ಕಮಲ್‌ಹಾಸ್ಸನ್ 

ಮಲಯಾಳಂ ಮಾತೃಭಾಷೆಯ ಕಮಲ್‌ಹಾಸ್ಸನ್ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ೭.೧೧.೧೯೫೪ರಂದು ಜನಿಸಿದರು. ೧೯೬೦ರಲ್ಲಿ ಬಾಲನಟನಾಗಿ ತನ್ನ ಮೊದಲ ಫಿಲಂ ’ಕಳತ್ತೂರ್ ಕಣ್ಣಮ್ಮ ತಮಿಳು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ. ಕಾಲಕ್ರಮೇಣ ಕಾಲಿವುಡ್ನ ಖ್ಯಾತ ನಿರ್ದೆಶಕ ಕೆ.ಬಾಲಚಂದರ್ ಗರಡಿಯಲ್ಲಿ ಪಳಗಿದವರಲ್ಲಿ ಪ್ರಮುಖ ನಟನಾಗಿ ಅವರ ನಿರ್ಮಾಣ-ನಿರ್ದೇಶನದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ನಂತರ ಬಾಲಿವುಡ್‌ಗೂ ಎಂಟ್ರಿ ನೀಡಿ ಅಲ್ಲಿನ ಅತಿರಥ ಮಹಾರಥ ನಟರು ಮೆ[ಬೆ]ಚ್ಚುವಂತೆ ಅಭಿನಯಿಸಿದರು.

ಕೆ.ಬಾಲಚಂದರ್ ನಿರ್ದೇಶನದ ’ತಪ್ಪಿದತಾಳ’ ಕನ್ನಡ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸಿ ಕನ್ನಡಿಗರ ತನುಮನ ಗೆದ್ದರು. ಆದರೆ ಇದಕ್ಕೂ ಮುಂಚೆ ೧೯೭೭ರಲ್ಲಿ ತೆರೆಕಂಡ ಬಾಲುಮಹೇಂದ್ರ ನಿರ್ದೇಶನದ ಕೋಕಿಲ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್ಗೆ ಅಧಿಕೃತ ಎಂಟ್ರಿ ನೀಡಿದ್ದರು. ಕೆ.ಬಾಲಚಂದ್ರ ಇವರ ಗಾಡ್‌ಫಾದರ್ ಎಂದು ಹಲವಾರು ವೇದಿಕೆಗಳಲ್ಲಿ ಹತ್ತಾರು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ. ೧೯೭೫ರಲ್ಲಿ ರಿಲೀಸ್ ಆದ ’ಅಪೂರ್ವರಾಗಂಗಳ್’ ತಮಿಳು ಚಿತ್ರದ ಮೂಲಕ ಓರ್ವ ಅಧ್ಬುತ ಕಲಾವಿದನಾಗಿ ಎದ್ದು ಬಂದವರು ೩೫ ವರ್ಷಕಾಲ ಹಿಂದಿರುಗಿ ನೋಡಿದ್ದೇ ಇಲ್ಲ. ಭಾರತೀಯ ಚಿತ್ರರಂಗದ ೭ ಭಾಷೆಗಳ ಮತ್ತು ವಿದೇಶದ ೨ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಪ್ರಪಂಚದ ಖ್ಯಾತ ನಟರ ಸಾಲಿಗೆ ಸೇರಿದರು.

ಮೊದಲ ಪತ್ನಿ ವಾಣಿಗಣಪತಿಂiiನ್ನು ೧೯೭೮ರಲ್ಲಿ ಮದುವೆಯಾಗಿ ೧೯೮೮ರಲ್ಲಿ ಡೈವೋರ್ಸ್ ಪಡೆದರು. ದ್ವಿತೀಯ ಬಾರಿಗೆ ಬಾಲಿವುಡ್ ನಟಿ ಸಾರಿಕಾಠಾಕೂರ್‌ರನ್ನು ತಮ್ಮ ಎರಡನೆ ಪತ್ನಿಯನ್ನಾಗಿ ೧೯೮೮ರಲ್ಲಿ ವಿವಾಹವಾಗಿ ೨೦೦೪ರಲ್ಲಿ ಇವರಿಂದಲೂ ವಿವಾಹ ವಿಚ್ಚೇಚನ ಪಡೆದರು. ನಂತರ ೨೦೦೪-೨೦೧೬ವರೆಗೆ ದ.ಭಾರತದ ಖ್ಯಾತ ನಟಿ ಗೌತಮಿಯವರೊಡನೆ ವಾಸಿಸುತ್ತಿದ್ದರು?! ಸಧ್ಯಕ್ಕೆ ಇವರ ಇಬ್ಬರು ಹೆಣ್ಣು ಮಕ್ಕಳನ್ನು:-ಶ್ರುತಿಹಾಸ್ಸನ್ ಮತ್ತು ಅಕ್ಷರಹಾಸ್ಸನ್ ಚಿತ್ರರಂಗಕ್ಕೆ ಸೇರಿಸಿದ್ದಾರೆ.

ಕಮಲ್‌ಹಾಸ್ಸನ್ ಒಂದು ವಿಶೇಷ ವ್ಯಕ್ತಿತ್ವ ಉಳ್ಳ ಸಕಲ ಕಲಾ ವಲ್ಲಭ! ಇವರ ಬಗ್ಗೆ ಸವಿವರವಾಗಿ ಬರೆಯಲು ನೂರಾರು ಪುಟಗಳು ಸಾಲದು?! ಒಟ್ಟಾರೆ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಇವರು ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿಯನ್ನೂ ಸಹ ಕೆಲವು ಬಾರಿ ಪಡೆದಿದ್ದಾರೆ. ಭಾರತ ಸರ್ಕಾರದ ಪದ್ಮಶ್ರೀ ಮತ್ತು ಪದ್ಮಭೂಷಣ ಸೇರಿದಂತೆ ಅನೇಕ ರಾಜ್ಯಗಳ ಪ್ರಶಸ್ತಿಗಳನ್ನೂ ರಾಷ್ಟ್ರ-ಅಂತಾರಾಷ್ಟ್ರ ಮಟ್ಟದ ಪ್ರಶಸ್ತಿ ಮತ್ತು ಬಹುಮಾನವನ್ನೂ ಗಳಿಸಿದ್ದಾರೆ. ಇಷ್ಟಿದ್ದರೂ ಡಾ.ರಾಜಕುಮಾರ್ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ರಾಜ್‌ಕುಮಾರ್ ಅವರಿಂದ ತಾವು ಕಲಿಯುವುದು ಬಹಳಷ್ಟಿದೆ ಎಂದೂ ಅನೇಕ ವೇದಿಕೆಗಳಲ್ಲಿ ಹೇಳುತ್ತಿದ್ದರು. ಡಾ.ವಿಷ್ಣುವರ್ಧನ್ ಮತ್ತು ಡಾ.ಅಂಬರೀಷ್ ಬಗ್ಗೆಯೂ ಸ್ನೇಹ ಮತ್ತು ವಿಶ್ವಾಸ ಹೊಂದಿದ್ದರು.