ನೃತ್ಯಶಾಸ್ತ್ರದಲ್ಲಿ ಪಿ.ಎಚ್‌ಡಿ. ಡಾಕ್ಟರೇಟ್ ಪಡೆದು ಎಂಜಿನಿಯರಿಂಗ್ ಪದವಿ ಗಳಿಸಿದಂಥ ಮೊಟ್ಟಮೊದಲ ಕನ್ನಡ ಚಲನಚಿತ್ರ ನಟ ಶ್ರೀಧರ್! ಈ ಕೆಳಕಂಡ ಮೂರು ಮಹತ್ತರ ಕಾರಣದಿಂದಾಗಿ ಇವರು ಸ್ಯಾಂಡಲ್‌ವುಡ್ನ ಉತ್ತಮ ಕಲಾವಿದರ ಪಟ್ಟಿಗೆ ಸೇರಿದ್ದಾರೆ ಎನ್ನಬಹುದು!
ಮೊದಲನೆಯದಾಗಿ ದಕ್ಷಿಣ ಭಾರತದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪುರಸ್ಕೃತ ಖ್ಯಾತ ಎಸ್.ಆರ್.ಪುಟ್ಟಣ್ಣಕಣಗಾಲ್ ನಿರ್ದೇಶನದ ’ಅಮೃತಘಳಿಗೆ’ ಫ಼ಿಲಂನಲ್ಲಿ ಶ್ರೀಧರ್‌ರವರ ನಟನೆ ಬಗ್ಗೆ ಪ್ರತಿಷ್ಠಿತ ಪತ್ರಿಕೆಗಳು ಮತ್ತು ಚಲನಚಿತ್ರ ನಿಯತಕಾಲಿಕೆಗಳು ಉತ್ತಮ ಪ್ರತಿಕ್ರಿಯೆ, ವಿಮರ್ಶೆ ಹಾಗೂ ಪ್ರಶಂಸೆ ಪ್ರಕಟಿಸುವ ಮೂಲಕ ಉತ್ತಮ ಮತ್ತು ದೇಸದ ಉದ್ದಗಲಕ್ಕೂ ಪ್ರಚಾರ ಪಡಿಸಿದರು. ಅಲ್ಲದೆ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರವೆಂದು ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ದೊರಕಿದ್ದು ಟರ್ನಿಂಗ್ ಪಾಯಿಂಟ್?!
ಎರಡನೆಯದಾಗಿ ಡಾ.ರಾಜ್‌ಕುಮಾರ್ ಅಭಿನಯದ ’ಒಂದುಮುತ್ತಿನಕಥೆ’ ಚಿತ್ರದ ಅಭಿನಯದಿಂದ ಎಲ್ಲರ ಗಮನ ಸೆಳೆದರು. ’ಉದಯೋನ್ಮುಖ ನಕ್ಷತ್ರ’ ಎಂದು ರಾಜಣ್ಣನಿಂದ ಹೊಗಳಿಸಿಕೊಂಡರು. ಅನೇಕ ಚಿತ್ರಗಳು ಕೀರ್ತಿ ಮತ್ತು ಯಶಸ್ಸನ್ನು ತಂದು ಕೊಟ್ಟವು. ಶ್ರೀಧರ್ ಸಿನಿ ಜೀವನದಲ್ಲಿ ಮತ್ತೊಂದು ಮೈಲುಗಲ್ಲು ಎಂಬಂತೆ ’ಸಂತಶಿಶುನಾಳಷರೀಫ಼’ ಚಿತ್ರದ ಅಮೋಘ ಅಭಿನಯಕ್ಕೆ ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಹಾಗೂ ಫ಼ಿಲಂಫ಼ೇರ್ ಪ್ರಶಸ್ತಿಗಳು ದೊರಕಿ ಇವರನ್ನು ಜನಪ್ರಿಯತೆಯ ಶಿಖರ ಮುಟ್ಟಿಸಿತು. ಅಂದಹಾಗೆ ಈತನ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ! ಬಯಲುದೀಪ ಚಿತ್ರದಲ್ಲಿ ಇವರ ಸಂಗೀತದ ಮಾಸ್ತರ್ ಪಾತ್ರವಂತೂ ಪ್ರತಿಯೊಬ್ಬ ಸಂಗೀತ ವಿದ್ವಾಂಸರಾದಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿತು. ಇನ್ನು ’ಬೊಂಬಾಟ್‌ಹೆಂಡ್ತಿ’ ಸಿನಿಮಾದಲ್ಲಿ ಶ್ರೀಧರ್ ನಿರ್ವಹಿಸಿದ ’ಸ್ತ್ರೀ’ ಪಾತ್ರವನ್ನು [ಧೂಮಪಾನ ಮಾಡುವ ಸೀನ್] ಯಾರೂ ಎಂದೂ ಮರೆಯುವ ಹಾಗಿಲ್ಲ. ನಿಜವಾದ ಮಹಿಳೆಯರು ನಾಚುವಂತೆ ಮತ್ತು ಯುವತಿಯರು ಆಶ್ಚರ್ಯಪಡುವಂತೆ ಇತ್ತು!
