ಬ್ರಿಟಿಷ್ ಆಡಳಿತವಿದ್ದ ಭಾರತದ ಮೈಸೂರು ಸಾಮ್ರಾಜ್ಯದ ಬೆಂಗಳೂರುಜಿಲ್ಲೆ ಚೆನ್ನಪಟ್ಟಣದ ಒಕ್ಕಲಿಗರ ಕುಟುಂಬದಲ್ಲಿ ದಿನಾಂಕ ೭ನೇ ಜನವರಿ ೧೯೩೮ರಂದು ಜನಿಸಿದರು. ಇವರ ಹುಟ್ಟುಹೆಸರು ಸರೋಜ. ಇವರ ತಂದೆ ಭೈರೇಗೌಡರು ಕೃಷಿ ಕುಟುಂಬದ ರೈತನಾದರೂ ಮೈಸೂರಿನ ಪೊಲೀಸ್ ಇಲಾಖೆ ಉದ್ಯೋಗಿ, ತಾಯಿ ಮಹಾಸಾಧ್ವಿ ಮಲ್ಲಮ್ಮ ಉರುಫ್ ರುದ್ರಮ್ಮ ಗೃಹಿಣಿ, ಆಗಿದ್ದರು. ಈ ಆದರ್ಶ ದಂಪತಿಗೆ ನಾಲ್ಕನೇ ಪುತ್ರಿಯಾಗಿದ್ದರು. ತಮ್ಮ ಮಗಳು ಉತ್ತಮ ಡ್ಯಾನ್ಸರ್-ಕಂ-ಪದವೀಧರೆ ಆಗಬೇಕೆಂಬುದು ಭೈರಪ್ಪನವರ ಮಹದಾಸೆ ಆಗಿತ್ತು. ಬಾಲ್ಯದಿಂದಲೂ ಬಲುಚೂಟಿ, ಧೈರ್ಯಶಾಲಿ ಹಾಗೂ ಬುದ್ಧಿವಂತೆ ಆಗಿದ್ದ ಸರೋಜಾ ತಮ್ಮ ಕುಟುಂಬದ ಒಳಗೆ ಮತ್ತು ಹೊರಗೆ ಎಲ್ಲರ ಅಚ್ಚುಮೆಚ್ಚಿನ ಹುಡುಗಿಯಾಗಿದ್ದಳು. ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಚಟುವಟಿಕೆಯಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಗೆಯಲ್ಲೂ ಮುಂದಿದ್ದರು, ವಿಶೇಷವಾಗಿ ಸ್ನೇಹಜೀವಿ ಮತ್ತು ಸಂಘಜೀವಿ ಎನಿಸಿದ್ದರು. ನೃತ್ಯ ಮತ್ತು ನಟನೆಗೆ ತಂದೆಯವರಿಂದಲೇ ಪೂರ್ಣ ಪ್ರೋತ್ಸಾಹ ದೊರಕಿತ್ತು ಆದರೆ ಇವರ ತಾಯಿಯವರಿಂದ ಯಾವುದೇ ಕಾರಣಕ್ಕು ಎಂಥ ಸಂದರ್ಭದಲ್ಲು ಈಜುಉಡುಗೆ, ಸ್ಲೀವ್‌ಲೆಸ್-ಟಾಪ್‌ಲೆಸ್ ಡ್ರೆಸ್ ಧರಿಸಲೇಬಾರದೆಂಬ ಖಡಕ್ ಕಟ್ಟಾಜ್ಞೆ ಇತ್ತು! ಹಾಗಾಗಿ ಬಿ.ಸರೋಜಾದೇವಿ ತಮ್ಮ ಇಡೀ ಜೀವನದಲ್ಲಿ ಒಮ್ಮೆಯೂ ತಾಯಿಯ ಆದೇಶವನ್ನು ಮೀರಲಿಲ್ಲ! ಇವರ ೧೨ನೇ ವಯಸ್ಸಿನಲ್ಲಿ ಇದ್ದಂಥ ಕಲಾಪ್ರತಿಭೆಯನ್ನು ಗುರುತಿಸಿದ ನಿರ್ಮಾಪಕ-ನಿರ್ದೇಶಕ ಬಿ.ಆರ್.ಕೃಷ್ಣಮೂರ್ತಿ ಕನ್ನಡ ಸಿನಿಮಾದ ಬಾಲನಟಿಯಾಗಿ ಅಭಿನಯಿಸುವ ಅವಕಾಶ ನೀಡಿದರೂ ನಯವಾಗಿ ತಿರಸ್ಕರಿಸಿದ್ದರು. 

