1936ರಲ್ಲಿ ಜನಿಸಿದ ಗಂಗಾಧರ್ ಬೆಂಗಳೂರು ಹೆಚ್.ಎ.ಎಲ್. ಕಂಪನಿಯ ಉದ್ಯೋಗಿ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ ನಂತರ 1967ರಲ್ಲಿ ಲಗ್ನಪತ್ರಿಕೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ. ಜಿ.ವಿ.ಅಯ್ಯರ್ ನಿರ್ದೇಶನ-ನಿರ್ಮಾಣದ ಚೌಕದದೀಪ ಸಿನಿಮಾದಲ್ಲಿ ಪರಿಚಯಿಸುವಾಗ ರಾಜೇಂದ್ರಕುಮಾರ್ ಎಂಬ ಮರುನಾಮಕರಣದಿಂದ ಚಂದನವನಕ್ಕೆ ಕೊಡುಗೆ ನೀಡಿದರು. ಎರಡೇ ಫಿಲಂ ಬಳಿಕ ಪುನಃ ಮೂಲನಾಮಕರಣದ ಗಂಗಾಧರ್ ಹೆಸರಿಂದಲೆ ಅಭಿನಯಲೋಕದಲ್ಲಿ ಮುಂದುವರೆದು ಮಿಂಚಿದರು. ಎಸ್.ಆರ್. ಪುಟ್ಟಣ್ಣ ಕಣಗಾಲ್‍ರ ವಿಧೇಯ ಶಿಷ್ಯನಾಗಿ ಗೆಜ್ಜೆಪೂಜೆ ಮೂಲಕ ರಾಜ್ಯಾದ್ಯಂತ ಪರಿಚಿತರಾದರು. ಪುಟ್ಟಣ್ಣ ನಿರ್ದೇಶನದ ಬಹುಪಾಲು ಚಿತ್ರದಲ್ಲಿ ನಟಿಸಿದ ನಾಯಕನಟ ಮತ್ತು ಹೊಸದಾಗಿ ಎಂಟ್ರಿಕೊಟ್ಟ ನಾಯಕನಟರ ಪೈಕಿ ಅತಿಹೆಚ್ಚು ಸಂಖ್ಯೆಯ ಡಾ||ರಾಜ್ ಚಿತ್ರಗಳಲ್ಲಿ ನಟಿಸಿದ ಹೀರೋ ಎಂಬ ಹೆಗ್ಗಳಿಕೆಗೂ ಪಾತ್ರರಾದ ಇವರ ಕೀರ್ತಿಕಿರೀಟಕ್ಕೆ ಸೇರ್ಪಡೆಯಾದ ಮತ್ತೊಂದುಗರಿ:- ಅಂದಿನ ಉದಯೋನ್ಮುಖ ನಟರಲ್ಲಿ ಹೆಚ್ಚು ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಗಳಿಸಿದ ಪ್ರತಿಭಾವಂತನಟ. ಮಿನುಗುತಾರೆ ಕಲ್ಪನ, ಅದೃಷ್ಟತಾರೆ ಆರತಿ, ಅಭಿನಯಶಾರದೆ ಜಯಂತಿ ಮುಂತಾದ ಟಾಪ್ ಹೀರೋಯಿನ್‍ಜತೆ ನಟಿಸಿದ ಅದೃಷ್ಟವಂತ ಹೀರೋ ಕೂಡ ಹೌದು!

