ರಂಗಭೂಮಿ ರಮೇಶ್

‘ಮಿಸ್ ಲೀಲಾವತಿ’ ಚಿತ್ರದ ಅಭಿನಯ ಶಾರದೆ ಜಯಂತಿ ಅವರೊಡಗೂಡಿದ “ದೋಣಿ ಸಾಗಲಿ.. ಮುಂದೆ ಹೋಗಲಿ. ದೂರ ತೀರವ ಸೇರಲಿ”ಎಂಬ ಸರ್ವಕಾಲಿಕ ಜನಪ್ರಿಯ ಗೀತೆಯ ಚಿತ್ರದಲ್ಲಿನ ಇವರ ಪಾತ್ರವನ್ನು ಕನ್ನಡ ಕುಲಕೋಟಿಯು ಅನವರತ ಮರೆಯುವಂತಿಲ್ಲ.

ಡಾ.ರಾಜ್‍ಕುಮಾರ್ ಅಭಿನಯದ ಆರು ಚಿತ್ರಗಳಾದ : ಮಂತ್ರಾಲಯ ಮಹಾತ್ಮೆ, ನ್ಯಾಯವೇ ದೇವರು, ನಂದಗೋಕುಲ, ಮೂರೂವರೆ ವಜ್ರಗಳು, ಬಂಗಾರದ ಪಂಜರ ಹಾಗೂ ಭಕ್ತಕುಂಬಾರ ಚಿತ್ರಗಳಲ್ಲಿನ ಇವರ ಅಮೋಘ ಅಭಿನಯವನ್ನು ಯಾರೂ ಎಂದಿಗೂ ಮರೆಯುವಂತಿಲ್ಲ.

‘ಚಿನ್ನಾರಿಪುಟ್ಟಣ್ಣ’, ‘ಲಕ್ಷ್ಮಿಸರಸ್ವತಿ’[ಪಂಚಭಾಷಾ ತಾರೆ ಬಿ.ಸರೋಜಾದೇವಿ ನಾಯಕಿ] ಅತ್ತ್ಯುತ್ತಮ ಚಿತ್ರಗಳಲ್ಲಿ ಪ್ರಮುಖವಾದವು ಮತ್ತು ರಾಜ್ಯಪ್ರಶಸ್ತಿ ವಿಜೇತ ಚಿತ್ರಗಳು. ‘ಸೀತಾ’ ಚಿತ್ರ[ಮಿನುಗುತಾರೆ ಕಲ್ಪನಾ ನಾಯಕಿ] ದ “ಮದುವೆಯ ಈ ಬಂಧಾ.. ಅನುರಾಗದ ಅನುಬಂಧಾ.. ಏಳೇಳು ಜನುಮದಲೂ ತೀರದ ಸಂಬಂಧ..” ಹಾಡು ಇಂದಿಗೂ ಹಳ್ಳಿಯಿಂದ ದಿಳ್ಳಿಯವರೆಗೂ ಜರುಗುವ ಪ್ರತಿಯೊಂದು ಶುಭ ವಿವಾಹ ಸಂದರ್ಭದಲ್ಲಿ ಕಡ್ಡಾಯ ಎನಿಸುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ. ಈ ಗೀತೆಗೆ ರಮೇಶ್ ಅಂದು ನೀಡಿದ ಮನೋಜ್ಞ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ!? ಬೇಟಿ-ಬೇಟೆ ಹಿಂದಿ ಚಿತ್ರದ ರೀಮೇಕ್ ‘ತಂದೆ ಮಕ್ಕಳು’ ಚಿತ್ರದ “ಸಂಜೆ ಕೆಂಪು ಮೂಡಿತು.. ಇರುಳು ಸೆರಗ ಹಾಸಿತು.. ದೂರ ತಾರೆ ಮಿನುಗಿತು..ನಗರವೆಲ್ಲ ಮಲಗಿತು..” ಎಂಬ ಸುಶ್ರಾವ್ಯ ಗೀತೆ ಇವತ್ತಿಗೂ ಗುನುಗುನಿಸುವಂತಿದೆ. ಹಲವಾರು ರಾಜ್ಯ ಪ್ರಶಸ್ತಿ ಮತ್ತು ಫಿಲಂfair ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮದ್ರಾಸ್ ಬಾಂಬೆ ಹೈದ್ರಾಬಾದ್ ನಗರಗಳಲ್ಲಿನ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದಲೂ ಬಹುಮಾನ ಬಿರುದು ಸನ್ಮಾನ ಪಡೆದಿದ್ದಾರೆ.