 ೧೯೫೫ರಲ್ಲಿ ’ಆಷಾಢಭೂತಿ’ ಕನ್ನಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು.  ಬಳಿಕ ಕೆಲವೇ ತಿಂಗಳಲ್ಲಿ ತಮಿಳು-ತೆಲುಗು ಚಿತ್ರರಂಗಕ್ಕೂ ಡೈರೆಕ್ಟ್ ಹೀರೋಯಿನ್‌ಆಗಿ ಲಗ್ಗೆಇಟ್ಟರು. ತಮಿಳು ಚಿತ್ರರಂಗದ ಅತಿರಥ ಮಹಾರಥ ಎಂ.ಜಿ.ರಾಮಚಂದ್ರನ್[ಎಂಜಿಆರ್] ಶಿವಾಜಿಗಣೇಶನ್ ಜೆಮಿನಿಗಣೇಶನ್ ಚಿತ್ರಗಳಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದ ದಿಗ್ಗಜರಾದ ಎನ್.ಟಿ.ರಾಮರಾವ್  ಎ.ನಾಗೇಶ್ವರರಾವ್, ಕಾಂತಾರಾವ್, ಕೃಷ್ಣ ಮುಂತಾದವರೊಡನೆ ನಾಯಕಿನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಯಥೇಚ್ಛ  ಹಣ ಕೀರ್ತಿ ಜನಪ್ರಿಯತೆ ಗಳಿಸಿ ಅತ್ಯಂತ ಬ್ಯುಸಿ ಹೀರೋಯಿನ್‌ಆಗಿ ಮೆರೆಯುತ್ತ ದಕ್ಷಿಣ ಭಾರತದಲ್ಲಿ ತಮ್ಮದೇಆದ ವಿಶಿಷ್ಟ ಛಾಪು ಮೂಡಿಸಿ ಸತತ ೩೦ವರ್ಷಕಾಲ ಅವಿಶ್ರಾಂತ ದರ್ಬಾರ್ ನಡೆಸಿದರು. ಪದ್ಮಶ್ರೀ ಪದ್ಮಭೂಷಣ ಕಲಾಸರಸ್ವತಿ ಕರಪ್ಪುಕ್ಕರಸಿ ಕನ್ನಡತ್ತುಪೈಂಕಿಳಿ ಅಭಿನಯಸರಸ್ವತಿ ಅಭಿನಯಭಾರತಿ ಅಭಿನಯಕಾಂಚನಮಾಲ ತೊಪ್ಪುಲುಸುಂದರಿ ಸಲ್ಲಭಸುಂದರಿ ಮುಂತಾದ ಅನೇಕ ಪ್ರತಿಷ್ಠಿತ ಬಿರುದುಗಳನ್ನು ಪಡೆದರು. ಗ್ರಾಮೀಣ ಕನ್ನಡತಿಯಾಗಿ ಇಡೀ ಭಾರತವನ್ನೆ ಆಳಿದ ಏಕೈಕ ಚಲನಚಿತ್ರ ನಾಯಕನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಇದು ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆಯಾಯಿತು! 