ಮೂರನೆಯದಾಗಿ ಮತ್ತು ಕಡೆಯದಾಗಿ ಶ್ರೀಧರ್ ಎಂತಹ ಸಹೃದಯ ನಟನೆಂದರೆ, ಇವರಿಗೆ ದೊರೆತ ಅದ್ಯಾವುದೆ ಕ್ಯಾರೆಕ್ಟರ್ ಅನ್ನು ನಿಕೃಷ್ಟದಿಂದ ಕಾಣುತ್ತಿರಲಿಲ್ಲ. ಪ್ರತಿಯೊಂದು ಪಾತ್ರವನ್ನೂ ಗಂಭೀರವಾಗಿ ಸ್ವೀಕರಿಸಿ, ಶ್ರದ್ಧೆಯಿಂದ ಅಭಿನಯಿಸಿ, ಆಯಾ ಪಾತ್ರಕ್ಕೆ ನ್ಯಾಯವನ್ನು ಪರಿಪೂರ್ಣವಾಗಿ ದೊರಕಿಸಿ ಕೊಡುತ್ತಿದ್ದ ಪ್ರಾಮಾಣಿಕ ನಟ. ಇವರ ಸಮಕಾಲೀನ ಚಿತ್ರನಟರಲ್ಲಿ ಸದ್ದಿಲ್ಲದೆ ಹಣ ಮತ್ತು ಕೀರ್ತಿಯ ಗದ್ದುಗೆ ಏರಿದ ನಿಷ್ಠಾವಂತ ಕಲಾವಿದ!
೧ ಆಕ್ರಮಣ/೧೯೮೦ ೪೬ ಬಂಧಿ
೨ ಧರಣಿಮಂಡಲ ಮಧ್ಯದೊಳಗೆ ೪೭ ಪ್ರತಿಫಲ
೩ ಪ್ರಾಯ ಪ್ರಾಯ ಪ್ರಾಯ ೪೮ ಕೊಲ್ಲೂರು ಶ್ರೀಮೂಕಾಂಬಿಕಾ
೪ ಗಾಯತ್ರಿ ಮದುವೆ ೪೯ ಜೀವನ ಸಂಘರ್ಷ
೫ ಅಮೃತಘಳಿಗೆ ೫೦ ಚಿನ್ನಾರಿಮುತ್ತ
೬ ಇಂದಿನ ರಾಮಾಯಣ ೫೧ ಬೇವುಬೆಲ್ಲ
೭ ಭಯಂಕರ ಭಸ್ಮಾಸುರ ೫೨ ಪ್ರೊಫ಼ೆಸರ್
೮ ಪ್ರೀತಿವಾತ್ಸಲ್ಯ ೫೩ ಆಘಾತ
೯ ಆಶಾಕಿರಣ ೫೪ ಸಾಮ್ರಾಟ್
೧೦ ಬ್ರಹ್ಮಗಂಟು ೫೫ ಹಲೋಸಿಸ್ಟರ್
೧೧ ಬೀಗರಪಂದ್ಯ ೫೬ ಎದ್ದಿದೆಗದ್ದಲ
೧೨ ಹೆಣ್ಣಿನಕೂಗು ೫೭ ಜೀವನಮೈತ್ರಿ
೧೩ ಸುಂದರ ಸ್ವಪ್ನಗಳು ೫೮ ಸೌಭಾಗ್ಯದೇವತೆ
೧೪ ಮೌನಗೀತೆ ೫೯ ಮಾನಸವೀಣೆ
೧೫ ಸಂಸಾರದ ಗುಟ್ಟು ೬೦ ಹುಲಿಯಾ
೧೬ ಒಂದು ಮುತ್ತಿನ ಕಥೆ ೬೧ ಅರಿಶಿನ ಕುಂಕುಮ
೧೭ ಸತ್ವಪರೀಕ್ಷೆ ೬೨ ತವರಿನ ತೇರು
೧೮ ಭದ್ರಕಾಳಿ ೬೩ ಶ್ರೀಮತಿ
೧೯ ಜೀವನಜ್ಯೋತಿ ೬೪ ಸಿಂಧೂ
೨೦ ನ್ಯಾಯಕ್ಕೆಶಿಕ್ಷೆ ೬೫ ಇನ್ನೊಂದುಮುಖ
೨೧ ಆಸ್ಫೋಟ ೬೬ ಅತ್ತೆ ಮಗಳು
೨೨ ಹೃದಯಗೀತೆ ೬೭ ಶಾಂತಿ! ಶಾಂತಿ! ಶಾಂತಿ!
