ಬೆಳಗಾವಿಯ ಅಚ್ಚ ಸ್ವಚ್ಚ ಕನ್ನಡಿಗ. ಕನ್ನಡ-ತೆಲುಗು-ತಮಿಳು-ಮಲಯಾಳಂ-ಹಿಂದಿ ; ಹೀಗೆ ಪಂಚ ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ಗಮ್ಮತ್ತಿನ ನಟ! ಅಬ್ಬಾಯಿನಾಯ್ಡು ನಿರ್ಮಾಣದ ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ. ಇವರ ಅತಿಯಾದ ಸ್ವಾಭಿಮಾನವನ್ನು ಗರ್ವ ಎಂದವರೂ ಇದ್ದಾರೆ. ಶ್ರದ್ಧೆ ಸಾಧನೆ ಹಾಗೂ ಗತ್ತಿನಿಂದ ಎಲ್ಲ ಬಗೆ ಪಾತ್ರವನ್ನು ಮೆಚ್ಚುವಂತೆ ನಿಭಾಯಿಸಿ ಎಲ್ಲ ಭಾಷೆಯನ್ನು ಕಲಿತು ಸ್ಪೀಡ್ ಡೈಲಾಗ್ ಡೆಲಿವರಿ ಮಾಡಬಲ್ಲ ಅಪರೂಪದ ನಟ! ವಿವಿಧಭಾಷಾ ಚಿತ್ರಕ್ಷೇತ್ರದಲ್ಲಿ ಯಶಸ್ವಿ ನಟ ಎನಿಸಿಕೊಂಡರು. ತಾಯಿಯಮಡಿಲಲ್ಲಿ ಹೊಸ ಇತಿಹಾಸ ಬರೆಯಿತು. ಇವರ ಅಭಿನಯ ಜೀವಮಾನ ಶ್ರೇಷ್ಠ ದರ್ಜೆಯದ್ದಾಗಿ ’ಶ್ರೇಷ್ಠ ಪೋಷಕ ನಟ’ ರಾಜ್ಯ ಪ್ರಶಸ್ತಿ ಲಭಿಸಿತು.
ತೆಲುಗು ಚಿತ್ರಗಳಲ್ಲೆ ಹೆಚ್ಚಾಗಿ ಅಭಿನಯಿಸಿದರೂ ಮಾತೃ ಭಾಷೆ ಮೇಲೆ ಒಲವು ಹಾಗೂ ಗೌರವ ಹೆಚ್ಚು. ದ್ವಾರಕೀಶ್ ನಿರ್ಮಾಣದ ಅದ್ಭುತ ಚಿತ್ರ ’ಆಫ಼್ರಿಕಾದಲ್ಲಿ ಶೀಲಾ’ ಹಿಂದಿಗೆ ಡಬ್ ಆದ ಪ್ರಪ್ರಥಮ ಕನ್ನಡ ಸಿನಿಮಾ! ಚಿತ್ರದ ಹೀರೋಯಿನ್ ಶಹೀಲಾಚಡ್ಡಾ ಪಕ್ಕಾ ಆಂಗ್ಲೋಇಂಡಿಯನ್! ಈ ಚಿತ್ರವು ಉತ್ತರ ಭಾರತದಲ್ಲಿ ನೂತನ ಬಾಕ್ಸಾಫ಼ೀಸ್ ರೆಕಾರ್ಡ್ ನಿರ್ಮಿಸಿತು! ಚಂದನವನದಲ್ಲಿ ’ಫ಼ಾಸ್ಟ್-ಕಂ-ಕರೆಕ್ಟ್’ ಡೈಲಾಗ್ ಡೆಲಿವರಿ ಮಾಡುವ ಮೊಟ್ಟಮೊದಲ ನಟ. ಪಂಚಭಾಷಾ ನಟನಾದ ಪ್ರಪ್ರಥಮ ಕನ್ನಡಿಗ! ೫ಭಾಷೆಯ ಒಟ್ಟು ೩೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚರಣ್‌ರಾಜ್‌ಗೆ ತಮ್ಮ ಮಾತೃಭಾಷೆ ಕನ್ನಡ ಚಿತ್ರಗಳಲ್ಲಿ ನಟಿಸುವುದೆಂದರೆ ಪಂಚಪ್ರಾಣ ಅಪಾರ ಒಲವು ಹಾಗೂ ವಿಶೇಷ ಆಸಕ್ತಿ! ತೆಲುಗಿನ ಖ್ಯಾತನಟ ಎ.ನಾಗೇಶ್ವರರಾವ್‌ರಿಂದ ಬಿರುದು ಪಡೆದ ಏಕೈಕ ಕನ್ನಡ ಕಲಾವಿದ! ಇತ್ತೀಚೆಗೆ ವಿಲನ್ ಪಾತ್ರವೂ ಸೇರಿದಂತೆ ಮುಖ್ಯ ಪೋಷಕ ನಟನಾಗಿ ಬಿಡುವಿಲ್ಲದೆ ಅಭಿನಯಿಸುತ್ತಿದ್ದಾರೆ. ಪ್ರತಿಷ್ಠಿತ ಫ಼ಿಲಂಫ಼ೇರ್ ಪ್ರಶಸ್ತಿ ಸೇರಿದಂತೆ ದ.ಭಾರತದ ವಿವಿಧ ರಾಜ್ಯಗಳ ಪ್ರಶಸ್ತಿ, ಬಹುಮನ ಗಳಿಸಿದ್ದಾರೆ!
