ಕನ್ನಡನಾಡಿನ ಮಲೆನಾಡ ಐಸಿರಿ ಸಾಗರ ಟೌನ್‌ನ ಮಧ್ಯಮವರ್ಗದ ಕುಟುಂಬದಲ್ಲಿ ೧೯೫೬ರಲ್ಲಿ ಜನಿಸಿದರು. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ’ಸೈಲೆಂಟ್ ಹುಡುಗ’ ಎಂಬ ಹೆಸರು ಗಳಿಸಿದ್ದರು. ಯಾವ ಕಾರಣಕ್ಕು ಅದಾವ ಘಳಿಗೆಯಲ್ಲು ಬಣ್ಣ ಹಚ್ಚುವ ಕಿಂಚಿತ್ ಶೋಕಿಯೂ ಇರಲಿಲ್ಲ. ಆದರೆ ಚಿಕ್ಕಂದಿನಿಂದಲೂ ನಾmಕ ಮತ್ತು ಸಿನಿಮಾ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ಮುಂದೊಂದಿನ ಕನ್ನಡಚಿತ್ರಗಳ ಪ್ರಮುಖನಟ/ನಾಯಕನಟ ಆಗುವೆನೆಂದು ಕನಸಲ್ಲು ಊಹಿಸಿರಲಿಲ್ಲ. ಪದವೀಧರನಾಗಿ ಓರ್ವ ಉತ್ತಮ ಸರ್ಕಾರಿ ಉದ್ಯೋಗಿಯಾಗಿ ಗುಡ್ ಇಂಡಿಯನ್ ಆಗಬೇಕೆಂಬ ಮಹದಾಸೆಇತ್ತು ಅಷ್ಟೆ?! ತನ್ಮೂಲಕ ತನ್ನ ಕುಟುಂಬದ ಎಲ್ಲರ ಜವಾಬ್ಧಾರಿ ಹೊರಬೇಕೆಂಬ ಗುರಿ ಮತ್ತು ಛಲ ತುಂಬಿತ್ತು.
ರಾಜ್ಯ/ಕೇಂದ್ರ ಸರ್ಕಾರಿ ನೌಕರನಾಗಿ ಸೇವೆ ಮಾಡುತ್ತ ದೇಶದ ಬೇರೆಬೇರೆ ಸ್ಥಳಗಳಿಗೆ ವರ್ಗಾವಣೆಗೊಂಡು ಭಾರತದ ವಿವಿಧ ವರ್ಗದ ಭಾಷೆ-ಜನ ಪರಿಚಯ ಮಾಡಿಕೊಳ್ಳುವ ತವಕ ಎದ್ದು ಕಾಣುತ್ತಿರುವಾಗಲೆ ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ ಚಂದನವನವು ಕೈ ಬೀಸಿ ಕರೆಯಿತು. ಯಾವುದೇ ರಾಜಕೀಯ ಅಥವಾ ಕಾಂಟ್ರೋವರ್ಸಿ ಇಲ್ಲದ/ ಮಾಡದ ಸರಳ ಸಜ್ಜನ ನಡವಳಿಕೆಯ ನಿರಹಂಕಾರಿ ನಟ. ತನ್ನದೇ ಪರಿಶ್ರಮ ಮತ್ತು ಪ್ರಯತ್ನದಿಂದ ಕನ್ನಡ ತುಳು ಕೊಂಕಣಿ ಹಾಗೂ ಕೊಡವ ಚಿತ್ರರಂಗದಲ್ಲಿ ತಮಗೆ ದೊರಕಿದ ಪಾತ್ರಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ವಿಜಯಕಾಶಿಯವರು ಸುಮಾರು ೪೦ ವರ್ಷಗಳ ಕಾಲ ಕೈಗೊಂಡ ತಮ್ಮ ಸತತ ಪ್ರಯತ್ನದಲ್ಲಿ ಕೈಗೊಂಡ ಶ್ರದ್ಧೆ-ಸಂಯಮ ಕಾಯಕದಿಂದ ಕೆಲವು ಉತ್ತಮ ಅಭಿನಯ ನೀಡಿದರು, ಕೆಲವು ಚಿತ್ರಗಳ ಮೂಲಕ ರಾಜ್ಯ, ಫಿಲಂಫೇರ್, ಸೈಮಾ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಯೋಧರ್ಮಕ್ಕೆ ಅನುಗುಣವಾಗಿ ಯೌವ್ವನದ ಹಂತದಲ್ಲಿ ಸಹಜ ಎನ್ನುವ ಮಟ್ಟ ತಲುಪಿ ತಮ್ಮ ಕಾಲಮೇಲೆ ನಿಂತುಕೊಂಡರು. ಕಾಲಕ್ರಮೇಣ ನಾಟಕರತ್ನ ಡಾ.ಗುಬ್ಬಿವೀರಣ್ಣನವರ ಮೊಮ್ಮಗಳು ಖ್ಯಾತ ನೃತ್ಯ ಕಲಾವಿದೆ ವೈಜಯಂತಿ ಅವರನ್ನು ವಿವಾಹವಾದರು. ಇವರ ಮಗಳು ಪ್ರತೀಕ್ಷಾ ಕೂಡ ವಿಖ್ಯಾತ ನೃತ್ಯಪಟು. ಪ್ರಸ್ತುತ ಬೆಂಗಳೂರಿನಲ್ಲಿ ಕುಟುಂಬ ಸಮೇತ ಸುಂದರ-ಸುಖಕರ-ಆರೋಗ್ಯಕರ ಜೀವನ ಸಾಗಿಸುತ್ತ ಕಿರುತೆರೆಯ ಧಾರಾವಾಹಿಗಳಲ್ಲೂ ಪಾತ್ರವಹಿಸುತ್ತ ಕಲಾಸೇವೆ ಸಲ್ಲಿಸುತ್ತಿದ್ದಾರೆ. ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ
ವಿಜಯಕಾಶಿ ನಟಿಸಿದ ಪ್ರಮುಖ ಫಿಲಂಸ್:-
ಕ್ರ..ಸಂ ಚಿತ್ರ ಕ್ರ..ಸಂ ಚಿತ್ರ
೧ ಆಕ್ರಮಣ/೧೯೮೦ ೪೧ ಶಬರಿಮಲೆ ಸ್ವಾಮಿಅಯ್ಯಪ್ಪ
೨ ಪಾರಿಜಾತ ೪೨ ತೇಜ
೩ ಬಾಡದ ಹೂ ೪೩ ಉಂಡೂಹೋದ ಕೊಂಡೂಹೋದ
೪ ಸಿಂಹಾಸನ ೪೪ ಶ್ವೇತಾಗ್ನಿ
೫ ಪ್ರೇಮಪರ್ವ ೪೫ ನೀನುನಕ್ಕರೆ ಹಾಲುಸಕ್ಕರೆ
೬ ಆಶಾಕಿರಣ ೪೬ ಕ್ರಮ
೭ ಭಯಂಕರ ಭಸ್ಮಾಸುರ ೪೭ ಸಂಗ್ಯಾ ಬಾಳ್ಯಾ