    ಕಾಲಿವುಡ್ ತಮಿಳು ಚಲನಚಿತ್ರ ಪ್ರಪಂಚದಲ್ಲಿ ಹೊಸದಾದ ಚರಿತ್ರೆ ಬರೆದ ನಾಡೋಡಿಮನ್ನನ್ ಎಂಗವೀಟ್ಟುಪಿಳ್ಳೆ ಅನ್ಬೇವಾ ಬ್ಲಾಕ್ ಬಸ್ಟರ್ ಬಾಕ್ಸಾಫೀಸ್ ಸಿನಿಮಾಗಳು ಸೇರಿದಂತೆ ಬ್ಯಾಕ್‌ಟುಬ್ಯಾಕ್ ಒಟ್ಟು ೨೫ ಫಿಲಂಸ್ ಸಿಲ್ವರ್ ಜ್ಯುಬ್ಲಿ ಗೋಲ್ಡನ್ ಜ್ಯುಬ್ಲಿ ಆಚರಿಸಿದವು! ಈ ಎಲ್ಲಾ ಚಿತ್ರಗಳಲ್ಲಿ ಹೀರೋ-ಹೀರೋಯಿನ್ ಆಗಿದ್ದ ಎಂಜಿಆರ್-ಬಿ.ಸರೋಜಾದೇವಿ (ಜಯಲಲಿತ-ಎಂಜಿಆರ್ ಜೋಡಿಗೂ ಮುನ್ನ) ಕಾಂಬಿನೇಶನ್ ಪ್ರಖ್ಯಾತ ಜೋಡಿಯಾಗಿ ಸುಮಾರು ೨೦ವರ್ಷಕಾಲ ಧೂಳೆಬ್ಬಿಸಿದ್ದು ಇಂದಿಗೂ ನೂತನ ದಾಖಲೆ! ಡಾ.ರಾಜ್‌ಕುಮಾರ್ ಡಾ.ವಿಷ್ಣುವರ್ಧನ್ ಎಂಜಿಆರ್ ಶಿವಾಜಿಗಣೇಶನ್ ಎನ್.ಟಿ.ಆರ್. ಅಕ್ಕಿನೇನಿನಾಗೇಶ್ವರರಾವ್ ಮುಂತಾದ ಅನೇಕ ಅಪೂರ್ವ ದಿಗ್ಗಜ ನಟರು ವೈಯಕ್ತಿಕವಾಗಿಯೂ ಬಿ.ಸರೋಜಾದೇವಿ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ಹಾಗೂ ಗೌರವ ಇರಿಸಿಕೊಂಡಿದ್ದರು! ಸ್ವಯಂ ನಿರ್ಮಾಪಕಿಯು ಆಗಿದ್ದ ಸರೋಜಾದೇವಿ ೧೯೮೫ರಲ್ಲಿ ತಮ್ಮದೆ ನಿರ್ಮಾಣದ ಲೇಡೀಸ್ ಹಾಸ್ಟೆಲ್ ಚಿತ್ರ ತಯಾರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಬೆಂಗಳೂರಿನ ಫೇಮಸ್ ಸ್ಟಾರ್‌ಹೋಟೇಲ್‌ಗಳಲ್ಲಿ ಒಂದೆನಿಸಿದ್ದ ಶಿವಾಜಿನಗರ ಬಸ್ಟ್ಯಾಂಡ್ ಬಳಿಯ ಹೊಟೇಲ್-ಸ್ಟೇ-ಲಾಂಗರ್ (ಹೋಟೇಲ್ ಹರ್ಷ) ಮಾಲೀಕರಾಗಿದ್ದ ಇವರ ಪತಿ ಶ್ರೀಹರ್ಷ ನಿಧನರಾದ ಕಾರಣ ಸದರಿ ಫಿಲಂ ತಡವಾಗಿ ಬಿಡುಗಡೆಗೊಂಡಿತು?!        

