ರಾಜ್‌ಕುಮಾರ್‌ರವರ ಐದಾರು ಚಿತ್ರಗಳಲ್ಲಿ ಅವರ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸುವ ಮೂಲಕ ಸ್ವಯಂ ಡಾ.ರಾಜ್ ಅವರ ಮುಕ್ತ ಕಂಠದಿಂದ ಪ್ರಶಂಸೆ ಮತ್ತು ಪ್ರೋತ್ಸಾಹ ಕಂಡ ಯುವನಟ. ಒಂದು ಕಾಲದಲ್ಲಿ ನಟಸಾರ್ವಭೌಮರ ಮುಖದೊಡನೆ ಇವರ ವರ್ಚಸ್ಸು-ಹೋಲಿಕೆ ಎಷ್ಟಿತ್ತೆಂದರೆ ಕೋಟ್ಯಾಂತರ ಚಲನಚಿತ್ರ ಪ್ರೇಕ್ಷಕರು ರಾಜ್ ಅಭಿಮಾನಿಗಳು ಅಣ್ಣಾವ್ರ ಮಗನ ಪಾತ್ರಕ್ಕೆ ಅಶೋಕ್ ಹೇಳಿ ಮಾಡಿಸಿದಂತಿದ್ದಾರೆ ಎಂದು ಹೊಗಳುತ್ತಿದ್ದರು.  ಮಗನ ಪಾತ್ರಗಳಿಂದಲೆ ಕ್ಲಿಕ್ ಆಗಿ ನಂತರದಲ್ಲಿ ಹೀರೋ, ೨ನೇಹೀರೋ, ಹೀರೋಅಣ್ತಮ್ಮ ಮುಂತಾದ ಹತ್ತುಹಲವು ರೀತಿಯ ವಿಬಿನ್ನ ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾದರು. ಕಾಲಕ್ರಮೇಣ ತಾವೆ ಪೋಷಕ ಪಾತ್ರಧಾರಿಯಾಗಿ ನಾಯಕನಟ-ನಟಿಯರಿಗೆ ತಂದೆ-ಮಾವ-ತಾತನಾಗಿ ನಟಿಸುತ್ತ ಸೈಎನಿಸಿಕೊಂಡರು.  ಎಸ್ಸಾರ್ ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿ ಭೇಷ್ ಎನಿಸಿಕೊಂಡ ಕಲಾವಿದರ ಪಟ್ಟಿಗೆ ಸೇರಿದರು. 

ರಂಗನಾಯಕಿ ಸಿನಿಮಾದ ಉದಾ.:- ನಟಿ ಆರತಿ ಮತ್ತು ನಟ ರಾಮಕೃಷ್ಣ ಇವರಿಬ್ಬರ ವಯಸ್ಸಿನಷ್ಟೆ ಅಥವ ಹೆಚ್ಚುಕಮ್ಮಿ ಅವರಿಬ್ಬರ ಸಮವಯಸ್ಕರಾಗಿದ್ದ ಅಶೋಕ್ ಈ ಚಿತ್ರದಲ್ಲಿ ನಟ ರಾಮಕೃಷ್ಣನ ತಂದೆ [ಆರತಿ ಗಂಡನ]ಪಾತ್ರದಲಿ ಅದ್ಭುತವಾಗಿ ನಟಿಸಿ ಸೈ ಎನಿಸಿ ಕೊಂಡಿದ್ದರು.  ಹೀರೋ/ಹೀರೋಯಿನ್ ತಂದೆ ಮಾವ ಅಣ್ಣ ತಮ್ಮ ರಾಜಕಾರಣಿ ಪೊಲೀಸ್ ಅಧಿಕಾರಿ ಮುಂತಾದ ಯಾವುದೆ ಪಾತ್ರವನ್ನು ಪ್ರಾಮಾಣಿಕವಾಗಿ ನಿಭಾಯಿಸುವಂಥ ಜನಪ್ರಿಯ ನಟ. ಅಶೋಕ್ ಇವತ್ತಿಗೂ ಎಲ್ಲರೊಡನೆ ಬೆರೆತು ಯಾವುದೆ ಗುಂಪುಗಾರಿಕೆ ರಾಜಕೀಯ ಮಾಡದೆ ಸೈಲೆಂಟಾಗಿರುವ ನಾನ್‌ಕಾಂಟ್ರವರ್ಸಿ/ಸ್ಕ್ಯಾಮ್‌ಲೆಸ್ ಸೆಲೆಬ್ರಿಟಿ?!  ಪ್ರಸ್ತುತ ಬೆಳ್ಳಿತೆರೆ ಮತ್ತು ಕಿರುತೆರೆ ಎರಡು ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುತ್ತ ಘನತೆ ಮತ್ತು ಸ್ವಾಭಿಮಾನ ಎರಡನ್ನೂ ಕಾಪಾಡಿಕೊಂಡಿರುವ ಪ್ರೌಢನಟ ತಮ್ಮ ಚಂದನವನ ಚರಿತ್ರೆಯ ಜೀವನದಲ್ಲಿ ಹಲವಾರು ಪ್ರಶಸ್ತಿ-ಬಹುಮಾನಗಳನ್ನು ಸಹ ಗಳಿಸಿದ್ದಾರೆ