ಚರಣ್‌ರಾಜ್ ನಟಿಸಿದ ಚಿತ್ರಗಳು
೧ ಆಶಾ/೧೯೮೩ ೮ ಬಾರ್ಡರ್
೨ ಮಾಫ಼ಿಯಾ ೯ ಡಾಲಿ
೩ ತಾಳಿಯಭಾಗ್ಯ ೧೦ ತಾಯಿಯಮಡಿಲಲ್ಲಿ
೪ ತಾಯಿಯಹೊಣೆ ೧೧ ತಾಯಿಯನುಡಿ
೫ ಮಾರುತಿಮಹಿಮೆ ೧೨ ಅಭಿಜಿತ್
೬ ಆಫ಼್ರಿಕಾದಲ್ಲಿಶೀಲಾ ೧೩ ಮಾರುತಿಮಹಿಮೆ
೭ ಹೃದಯಪಲ್ಲವಿ ೧೪ ಶ್ರಾವಣಸಂಜೆ
೧೫ ಹಾಂಕಾಂಗ್‌ನಲ್ಲಿ ಏಜೆಂಟ್‌ಅಮರ್ ೩೧ ಸೂರಪ್ಪ
೧೬ ಅಣ್ಣಯ್ಯತಮ್ಮಯ್ಯ ೩೨ ಪಾಪಿಗಳಲೋಕದಲ್ಲಿ
೧೭ ಕಮಿಶನರ್‌ನರಸಿಂಹ ೩೩ ಮಾಫ಼ಿಯಾ
೧೮ ರಾಜಾಹುಲಿ ೩೪ ಡ್ಯಾಡಿನಂಬರ್ ೧
೧೯ ನಮ್ಮೂರಯಜಮಾನ ೩೫ ಶ್ರೀರೇಣುಕಾದೇವಿ
೨೦ ಅಮ್ಮನಾಗಮ್ಮ ೩೬ ಒಂದಾಗೋಣಬಾ
೨೧ ರಾಜಕೀಯ ೩೭ ಗುಡ್ ಬ್ಯಾಡ್ ಅಗ್ಲಿ
೨೨ ಗಂಧದಗುಡಿ-ಭಾಗ೨ ೩೮ ಗಡೀಪಾರ್
೨೩ ಸಮರ ೩೯ ತಿರುಪತಿ
೨೪ ತವರಿನತೊಟ್ಟಿಲು ೪೦ ಮಿಸ್ಟರ್‌ತೀರ್ಥ
೨೫ ಗಾಡ್‌ಫ಼ಾದರ್ ೪೧ ಸ್ವಯಂಕೃಷಿ
೨೬ ದಾಯಾದಿ ೪೨ ಶಿಕಾರಿ
೨೭ ಅಣ್ಣಾವ್ರಮಕ್ಕಳು ೪೩ ರಾಜಾಹುಲಿ
೨೮ ಆತ್ಮ ೪೪ ರಥಾವರ
೨೯ ಮಹಾಭಾರತ ೪೫ ಪ್ರೊಡಕ್ಷನ್‌ನಂ.೫
೩೦ ಸಿ.ಬಿ.ಐ.ದುರ್ಗಾ ೪೭ –
ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು
