ಗೆಂಡೆತಿಮ್ಮ ಲೋಕೇಶ್
ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ’ಸತಿ ಸುಲೋಚನ’ ಚಿತ್ರದ ಪ್ರಪ್ರಥಮ ನಾಯಕನಟ [ಹೀರೋ] ದಿವಂಗತ ಸುಬ್ಬಯ್ಯ ನಾಯ್ಡುರವರ ಪುತ್ರ. ಬಾಲ್ಯದಿಂದಲೂ ಇವರಿಗೆ ರಂಗಭೂಮಿ ಮತ್ತು ಸಿನಿಮಾ ರಂಗದ ಅನುಭವ ಹೆಚ್ಚು. ಇವರ ದೇಹದಲ್ಲಿ ಕಲಾಸರಸ್ವತಿಯ ರಕ್ತ ಹರಿಯುತ್ತಿರುವುದರಿಂದ ಇವರ ಇಡೀ ವಂಶವೇ ಕಲೆಗಾಗಿ ಹುಟ್ಟಿ, ಬದುಕಿ ಅಳಿದವರು ಎಂಬ ಕೀರ್ತಿ ಮತ್ತು ಯಶಸ್ಸು ಕನ್ನಡ ನಾಡಿನಲ್ಲಿ ನೆಲೆಯೂರಿದೆ.ಬಾಲನಟನಾಗಿ ಪ್ರಹ್ಲಾದಪಾತ್ರದಲ್ಲಿ ನಟಿಸಿದ ಪ್ರಪ್ರಥಮ ಚಿತ್ರ ಭಕ್ತಪ್ರಹ್ಲಾದ[೧೯೫೮] ಕಾಡು,ಕಾಕನಕೋಟೆ,ಪರಸಂಗದಗೆಂಡೆತಿಮ್ಮ ಸುಳಿ,ಎಲ್ಲಿಂದಲೋಬಂದವರು, ಭಕ್ತಸ್ರಿಯಾಳ ರಾಷ್ಟ್ರಪ್ರಶಸ್ತಿ-ರಾಜ್ಯಪ್ರಶಸ್ತಿ ವಿಜೇತ ಚಿತ್ರಗಳು. ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್‌ರ ಇಂಗ್ಲಿಷ್ ಕಾದಂಬರಿ ದಿಫ಼ೈನಾನ್ಸಿಯಲ್ ಎಕ್ಸ್‌ಪರ್ಟ್ ಆಧಾರಿತ ಚಿತ್ರ ಬ್ಯಾಂಕರ್‌ಮಾರ್ಗಯ್ಯ! ಭೂತಯ್ಯನಮಗಅಯ್ಯು, ನಿನಗಾಗಿನಾನು, ದೇವರಕಣ್ಣು, ಚಂದನದಗೊಂಬೆ, ರಾಮಾಚಾರಿ, ರಣಧೀರ, ಭೂಮಿಗೆಬಂದಭಗವಂತ, ಪಟ್ಟಣಕ್ಕೆಬಂದಪತ್ನಿಯರು, ಪ್ರೇಮಲೋಕ, ಮುಂತಾದ ಅನೇಕ ಚಿತ್ರಗಳು ಪ್ರತಿಷ್ಠಿತ ಫ಼ಿಲಂಫ಼ೇರ್, ರಾಜ್ಯ, ರಾಷ್ಟ್ರ ಪ್ರಶಸ್ತಿ ಗಳಿಸಿವೆ. ಹಲವಾರು ಚಿತ್ರಗಳಲ್ಲಿನ ವಿಶೇಷ/ವಿಶಿಷ್ಠ ಅಭಿನಯಕ್ಕಾಗಿ ಕ್ಲಾಸ್- ಮಾಸ್ ಪ್ರೇಕ್ಷಕರ ಮೆಚ್ಚುಗೆ ಜತೆಗೆ ಹಣ-ಕೀರ್ತಿ ಗಳಿಸಿ ದಕ್ಷಿಣ ಭಾರತದ ದಾಖಲೆ ನಿರ್ಮಿಸಿದವು!
ಇವರ ಚಿತ್ರಗಳು ಸಾಮಾನ್ಯವಾಗಿ ಹಲವು ವಿಶೇಷತೆ ಹೊಂದಿದ್ದು ಭಾರತದ/ವಿದೇಶದ ಭಾಷೆಗಳಿಗೆ ಡಬ್/ರೀಮೇಕ್ ಆಗಿರುತ್ತವೆ. ಇದೂ ಸಹ ಚಂದನವನದ ದಾಖಲೆ. ತಾರಾಜೋಡಿಗಳ ಅನೇಕ ಯಶಸ್ವಿ ದಂಪತಿಗಳಲ್ಲಿ ಶ್ರೀಮತಿ ಗಿರಿಜಾ ಮತ್ತು ಶ್ರೀ ಲೋಕೇಶ್ ಅವರದ್ದೂ ಒಂದು ಪ್ರಮುಖ ದಾಂಪತ್ಯ ಜೋಡಿ. ಇವರ ಪುತ್ರಿ ಪೂಜಾ ಲೋಕೇಶ್ ಸಹ ಉತ್ತಮ ನಟಿಯಾಗಿ ಕೆಲವಾರು ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಶ್ರೀಮತಿ ಗಿರಿಜಾಲೋಕೇಶ್ ದಂಪತಿಂii ಪುತ್ರ ಸೃಜನ್‌ಲೋಕೇಶ್ ಕೂಡಾ ’ಚೋಟಾ ಚಾಂಪಿಯನ್’ ಮಜಾ ವಿತ್ ಸೃಜಾ ’ಮಜಾ ಟಾಕೀಸ್’ ಮುಂತಾದ ಕಿರುತೆರೆ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಘನತೆವೆತ್ತ ಕಲಾವಂಶದ ಅಪ್ರತಿಮ ಅಪರೂಪದ ಹುಟ್ಟುಕಲಾವಿದ ಲೋಕೇಶ್ ತಮ್ಮ ೫೭ನೇ ವಯಸ್ಸಲ್ಲಿ ದಿ.೧೪.೧೦.೨೦೦೪ರಂದು ಬೆಂಗಳೂರಿನಲ್ಲಿ ದೈವಾಧೀನರಾದರು.
ಲೋಕೇಶ್ ನಟಿಸಿದ ಸಿನಿಮಾಗಳು:-