ಎವರ್‌ಗ್ರೀನ್ ಕಿತ್ತೂರುಚೆನ್ನಮ್ಮ:-
ಕನ್ನಡ ಚಿತ್ರರಂಗದ ಕುಮಾರತ್ರಯರ ಜತೆ ನಟಿಸಿರುವುದಲ್ಲದೆ ಚಂದನವನದ ಬಹುತೇಕ ಎಲ್ಲ ಹೀರೋಗಳ ಚಿತ್ರಗಳಲ್ಲಿ ನಟಿಸಿರುವ ಇವರು ಅಭಿನಯಿಸಿದ ಹಲವಾರು ಎವರ್‌ಗ್ರೀನ್ ಸಿನಿಮಾಗಳಲ್ಲಿ ಪ್ರಮುಖ ಉದಾ:-ಕಿತ್ತೂರುಚೆನ್ನಮ್ಮ ಚಿತ್ರದಲ್ಲಿ ಬಿ.ಸರೋಜಾದೇವಿ ಅವರ ಅಮೋಘವಾದ ಅದ್ಭುತ ಅಭಿನಯವನ್ನುಕಂಡು ಆ ಕಾಲಕ್ಕೆ ಭಾರತದಲ್ಲಿ ನೆಲೆಸಿದ್ದ ಆಂಗ್ಲೋ-ಇಂಡಿಯನ್ ಕುಟುಂಬದವರು ಅವಾಕ್ಕಾದರು. ಹಾಗೂ ಗ್ರೇಟ್ ಬ್ರಿಟನ್ ದೇಶದ ರಾಜಾ-ರಾಣಿ-ಪ್ರಜೆಗಳು ಶಾಕ್ ಅಂಡ್ ಸ್ಟನ್ ಆದರಂತೆ. ಸಬ್‌ಟೈಟಲ್‌ಗೊಂಡು ಯೂರೋಪಿನ ೫ ರಾಷ್ಟ್ರಗಳಲ್ಲಿ ಕಿತ್ತೂರುಚೆನ್ನಮ್ಮ ಸಿನಿಮಾ ಪ್ರದರ್ಶನ ಕಂಡು ಹೊಸ ಇತಿಹಾಸ ಬರೆಯಿತು. ಲಂಡನ್ನಿನ ಬ್ಯಾಂಕ್ವೆಟ್ ಹಾಲ್‌ಗೆ ಬಿ.ಸರೋಜಾದೇವಿಯವರನ್ನು ರೆಡ್‌ಕಾರ್ಪೆಟ್ ಸ್ವಾಗತ ಮೂಲಕ ಅಂದಿನ ಬ್ರಿಟಿಷ್ ರಾಣಿ ಅಭಿನಂದಿಸಿ ಸನ್ಮಾನಿಸಿದ್ದು, ಬಳಿಕ ದಕ್ಷಿಣ ಆಫ಼್ರಿಕಾದ ನೆಲ್ಸನ್ ಮಂಡೇಲಾ ಸಹ ಬಿ.ಸರೋಜಾದೇವಿಗೆ ವಿಶೇಷ ಆಹ್ವಾನವನ್ನಿತ್ತು ಸನ್ಮಾನಿಸಿ ಬೀಳ್ಕೊಟ್ಟಿದ್ದು ಭಾರತದ ಸಿನಿಮಾ ಸುವರ್ಣ ಪುಟಗಳ ಇತಿಹಾಸವಾಯಿತು! ಅಮೆರಿಕ ದೇಶದ ಕನ್ನಡ ಸಂಘದವರು ’ಅಕ್ಕ’ ಸಮ್ಮೇಳನ ಮೊದಲ್ಗೊಂಡು ಅನೇಕ ಪ್ರತಿಷ್ಠಿತ ಸಭೆ ಸಮಾರಂಭಗಳಿಗೆ ಸರೋಜಾದೇವಿಯವರನ್ನು ಆಹ್ವಾನಿಸಿ ಸನ್ಮಾನ ನೀಡಿ ಗೌರವಿಸಿ ಬೀಳ್ಕೊಟ್ಟಿದ್ದಾರೆ.
ಇಂಥ ಪ್ರತಿಯೊಂದು ಅಪೂರ್ವ ಸಂದರ್ಭಗಳಲ್ಲಿ ಸರೋಜಾದೇವಿಯವರು ತಮ್ಮ ಸರಳ ಸಜ್ಜನಿಕೆಯ ಪ್ರತೀಕವಾಗಿ ಭಾರತ ಮತ್ತು ಕರ್ನಾಟಕದ ಸಂಸ್ಕೃತಿ ನಾಗರಿಕತೆಯ ಪ್ರತಿನಿಧಿಯಾಗಿ ಕಿಂಚಿತ್ ಅಹಂಕಾರವಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ:- ಇದು ಕನ್ನಡಿಗರಿಗೆ ಸಂದ ಗೌರವ ನನ್ನದೇನಿಲ್ಲ! ಅನವರತ ಕನ್ನಡತಿಯಾಗೆ ಉಳಿಯ ಬಯಸುವ ಐತಿಹಾಸಿಕ ರಾಜ್ಯದ ಮಹಾನ್ ದೇಶದ ಮೇರುನಟಿ ಸರೋಜಾದೇವಿಗೆ ನಿಸರ್ಗ ಮತ್ತು ಪರಿಸರದ ಬಗ್ಗೆ ಗಂಭೀರ ಚಿಂತನೆ. ರೈತ ಯೋಧ ಕನ್ನಡ ಕನ್ನಡಿಗರ ಬಗ್ಗೆ ಹೆಚ್ಚು ಕಾಳಜಿ. ಪ್ರಪಂಚದಾದ್ಯಂತ ವಿಹರಿಸಿದ್ದರೂ ಅನ್ಯಭಾಷೆ ಮತ್ತು ಅನ್ಯಜನರಿಗಿಂತಲೂ ಮಾತೃಭಾಷೆ ಮತ್ತು ಜನ್ಮಭೂಮಿಬಗ್ಗೆ ಹೆಚ್ಚು ಗೌರವಪ್ರೀತಿ. ಕನ್ನಡಭಾಷೆ ಕನ್ನಡಜನತೆಗೆ ಇವರ ಬೆಂಬಲ ಪ್ರೋತ್ಸಾಹ ಸಹಾಯ ಸಹಕಾರ ಅವರ್ಣನೀಯ. ಯಾವಾಗಲೂ ತಮ್ಮವರನ್ನು ಪ್ರೀತಿಸಿ ಗೌರವಿಸುವಂಥ ವಿಶಾಲ ಹೃದಯವಂತಿಕೆ ಇವರಲ್ಲಿರುವುದು ಕರುನಾಡಿಗೆ ಹೆಮ್ಮೆಯ ಸಂಗತಿ!
೨೫ ವರ್ಷ ಪರ್ಯಂತ ದಕ್ಷಿಣ ಭಾರತ ಚಲನಚಿತ್ರ ರಂಗದಲ್ಲಿ ಅದ್ವಿತೀಯವಾಗಿ ಮೆರೆದ ನಟಸಾಮ್ರಾಜ್ಞಿ! ಸರೋಜಾದೇವಿ ಕೃಷ್ಣಸುಂದರಿಯಾದರೂ ಸಿನಿಮಾ ಕಲಾವಿದೆಯಾಗಿ ಓರ್ವ ಕಳಾಪೂರ್ಣರು. ಈ ಅಭಿನಯಸರಸ್ವತಿ ರೂಪುಲಾವಣ್ಯ ಗಂಭೀರನಡೆನುಡಿ ಸರಳಸಜ್ಜನಿಕೆ ಗೌರವಘನತೆ ಪ್ರಶಸ್ತಿಬಹುಮಾನ ಬಿರುದುಸನ್ಮಾನ ಗೃಹಿಣಿಲಕ್ಷಣ ಕುಟುಂಬಹೊಣೆಗಾರಿಕೆ ಹಾಗೂ ಸಮಾಜಸೇವೆ ಎಲ್ಲದರಲ್ಲೂ ನಿರ್ಮಿಸಿದಂಥ ದಾಖಲೆಯನ್ನು ಇದುವರೆಗೆ ವಿಶ್ವ ಚಿತ್ರರಂಗದಲ್ಲಿ ಯಾರೂ ಸರಿಗಟ್ಟಲಾಗಿಲ್ಲ, ಭವಿಷ್ಯದಲ್ಲೂ ಇವರ ಸರಣಿ ದಾಖಲೆಗಳನ್ನು ಮುರಿಯುವುದು ಬಹುಶಃ ಸುಲಭ ಸಾಧ್ಯವಲ್ಲದಿರಬಹುದು?!