ಟ್ರ್ಯಾಜಿಡಿ-ಕಾಮಿಡಿ ಸೇರಿದಂತೆ ಯಾವುದೇ ಪಾತ್ರವನ್ನು ಮನಸಾರೆ ಮೆಚ್ಚಿ ಅಭಿನಯಿಸುತ್ತಿದ್ದ ಸಹಜ ಸಹೃದಯ ಕಲಾವಿದ. ತಮ್ಮ 35 ವರ್ಷದ ಕಲಾ ಜೀವನದಲ್ಲಿ 50 ಚಿತ್ರಗಳ ಗಡಿಯನ್ನೂ ದಾಟಲಿಲ್ಲ ಎಂಬ ನಿರಾಶೆ ಅವರ ಅಂತಿಮ ದಿನಗಳವರೆಗೆ ಅವರನ್ನು ಕಾದುತ್ತಿತ್ತು ಇದೊಂದೆ ಚಿಂತೆ ಅವರನ್ನು ನಿರಾಶೆಯನ್ನಾಗಿಸಿತ್ತು .

ರಮೇಶ್ ನಟಿಸಿದ ಫಿಲಂಸ್

ಕ್ರ.ಸಂ. ಚಿತ್ರ ಕ್ರ.ಸಂ. ಚಿತ್ರ
1 ಕವಲೆರಡುಕುಲವೊಂದು/1965 17 ಹೂಬಿಸಿಲು
2 ಮಿಸ್‍ಲೀಲಾವತಿ 18 ಭಲೇಅದೃಷ್ಟವೋಅದೃಷ್ಟ
3 ಎಂದೂನಿನ್ನವನೇ 19 ತಂದೆಮಕ್ಕಳು
4 ಮಂತ್ರಾಲಯಮಹಾತ್ಮೆ 20 ನ್ಯಾಯವೇದೇವರು
5 ದುಡ್ಡೇದೊಡ್ಡಪ್ಪ 21 ಸುಭದ್ರಾಕಲ್ಯಾಣ
6 ಬದುಕುವದಾರಿ 22 ಉತ್ತರದಕ್ಷಿಣ
7 ಲವ್ ಇನ್ ಬೆಂಗಳೂರು 23 ಭಲೇರಾಣಿ
8 ಚಿನ್ನಾರಿಪುಟ್ಟಣ್ಣ 24 ನಾಮೆಚ್ಚಿದಹುಡುಗ
9 ಅದೇಹೃದಯ ಅದೇಮಮತೆ 25 ನಂದಗೋಕುಲ
10 ಗೃಹಲಕ್ಷ್ಮಿ 26 ಕಾಣದಕೈ
11 ಮನಶ್ಯಾಂತಿ 27 ಮೂರೂವರೆವಜ್ರಗಳು
12 ಲಕ್ಷ್ಮೀ ಸರಸ್ವತಿ 28 ಬಂಗಾರದಪಂಜರ
13 ಆರು ಮೂರು ಒಂಭತ್ತು 29 ಭಕ್ತಕುಂಬಾರ
14 ಸೀತಾ [ಮದುವೆಯ ಈ ಬಂಧಾ..] 30 ಕರ್ತವ್ಯದಕರೆ
15 ಅಳಿಯಗೆಳೆಯ 31 ನಿರೀಕ್ಷೆ
16 ಪ್ರೇಮಕ್ಕೂಪರ್ಮಿಟ್ಟೇ 32 ಸುಮಂಗಲಿ

ಕುಮಾರಕವಿ ನಟರಾಜ್ 9036976471
ಬೆಂಗಳೂರು 560072