ಕರ್ನಾಟಕ ಮೂಲದ ಪಕ್ಕಾ ಕನ್ನಡ ಹುಡುಗ. ಇಡೀ ದೇಶದಲ್ಲಿ ಅದರಲ್ಲೂ ದ.ಭಾರತದಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟ ಎನಿಸಿದ ಪ್ರತಿಭಾನ್ವಿತ ಕಲಾವಿದ. ಕನ್ನಡ ಚಿತ್ರ(ನಾಟಕ)ರಂಗದ ಖ್ಯಾತ ಖಳನಟ ಶಕ್ತಿಪ್ರಸಾದ್ರ ಸುಪುತ್ರ, ಖ್ಯಾತನಟ ರಾಜೇಶ್ರ ಅಳಿಯ ಹಾಗೂ ಚಂದನವನದ ಹೀರೋಯಿನ್ ಆಶಾರಾಣಿಯವರ ಪತಿ! ಬಾಲನಟನಾಗಿ ಇವರ ಚೊಚ್ಚಲ ಸಿನಿಮಾ ‘ಸಿಂಹದಮರಿಸೈನ್ಯ’ ಶತ ದಿನೋತ್ಸವ ಆಚರಿಸಿತು! ಈ ಮಕ್ಕಳ ಫ಼ಿಲಂನಲ್ಲಿ ಕರಾಟೆ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡ ಹುಡುಗನನ್ನು ಕನ್ನಡದ ಬ್ರೂಸ್ಲೀ ಎಂದು ಬಿಂಬಿಸಿದರು. ಅರ್ಜುನ್ಸರ್ಜಾ ಅಭಿನಯಕ್ಕೆ ಶರಣಾದ ತಮಿಳು-ತೆಲುಗು ನಿರ್ಮಾಪಕ-ನಿರ್ದೇಶಕರು ಕಾಲಿವುಡ್ ಮತ್ತು ಟಾಲಿವುಡ್ನಲ್ಲಿ ನಂಬರ್-೧ ನಟನ ಪಟ್ಟ ಕಟ್ಟಿದರು. ದಕ್ಷಿಣ ಭಾರತದ ೩ ರಾಜ್ಯಗಳಲ್ಲೂ ಇವರ ಅಭಿಮಾನಿಗಳು ಹುಟ್ಟಿಕೊಂಡರು ಎಂಬುದು ಇತಿಹಾಸ.
ಕನ್ನಡ ಚಿತ್ರಗಳಿಗಿಂತಲೂ ಹೆಚ್ಚಾಗಿ ತಮಿಳು ಚಿತ್ರಗಳಲ್ಲೆ ನಟಿಸುವ ಮೂಲಕ, ಮೂಲತಃ ತಮಿಳ್ ಚಿತ್ರರಂಗದ ಸೂಪರ್ ಸ್ಟಾರ್ಗಳನ್ನು ಹಿಂದಿಕ್ಕಿದರು. ಕನ್ನಡ, ಹಿಂದಿ, ತಮಿಳು, ತೆಲುಗು, ಮುಂತಾದ ಭಾಷೆಗಳ ಸುಮಾರು ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟ ಎನಿಸಿದರು. ಹುಟ್ಟಿ ಬೆಳೆದ ಕರ್ನಾಟಕವನ್ನು ಮತ್ತು ಮಾತೃಭಾಷೆ ಕನ್ನಡವನ್ನು ಮರೆಯದ ಈ ಮಾಣಿಕ್ಯ ಆಗಾಗ್ಗೆ ಕನ್ನಡ ಚಿತ್ರದಲ್ಲು ನಟಿಸುತ್ತ ಭಾರತದ ಎಲ್ಲೆಡೆ ಕನ್ನಡಕಂಪನ್ನು ಹರಡುತ್ತ ಕೀರ್ತಿಶಿಖರ ಏರಿದ ಸರಳ-ಸಜ್ಜನ. ಫ಼ಿಲಂಫ಼ೇರ್ ಅವಾರ್ಡ್ ಸೇರಿದಂತೆ ವಿವಿಧ ರಾಜ್ಯಗಳ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ-ಬಹುಮಾನ ಪಡೆದಿರುವ ಕಲಾಸಾಮ್ರಾಟ! ೨೦೧೮ರಲ್ಲಿ ‘ವಿಸ್ಮಯ’ ಸಿನಿಮಾದ ಹೀರೋಯಿನ್ ಶ್ರುತಿಹರಿಹರನ್ರ “ಮೀ..ಟೂ” ಹಗರಣಕ್ಕೆ ಸಿಲುಕಿದ್ದಾಗಲೂ ಇಡೀ ಭಾರತದ ಅಭಿಮಾನಿ ಬಳಗ ಇವರ ಬೆಂಬಲಕ್ಕಿತ್ತು! ಅರ್ಜುನ್ ಸಂಬಂಧಿಗಳಾದ ಧ್ರುವಸರ್ಜ, ಚಿರುಸರ್ಜ, ಭರತ್ಸರ್ಜ ಕನ್ನಡ, ತೆಲುಗು, ತಮಿಳು, ಹಿಂದಿ, ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬರು ಐಶ್ವರ್ಯ ಈಗಾಗಲೆ ಕಾಲಿವುಡ್ ಮೂಲಕ ಫ಼ಿಲಂ ವರ್ಲ್ಡ್ಗೆ ಎಂಟ್ರಿ ಆಗಿದ್ದಾರೆ. ಸ್ಯಾಂಡಲ್ವುಡ್ಗೂ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ? ಕಾದುನೋಡೋಣ!