ಆಶ್ಚರ್ಯವಾದರೂ ಸತ್ಯ:- ಬ್ರಿಟನ್ ಸ್ಕಾಲರ್‌ಶಿಪ್ ಎಫ಼ಿಶಿಯಂಟ್ ಅಕ್ಯಾಡೆಮಿಶಿಯನ್ ಫ಼ಾರಿನ್ ರಿಟರ್ನ್ ಇಂಡಿಯನ್ ಪೊಲಿಟಿಕಲ್ ಸ್ಟಾಲ್‌ವಾರ್ಡ್ ಹ್ಯಾಂಡ್ಸಂ ಹಾಗೂ ವಿಖ್ಯಾತ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ರವರನ್ನು ವಿವಾಹವಾಗುವ ಸಂದರ್ಭ ಒಮ್ಮೆ ಮಾತ್ರ ಒದಗಿತ್ತು. ದೈವಲೀಲೆ ಯಂತೆ ೧೯೬೭ರಲ್ಲಿ ಬೆಂಗಳೂರಿನ ಪ್ರಖ್ಯಾತ ಉದ್ಯಮಿ ಶ್ರೀಹರ್ಷ ಅವರೊಡನೆ ಬಿ.ಸರೋಜಾದೇವಿ ವಿವಾಹವಾದರು. ಈದಂಪತಿಗೆ ಓರ್ವನೆ ಮಗ ಮಿಸ್ಟರ್ ಗೌತಮ್‌ರಾಮಚಂದ್ರ, ಇಬ್ಬರು ಹೆಣ್ಣುಮಕ್ಕಳು ಇಂದ್ರ ಮತ್ತು ಭುವನೇಶ್ವರಿ. ಸರೋಜಾದೇವಿಯು ಬೆಂಗಳೂರಿನ ತಮ್ಮ ಮನೆಯಲ್ಲಿ ಇವತ್ತಿಗೂ ತುಂಬು ಜೀವನ ನಡೆಸುತ್ತಿದ್ದಾರೆ. ಬಹಳ ವರ್ಷ ಗ್ಯಾಪ್ ನಂತರ ಇವರು ಅಭಿನಯಿಸಿದ ಕಟ್ಟಕಡೆಯ ಫ಼ಿಲಂ ಪುನೀತ್‌ರಾಜಕುಮಾರ್‌ಅಪ್ಪು ನಟಿಸಿದ ೨೦೧೯ರಲ್ಲಿ ರಿಲೀಸಾದ ನಟಸಾರ್ವಭೌಮ ಕನ್ನಡ ಚಿತ್ರ! ಇವರ ಮತ್ತೊಂದು ಆಶ್ಚರ್ಯವೆಂದರೆ ಭಾರತೀಯ ಚಲನಚಿತ್ರ ರಂಗದಲ್ಲಿ ಮಾತ್ರವಲ್ಲ ಪ್ರಪಂಚದ ಸಿನಿಮಾ ಲೋಕದಲ್ಲಿ ಇಂದು ಬದುಕಿರುವ ಅತ್ಯಂತ ಹಿರಿಯ ಕಲಾವಿದೆಯರಲ್ಲಿ ಇವರೂ ಒಬ್ಬ ಅಗ್ರಗಣ್ಯರು! ಸುಮಾರು ೬೦ ವರ್ಷ ಪರ್ಯಂತ ಚಲನಚಿತ್ರ ರಂಗದ ಮಹಾನ್ ಅಭಿನೇತ್ರಿಯಾಗಿ ಆರು ಭಾಷೆಗಳ ಒಟ್ಟು ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಭಿನಯ ಸರಸ್ವತಿ…..
ಡಾ.ಬಿ.ಸರೋಜಾದೇವಿ ಪಡೆದ ಪ್ರಶಸ್ತಿಗಳು:-
*೨೦೦೮-ರಾಷ್ಟ್ರಪತಿಗಳಿಂದ ಭಾರತ ಸರ್ಕಾರ ಜೀವಮಾನ ಸಾಧನೆಗೆ ನೀಡುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ.
