ಆಕಾಶವೆ ಬೀಳಲಿ ಮೇಲೆ ಚಿತ್ರಗೀತೆಯ ‘ನ್ಯಾಯವೇ ದೇವರು’ ಸಿನಿಮಾ ನೀಡಿದ ಮಹಾರಾಜ ಮೂವೀಸ್ ಮಾಲೀಕ. ಸ್ವಂತ ನಿರ್ಮಾಣ ಸಂಸ್ಥೆ ಮೂಲಕ 18 ಚಿತ್ರಗಳನ್ನು ಕನ್ನಡಿಗರಿಗೆ ನೀಡಿ ಚಂದನವನವನ್ನು ಶ್ರೀಮಂತಗೊಳಿಸಿದ ಚಿತ್ರೋದ್ಯಮಿ.1960-ಮತ್ತು 1970ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಹೀರೋಗಳಲ್ಲಿ ಪ್ರಮುಖ ನಾಯಕನಟ. 1964ರ ಹುಣಸೂರು ಕೃಷ್ಣಮೂರ್ತಿಯವರ ವೀರಸಂಕಲ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಂತರ ಒಂದೇಬಳ್ಳಿಯಹೂಗಳು,ಪಾತಾಳಮೋಹಿನಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದರು. ಹಲವಾರು ನಟ-ನಟಿಯರನ್ನು ಪರಿಚಯಿಸಿದ್ದು, ಉತ್ತಮ ಚಿತ್ರಗಳನ್ನು ತಯಾರಿಸಿದ್ದು, ಸ್ಮರಣೀಯ ಇತಿಹಾಸ. ಧನಪಿಶಾಚಿ, ಅಡ್ಡದಾರಿ, ಮೇಯರ್‍ಮುತ್ತಣ್ಣ, ಭೂತಯ್ಯನಮಗಅಯ್ಯು, ಮುಂತಾದ ಚಿತ್ರಗಳಲ್ಲಿ ಉತ್ತಮವಾಗಿ ನಟಿಸಿ ಪೋಷಕ ನಟರ ಕನಟರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದರು. ಹಲವಾರು ಪ್ರಶಸ್ತಿ ಮತ್ತು ಬಹುಮಾನ ಗಳಿಸಿದ್ದರು. 1934 ರಲ್ಲಿ ಜನಿಸಿದ ಬಿ.ಎಂ.ವೆಂಕಟೇಶ್ ಕನ್ನಡ ಚಿತ್ರರಂಗದ ಹೀರೋಗಳಲ್ಲಿ ಒಬ್ಬರು. ನಟ-ನಿರ್ಮಾಪಕ-ನಿರ್ದೇಶಕ-ಚಿತ್ರಕಥೆ ಹಾಗೂ ಕತೆ ರಚನೆಕಾರನಾಗಿ ಚಂದನವನದಲ್ಲಿ ಖ್ಯಾತಿ ಗಳಿಸಿದ್ದರು. ‘ಮಹಾರಾಜ ಮೂವೀಸ್’ ಮತ್ತು ‘ಮಮತಾ ಮೂವೀಸ್’ ಎಂಬ ಎರಡು ಸಿನಿಮಾ ನಿರ್ಮಾಣ ಸಂಸ್ಥೆಗಳ ಸಂಸ್ಥಾಪಕರಾಗಿ ಅನೇಕರಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನೋಪಾಯಕ್ಕೆ ನಿಸ್ವಾರ್ಥ ಒಡೆಯರಾಗಿ ಬಡವರಿಗೆ ದಾರಿದೀಪ ಆಗಿದ್ದರು.. ಮೂರು ದಶಕದ ಕಾಲ ಕನ್ನಡ ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಬಹುಮುಖ ಪ್ರತಿಭೆಯ ಮೇರುನಟ. ಈ ನಟ-ಕಂಠದಾನ ಕಲಾವಿದನ ಹಲವಾರು ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಬಿ.ಎಂ.ವಿ.ರವರು ದಿನಾಂಕ 17ನೇ ಮೇ 2011 ರಂದು ಬೆಂಗಳೂರಲ್ಲಿ ಸ್ವರ್ಗಸ್ಥರಾದರು.
ಬಿ.ಎಂ.ವೆಂಕಟೇಶ್ ನಟಿಸಿದ ಫಿûಲಂಸ್‍ಗಳು
ಕ್ರ. ಹೆಸರು
1 ವೀರಸಂಕಲ್ಪ/1964 21 ಮಣ್ಣಿನಮಗಳು
2 Post ಮಾಸ್ಟರ್ 22 ಭೂತಯ್ಯನ ಮಗ ಅಯ್ಯು
3 ಪಾತಾಳ ಮೋಹಿನಿ 23 ಮಯೂರ
4 ಶ್ರೀಕನ್ಯಕಾ ಪರಮೇಶ್ವರಿ ಕಥೆ 24 ಇದು ನಮ್ಮ ದೇಶ
5 ಮಮತೆಯ ಬಂಧನ 25 ತಬ್ಬಲಿಯು ನೀನಾದೆ ಮಗನೆ
6 ಶ್ರೀಪುರಂದರದಾಸರು 26 ತಪ್ಪಿದತಾಳ
7 ರಾಜಶೇಖರ 27 ಮಲ್ಲಿಗೆ ಸಂಪಿಗೆ
8 ಒಂದೇ ಬಳ್ಳಿಯ ಹೂಗಳು 28 ಗಣೇಶನ ಮಹಿಮೆ
9 ಧನಪಿಶಾಚಿ 29 ಗಂಡುಗಲಿ ರಾಮ
10 ಚಕ್ರತೀರ್ಥ 30 ಮಹಾಪುರುಷ
11 ಮಾತೆಯೇ ಮಹಾಮಂದಿರ 31 ವಿಜಯಖಡ್ಗ
12 ಅಡ್ಡದಾರಿ 32 ಶ್ರೀವೆಂಕಟೇಶ್ವರ ಮಹಿಮೆ
13 ಮೇಯರ್‍ಮುತ್ತಣ್ಣ 33 ಗಂಡ ಮನೆ ಮಕ್ಕಳು
14 ಮದುವೆ ಮದುವೆ ಮದುವೆ 34 ವೀರಪ್ಪನ್
15 ನಾಡಿನಭಾಗ್ಯ 35 ಹರಕೆಯ ಕುರಿ
16 ಕಣ್ಣೀರು 36 ಗಂಧದಗುಡಿ [ಭಾಗ-2]
17 ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ 37 ಜಾಜಿಮಲ್ಲಿಗೆ [ಕಂಠದಾನ]
18 ಸೇಡಿನಕಿಡಿ 38 ವಾಯುಪುತ್ರ [ಕಂಠದಾನ]
19 ನ್ಯಾಯವೇ ದೇವರು 39 ಸೂಪರ್ [ಕಂಠದಾನ]
20 ಜ್ವಾಲಾಮೋಹಿನಿ 40 ಶ್ರೀಕ್ಷೇತ್ರ ಆದಿಚುಂಚನಗಿರಿ [ಕಂಠದಾನ]
ಕುಮಾರಕವಿ ನಟರಾಜ್ 9036976471
ಬೆಂಗಳೂರು 560072