೮ ಬೀಗರಪಂದ್ಯ ೪೮ ಪ್ರೇಮದ ಉಯ್ಯಾಲೆ
೯ ಸತ್ವಪರೀಕೆ ೪೯ ನನ್ನ ಶತ್ರು
೧೦ ಭದ್ರಕಾಳಿ ೫೦ ಕೊಲ್ಲೂರು ಶ್ರೀಮೂಕಾಂಬಿಕಾ
೧೧ ಹಸಿದ ಹೆಬ್ಬುಲಿ ೫೧ ನಿಲುಕದ ನಕ್ಷತ್ರ
೧೨ ಚಿನ್ನದಂಥಮಗ ೫೨ ಸಿಪಾಯಿ
೧೩ ಆನಂದಸಾಗರ ೫೩ ಮೊಮ್ಮಗ
೧೪ ಆಶಾ ೫೪ ಈ ಹೃದಯ ನಿನಗಾಗಿ
೧೫ ಸಿಡಿಲು ೫೫ ಚೆಲುವ
೧೬ ಪ್ರೀತಿವಾತ್ಸಲ್ಯ ೫೬ ಅಮ್ಮಾವ್ರಗಂಡ
೧೭ ಪ್ರಳಯಾಂತಕ ೫೭ ಮಾಂಗಲ್ಯಂ ತಂತುನಾನೇನ
೧೮ ಮೂರುಜನ್ಮ ೫೮ ಕಿಂಗ್
೧೯ ಕಲಿಯುಗ ೫೯ ಸೂರ್ಯವಂಶ
೨೦ ಇಂದಿನಭಾರತ ೬೦ ರವಿಮಾಮ
೨೧ ಜೀವನಚಕ್ರ ೬೧ ಓ ಪ್ರೇಮವೇ
೨೨ ಅಜೇಯ ೬೨ ಓ ನನ್ನ ನಲ್ಲೆ
೨೩ ಎಲ್ಲಾಹೆಂಗಸರಿಂದ ೬೩ ಕಲರವ
೨೪ ಅಪರೂಪದಕಥೆ ೬೪ iಲ್ಲ
೨೫ ಪ್ರೇಮಗಂಗೆ ೬೫ ನೀಲಕಂಠ
೨೬ ಮಾರ್ಜಾಲ ೬೬ ಯುಗಾದಿ
೨೭ ಭಾಗದ ಲಕ್ಷ್ಮೀ ಬಾರಮ್ಮ ೬೭ ಮೊಗ್ಗಿನ ಮನಸ್ಸು
೨೮ ಹೊಸಬಾಳು ೬೮ ಸತ್ಯ ಇನ್ ಲವ್
೨೯ ಯಾರಿಗಾಗಿ ೬೯ ಟ್ಯಾಕ್ಸಿ ನಂ.-೧
೩೦ ಸುಪ್ರಭಾತ ೭೦ ಕಂಠೀರವ
೩೧ ಶಾಂತಿ ನಿವಾಸ ೭೧ ಸಂಕ್ರಾಂತಿ
೩೨ ಕೃಷ್ಣ ರುಕ್ಮಿಣಿ ೭೨ ಮಹಾಶರಣ ಹರಳಯ್ಯ
೩೩ ಕಾಡಿನಬೆಂಕಿ ೭೩ ಸಂತ ಜ್ಞಾನದೇವ
೩೪ ರುದ್ರತಾಂಡವ ೭೪ ಆರಕ್ಷಕ
೩೫ ಡಾಕ್ಟರ್ ಕೃಷ್ಣ ೭೫ ಪದೇಪದೇ
೩೬ ದೇವ ೭೬ ಮಾಸ್ಟರ್‌ಪೀಸ್
೩೭ ದಾದಾ ೭೭ ಎ ಸೆಕೆಂಡ್ ಹ್ಯಾಂಡ್ ಲವರ್
೩೮ ರುದ್ರ ೭೮ ಮಹಾವೀರ ಮಾಚಿದೇವ
೩೯ ಬಿಡಿಸದ ಬಂಧ ೭೯ ಶ್ರೀಕಂಠ
೪೦ ಶ್ರೀ ಸತ್ಯನಾರಾಯಣ ಪೂಜಾಫ಼ಲ ೮೦ ಮಾಸ್ತಿಗುಡಿ..? ಮುಂತಾದವು

ಕುಮಾರಕವಿ ಬಿ.ಎನ್.ನಟರಾಜ್
(೯೦೩೬೯೭೬೪೭೧) ಬೆಂಗಳೂರು