ಡಾ.ರಾಜ್ ಮತ್ತು ಇನ್ನಿತರ ಮಹಾನ್ ನಾಯಕನಟರ ಸಿನಿಮಾಗಳಲ್ಲಿ ನಟಿಸುವಾಗ ಕಿಂಚಿತ್ತೂ ಕಿರಿಖ್ ಮಾಡದೆ, ಸಂಕೋಚ-ಮುಜುಗರ ತೋರದೆ ಸಂದರ್ಭಕ್ಕೆ ತಕ್ಕಂತೆ ದಿಗ್ಗಜರು ನೀಡುತ್ತಿದ್ದ ಸೂಕ್ತ ಸಲಹೆ-ಮಾರ್ಗದರ್ಶನ ಪಡೆದು ಪಾತ್ರವಹಿಸಿ ಅವರೆಲ್ಲರ ಪ್ರೀತಿ-ವಿಶ್ವಾಸ ಗಳಿಸುತ್ತಿದ್ದರು. ತಮ್ಮೊಡನೆ ಸಹಕಲಾವಿದರಾಗಿ ನಟಿಸುವವರು ಹಳಬರೊ, ಹೊಸಬರೊ ಯಾರೇಇರಲಿ ಎಲ್ಲರೊಡನೆ ಸಹಕರಿಸಿಕೊಂಡು ಖುಷಿಯಿಂದ ಷೆಡ್ಯೂಲ್/ಶೂಟಿಂಗ್ ಮುಗಿಸುತ್ತಿದ್ದರು. ಸದರಿ ಫಿಲಂ ಮುಕ್ತಾಯದವರೆಗೆ ಇಡೀ ಚಿತ್ರ ತಂಡದವರ ಮೆಚ್ಚುಗೆ ಗಳಿಸುತ್ತಿದ್ದರು. ಯಾವ ಕಾರಣಕ್ಕೂ ನಿರ್ಮಾಪಕ-ನಿರ್ದೇಶಕರುಗಳನ್ನು ಬೇಸರಗೊಳಿಸದ ನಗುಮೊಗದ ನಟ. ನನ್ನತಮ್ಮ ಸಿನಿಮಾದಲ್ಲಿ ರಾಜಕುಮಾರ್ ತಮ್ಮನ ಪಾತ್ರದಲ್ಲಿ ನಟಿಸಿ ಹೆಚ್ಚು ಜನಪ್ರಿಯರಾದರು. ಉತ್ತಮ ಪೆÇೀಷಕನಟನೆಗೆ ಹಲವಾರು ಪ್ರಶಸ್ತಿ ಬಹುಮಾನ ಪಡೆದರು. ತನಿಖೆ ಚಿತ್ರದ ನಟ-ನಿರ್ಮಾಪಕ-ನಿರ್ದೇಶಕ ಗುಲ್ಜಾರ್‍ಖಾನ್ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿ ವಿಶೇಷ ಪ್ರಶಂಸೆಗೆ ಪಾತ್ರರಾದ ಸಜ್ಜನಿಕೆಯ ನಟ! ಕೌಸಲ್ಯರನ್ನು ಮಡದಿಯಾಗಿ ಕೈಹಿಡಿದು ನಂತರ ಇಬ್ಬರು ಮಕ್ಕಳ ತಂದೆಯಾಗಿ ತುಂಬು ಜೀವನ ನಡೆಸುವಾಗಲೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದುರಂತಕಂಡ ಅಚ್ಚಕನ್ನಡದ ಸ್ವಚಕಲಾವಿದ. ತುಳು ಕೊಡವ ಸೇರಿದಂತೆ ಒಟ್ಟು 77ಚಿತ್ರಗಳಲ್ಲಿ ನಟಿಸಿದ್ದ ಗಂಗಾಧರ್ ತಮ್ಮ 67ನೇ ವಯಸ್ಸಲ್ಲಿ ದಿ.27.12.2003ರಂದು ದೈವಾಧೀನÀರಾದರು. ರಾಜೇಂದ್ರಕುಮಾರ್@ಗಂಗಾಧರ್ ಅಭಿನಯದ ಫಿûಲಂಸ್:-
೧ ಲಗ್ನಪತ್ರಿಕೆ ೨೫ ಕಥಾಸಂಗಮ ೪೯ ಕರ್ಣ
