ್ಲಿ ಬೆಂಗಳೂರಿನಲ್ಲಿ ವಿಧಿವಶರಾದರು.
ಬಿ.ಜಯಮ್ಮ ನಟಿಸಿದ ಚಿತ್ರಗಳು
ಕ್ರ.ಸಂ. ಫಿಲಂ ಹೆಸರು ಕ್ರ.ಸಂ. ಫಿಲಂ ಹೆಸರು
೧ ಹಿಸ್ ಲವ್ ಅಫ಼ೇರ್ : ಇಂಗ್ಲಿಷ್ ಸೈಲೆಂಟ್‌ಫ಼ಿಲಂ/೧೯೩೧ ೧೮ ಗುಮಾಸ್ತ [ತಮಿಳು]/೧೯೫೩
೨ ಹರಿಮಾಯ – ಮೂಕಿ ಚಿತ್ರ/೧೯೩೨ ೧೯ ಗುಣಸಾಗರಿ/೧೯೫೩
೩ ಸದಾರಮೆ/೧೯೩೫ ೨೦ ಅಣ್ಣ ತಂಗಿ /೧೯೫೮
೪ ಗುಲೇಬಾ ಕಾವಲಿ/೧೯೩೮ [ಪಂಜಾಬಿ ಮತ್ತು ಹಿಂದಿ] ೨೧ ಕರಪ್ಪುಕ್ಕರಸಿ [ತಮಿಳು]/೧೯೬ಂ
೫ ಸುಭದ್ರಾ/೧೯೪೧ ೨೨ ಮಾವನ ಮಗಳು/೧೯೬೫
೬ ಜೀವನ ನಾಟಕ/೧೯೪೨ ೨೩ ಬಾಲರಾಜನ ಕಥೆ/೧೯೬೫
೭ ಬರ್ತೃಹರಿ [ತ]/೧೯೪೪ ೨೪ ಪ್ರೇಮಮಯಿ/೧೯೬೬
೮ ಹೇಮರೆಡ್ಡಿ ಮಲ್ಲಮ್ಮ /೧೯೪೫ ೨೫ ಇಮ್ಮಡಿ ಪುಲಿಕೇಶಿ/೧೯೬೭
೯ ಸ್ವರ್ಗಸೀಮಾ [ತೆ]/೧೯೪೫ ೨೬ ಅಣ್ಣ ತಮ್ಮ/೧೯೬೮
೧೦ ಲವಂಗಿ [ತ]/೧೯೪೬ ೨೭ ಬೇಡಿ ಬಂದವಳು/೧೯೬೮
೧೧ ತ್ಯಾಗಯ್ಯ [ತೆ]/೧೯೪೬ ೨೮ ಮುಕ್ತಿ/೧೯೭೦
೧೨ ಬ್ರಹ್ಮರಥಂ [ತೆ]/೧೯೪೭ ೨೯ ನನ್ನ ತಮ್ಮ/೧೯೭೦
೧೩ ನಾಟ್ಯರಾಣಿ [ತ]/೧೯೪೯ ೩೦ ಸಾಕ್ಷಾತ್ಕಾರ/೧೯೭೧
೧೪ ಮಂಗಯರಕ್ಕರಸಿ [ತ]/೧೯೪೯ ೩೧ ಪುನರ್ಮಿಲನ/೧೯೭೭
೧೫ ರಾಜಾ ವಿಕ್ರಮ [ಕನ್ನಡ-ತ]/೧೯೫೦ ೩೨ ಮಿಥುನ/೧೯೮೦
೧೬ ಮಂತ್ರ ದಂಡಂ [ತೆ]/೧೯೫೧ ೩೩ ಸಾವಿರ ಮೆಟ್ಟಿಲು/೨೦೦೬
೧೭ ಕಾರ್ಕೋಟ್ಟೈ [ತ]/೧೯೫೪ ೩೪ ಬಂಧಮುಕ್ತ/೨೦೦೭

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