*೧೯೯೨-ಪದ್ಮಭೂಷಣ, *೧೯೬೯-ಪದ್ಮಶ್ರೀ
*೨೦೦೯-ಡಾ.ರಾಜಕುಮಾರ್ ಸ್ಮರಣಾರ್ಥ ಜೀವಮಾನ ಸಾಧನೆಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ
*೨೦೦೯-ಎನ್.ಟಿ.ಆರ್.ಸ್ಮರಣಾರ್ಥ ಜೀವಮಾನ ಸಾಧನೆಗೆ ಆಂಧ್ರಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸಿ
*೨೦೦೯-ಕಲೈಮಾಮಣಿ : ತಮಿಳುನಾಡು ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ
*೨೦೦೧-ಎನ್.ಟಿ.ಆರ್.ರಾಷ್ಟ್ರ ಪ್ರಶಸ್ತಿ ಆಂಧ್ರಪ್ರದೇಶ ರಾಜ್ಯ ಸರ್ಕಾರದಿಂದ
*೧೯೯೩-ಎಂ.ಜಿ.ಆರ್. ಪ್ರಶಸ್ತಿ ತಮಿಳುನಾಡು ರಾಜ್ಯ ಸರ್ಕಾರದಿಂದ
*೧೯೮೮-ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರದಿಂದ
*೧೯೮೦-ಅಭಿನಂದನ ಕಾಂಚನಮಾಲ ಪ್ರಸಸ್ತಿ ಕರ್ನಾಟಕ ರಾಜ್ಯ ಸರ್ಕಾರದಿಂದ
*೧೯೬೫-ಅಭಿನಯ ಸರಸ್ವತಿ ಪ್ರಸಸ್ತಿ ಕರ್ನಾಟಕ ರಾಜ್ಯ ಸರ್ಕಾರದಿಂದ
*೧೯೬೯-ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ತಮಿಳುನಾಡು ರಾಜ್ಯ ಸರ್ಕಾರದಿಂದ
*೧೯೯೪-ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ
*೧೯೯೭-ಸಿನಿಮಾ ಎಕ್ಸ್‌ಪ್ರೆಸ್ ಜೀವಮಾನ ಸಾಧನೆ ಪ್ರಶಸ್ತಿ, ಚೆನ್ನೈ
*೨೦೦೩-ದಿನಕರನ್ ಪ್ರಶಸ್ತಿ ಸಕಲಕಲಾ ಪ್ರತಿಭಾಸಾಧನೆಗೆ
*೨೦೦೬-ವಿಜಯ್ ಅವಾರ್ಡ್: ತಮಿಳು ಸಿನಿಮಾಕ್ಕೆ ನೀಡಿದ ಅಮೂಲ್ಯ ಕೊಡುಗೆ
*೨೦೦೬-ಗೌರವ ಡಾಕ್ಟರೇಟ್ ಬೆಂಗಳೂರು ವಿಶ್ವವಿದ್ಯಾಲಯದಿಂದ
*೨೦೦೭-ರೋಟರಿ ಶಿವಾಜಿ ಅವಾರ್ಡ್, ಚೆನ್ನೈ
*೨೦೦೭-ಎನ್.ಟಿ.ಆರ್.ಪ್ರಶಸ್ತಿ:ಕರ್ನಾಟಕ ತೆಲುಗು ಅಕ್ಯಾಡೆಮಿ
*೨೦೦೯-ನಾಟ್ಯ ಕಲಾಧರೆ ಪ್ರಶಸ್ತಿ: ತಮಿಳುಸಿನಿಮಾರಂಗ ಭರತಕಲಾಚಾರ್, ಚೆನ್ನೈ
*೨೦೧೦ರಲ್ಲಿ ಪದ್ಮಭೂಷಣ ಬಿ.ಸರೋಜಾದೇವಿ ರಾಷ್ಟ್ರ ಪ್ರಶಸ್ತಿ ಬಿ.ಸರೋಜಾದೇವಿ ಸ್ಮರಣಾರ್ಥ ಪ್ರಶಸ್ತಿ ಸ್ಥಾಪಿತ: ಪ್ರತಿವರ್ಷವೂ ದೇಶದ ಚಲನಚಿತ್ರ-ನಾಟಕ-ಲಲಿತಕಲೆಗಳು ವಿಭಾಗದಲ್ಲಿ ಜೀವಮಾನ ಸಾಧನೆಗೆ ನೀಡಲಾಗುವ ಪ್ರಶಸ್ತಿಗೆ ಭಾಜನರಾದವರ ಉಧಾಹರಣೆ: ವೈಯಜಂತಿಮಾಲ, ಅಂಜಲಿದೇವಿ, ಜಯಂತಿ, ಅಂಬರೀಷ್ ಹಾಗೂ ಕೆ.ಜೆ.ಯೇಸುದಾಸ್, ಮುಂತಾದವರು.