೨ ನಾನೇಭಾಗ್ಯವತಿ ೨೬ ಮಕ್ಕಳಭಾಗ್ಯ ೫೦ ಅಪರಾಧಿನಾನಲ್ಲ
೩ ಚೌಕದದೀಪ ೨೭ ಬೆಂಗಳೂರುಭೂತ ೫೧ ಶಿವಭಕ್ತಮಾರ್ಕAಡೇಯ
೪ ಗೆಜ್ಜೆಪೂಜೆ ೨೮ ಮುಗಿಯದಕಥೆ ೫೨ ಮಿಥಿಲೆಯಸೀತೆಯರು
೫ ನನ್ನತಮ್ಮ ೨೯ ಬಂಗಾರದಗುಡಿ ೫೩ ಗುಡುಗುಸಿಡಿಲು
೬ ಸೀತಾ ೩೦ ಬಾಳುಜೇನು ೫೪ ಶ್ರೀಸತ್ಯನಾರಾಯಣಪೂಜಾಫಲ
೭ ಅಳಿಯಗೆಳೆಯ ೩೧ ಆರುಮೂರುಒಂಭತ್ತು ೫೫ ಏಕಲವ್ಯ
೮ ಶರಪಂಜರ ೩೨ ಶ್ರೀರೇಣುಕಾದೇವಿಮಹಾತ್ಮೆ ೫೬ ಸೆಂಟ್ರಲ್‌ರೌಡಿ
೯ ಭಲೇಭಾಸ್ಕರ ೩೩ ಋತುಗಾನ ೫೭ ಮನಗೆದ್ದಮಗ
೧೦ ಕಲ್ಯಾಣಿ ೩೪ ಗುರುಸಾರ್ವಭೌಮ ಶ್ರೀರಾಘವೇಂದ್ರ ಕರುಣೆ ೫೮ ಹರಕೆಯಕುರಿ
೧೧ ಭಲೇಅದೃಷ್ಟವೋಅದೃಷ್ಟ ೩೫ ಶನಿಪ್ರಭಾವ ೫೯ ರಂಜಿತಾ
೧೨ ಮಾಲತಿಮಾಧವ ೩೬ ಅತ್ತೆಗೆತಕ್ಕಸೊಸೆ ೬೦ ಸಿಡಿದೆದ್ದ ಶಿವ
೧೩ ಸೋತುಗೆದ್ದವಳು ೩೭ ಮುತ್ತುಒಂದುಮುತ್ತು ೬೧ ತನಿಖೆ
೪ ಸುಭದ್ರಾಕಲ್ಯಾಣ ೩೮ ಮನಸ್ಸಿನAತೆಮಾAಗಲ್ಯ ೬೨ ರಶ್ಮಿ
೧೫ ಯಾವಜನ್ಮದಮೈತ್ರಿ ೩೯ ಖAಡವಿದೆಕೋ ಮಾಂಸವಿದೆಕೋ ೬೩ ಆಟಹುಡುಗಾಟ
೧೬ ಒAದುಹೆಣ್ಣಿನಕಥೆ ೪೦ ರAಗನಾಯಕಿ ೬೪ ಪಾಳೇಗಾರ
೧೭ ಬಾಂಧವ್ಯ ೪೧ ನ್ಯಾಯನೀತಿಧರ್ಮ ೬೫ ರAಭಾರಾಜ್ಯದಲ್ಲಿರೌಡಿ
೧೮ ಜೀವನಜೋಕಾಲಿ ೪೨ ನೀನನ್ನಗೆಲ್ಲಲಾರೆ ೬೬ ಬಾಳಿನದಾರಿ
೧೯ ತ್ರಿವೇಣಿ ೪೩ ಜೀವಕ್ಕೆಜೀವ ೬೭ ಲರ‍್ಸ್
೨೦ ಜಯವಿಜಯ ೪೪ ದೇವರತೀರ್ಪು ೬೮ ಚಿಕ್ಕ
೨೧ ಮಣ್ಣಿನಮಗಳು ೪೫ ಭಕ್ತಪ್ರಹ್ಲಾದ ೬೯ ಅಮ್ಮನಿನ್ನತೋಳಿನಲ್ಲಿ
೨೨ ಜಾಗೃತಿ ೪೬ ಸಮರ್ಪಣೆ ೭೦ ವಿಕ್ರಮ್/೨೦೦೩
೨೩ ವಿಪ್ಲವವನಿತೆ ೪೭ ರಣಭೇರಿ ೭೧ ಪ್ರೊಡಕ್ಷನ್ ನಂ.೫?
೨೪ ದೇವರುಕೊಟ್ಟವರ ೪೮ ಅಪರೂಪದಕಥೆ — —

— —
ಕುಮಾರಕವಿ ನಟರಾಜ್ 9036976471
ಬೆಂಗಳೂರು-560072