೨೩ ಬಿಸಿಲು ಬೆಳದಿಂಗಳು ೬೮ ಬಯಲುದೀಪ
೨೪ ಅಂತಿಂಥ ಗಂಡು ನಾನಲ್ಲ ೬೯ ಗ್ರಾಮದೇವತೆ
೨೫ ಲವ್ ಮಾಡಿ ನೋಡು ೭೦ ಬುದ್ಧಿವಂತ
೨೬ ಅಮೃತಬಿಂದು ೭೧ ಕಠಾರಿವೀರ ಸುರಸುಂದರಾಂಗಿ
೨೭ ಸಂತ ಶಿಶುನಾಳ ಷರೀಫ಼ ೭೨ ಕಾಲ್ಗೆಜ್ಜೆ
೨೮ ಶಬರಿಮಲೈ ಶ್ರೀಸ್ವಾಮಿಅಯ್ಯಪ್ಪ ೭೩ ಹುಚ್ಚ
೨೯ ಚಾಲೆಂಜ್ ೭೪ ದೀಪಾಂಜಲಿ
೩೦ ವರಗಳಬೇಟೆ ೭೫ ಪ್ರದೀಪ್
೩೧ ಕದನ ೭೬ ಪಾರಂಪರೆ
೩೨ ತವರುಮನೆ ಉಡುಗೊರೆ ೭೭ ಏಕಾಂಗಿ
೩೩ ಭೈರವಿ ೭೮ ಬಾಲಶಿವ
೩೪ ಗೃಹಪ್ರವೇಶ ೭೯ ಭಗವಾನ್ ಶ್ರೀಸಾಯಿಬಾಬಾ
೩೫ ಮಾಂಗಲ್ಯ ೮೦ ಟಾಡಾಖೈದಿ
೩೬ ಬೆಳ್ಳಿಕಾಲುಂಗುರ ೮೧ ನನ್‌ಹೆಂಡ್ತಿಮದುವೆ
೩೭ ಬೊಂಬಾಟ್‌ಹೆಂಡ್ತಿ ೮೨ ಮಹಾಸಾಧ್ವಿಮಲ್ಲಮ್ಮ
೩೮ ಹಠಮಾರಿಹೆಣ್ಣು ಕಿಲಾಡಿಗಂಡು ೮೩ ತನನಂ ತನನಂ
೩೯ ಕ್ರಾಂತಿಗಾಂಧಿ ೮೪ ಜ್ಞಾನಜ್ಯೋತಿ ಶ್ರೀಸಿದ್ಧಗಂಗಸ್ವಾಮೀಜಿ
೪೦ ನಗರದಲ್ಲಿ ನಾಯಕರು ೮೫ ಮಹಾಶಕ್ತಿ ಮಾತೆಯರು
೪೧ ಗೃಹಲಕ್ಷ್ಮಿ ೮೬ ಭಕ್ತಶಂಕರ
೪೨ ಪ್ರಣಯದ ಪಕ್ಷಿಗಳು ೮೭ ಕಂಸಾಳೆ ಕೈಸಾಳೆ
೪೩ ಬಹದ್ದೂರ್‌ಹೆಣ್ಣು ೮೮ ಮಹಾಶರಣ ಹರಳಯ್ಯ
೪೪ ಸೂರ್ಯೋದಯ ೮೯ ಸಂತ ಜ್ಞಾನದೇವ
೪೫ ಜನಮೆಚ್ಚಿದಮಗ ೯೦ ಸ್ವಾತಿಮುತ್ತಿನ ಮಳೆಯಲ್ಲಿ

ಕುಮಾರಕವಿ ಬಿ.ಎನ್.ನಟರಾಜ್ [೯೦೩೬೯೭೬೪೭೧] ಬೆಂಗಳೂರು ೫೬೦೦೭೨