ಡಾ.ಬಿ.ಸರೋಜಾದೇವಿ ನಟಿಸಿದ ಕನ್ನಡ ಚಿತ್ರಗಳು:-
ಆಷಾಢಭೂತಿ(೧೯೫೫) ಮಹಾಕವಿಕಾಳಿದಾಸ, ಶ್ರೀರಾಮಪೂಜಾ, ಕಚದೇವಯಾನಿ, ಕೋಕಿಲವಾಣಿ, ಪಂಚರತ್ನ, ಚಿಂತಾಮಣಿ, ಅಣ್ಣತಂಗಿ, ರತ್ನಗಿರಿರಹಸ್ಯ, ಭೂಕೈಲಾಸ, ಸ್ಕೂಲ್‌ಮಾಸ್ಟರ್, ಜಗಜ್ಯೋತಿಬಸವೇಶ್ವರ, ಕಿತ್ತೂರುಚೆನ್ನಮ್ಮ, ವಿಜಯನಗರದವೀರಪುತ್ರ, ದೇವಸುಂದರಿ,
ಅಮರಶಿಲ್ಪಿಜಕಣಾಚಾರಿ, ಬೆರೆತಜೀವ, ಮಲ್ಲಮ್ಮನಪವಾಡ, ಲಕ್ಶ್ಮಿಸರಸ್ವತಿ, ಪೂರ್ಣಿಮಾ, ತಂದೆಮಕ್ಕಳು, ಪಾಪಪುಣ್ಯ, ನ್ಯಾಯವೇದೇವರು,
ಶ್ರೀಕೃಷ್ಣರುಕ್ಮಿಣಿಸತ್ಯಭಾಮ, ಸಹಧರ್ಮಿಣಿ, ಚಾಮುಂಡೇಶ್ವರಿಮಹಿಮೆ, ಶ್ರೀನಿವಾಸಕಲ್ಯಾಣ, ಗೃಹಿಣಿ, ಶನಿಪ್ರಭಾವ, ಭಾಗ್ಯಜ್ಯೋತಿ, ಕಥಾಸಂಗಮ, ಚಿರಂಜೀವಿ, ಬಬ್ರುವಾಹನ, ಶ್ರೀರೇಣುಕಾದೇವಿಮಹಾತ್ಮೆ, ಭಾಗ್ಯವಂತರು, ದಾನಶೂರಕರ್ಣ, ನಮ್ಮಮ್ಮತಾಯಿಅಣ್ಣಮ್ಮ, ಗುರುಸಾರ್ವಭೌಮಶ್ರೀರಾಘವೇಂದ್ರಕರುಣೆ, ರುದ್ರನಾಗ, ಗುರುಭಕ್ತಿ, ತಾಯಿತಂದೆ, ಯಾರಿವನು, ಲೇಡೀಸ್‌ಹಾಸ್ಟಲ್, ಮಹಾಶಕ್ತಿಮಾಯೆ,
ಗುರು, ಭಲೇಚತುರ, ಎಮರ್ಜೆನ್ಸಿ, ಅನುರಾಗಸಂಗಮ, ಪುಟ್ಮಲ್ಲಿ, ಅಗ್ನಿಐ.ಪಿ.ಎಸ್, ಜನನಿಜನ್ಮಭೂಮಿ, ಮಂಗಳಸೂತ್ರ, ತಿಮ್ಮ, ಪ್ರಾರಂಭ,
ದಟ್ಟಕಾಡಿನಲ್ಲಿದಿಟ್ಟಮಕ್ಕಳು, ಸಾಮ್ರಾಟ್‌ಅಶೋಕ[ತೆ+ಕ?], ರಾಜ್‌ದಿಶೊಮ್ಯಾನ್, ನಟಸಾರ್ವಭೌಮ (೨೦೧೯)

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨

೮೪೨/೩೦.೩.೨೦೨೩