ದಿನಾಂಕ ೧೬ನೇ ಆಗಸ್ಟ್ ೧೯೩೯ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಾರವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಹೆಣ್ಣು ಮಗುವಿನ ಹೆಸರು ವಸುಂಧರಾದೇವಿ. ಇವರ ತಂದೆ ಬಿಸಿನೆಸ್‌ಮನ್ ತಾಯಿ ಗೃಹಿಣಿ. ವ್ಯಾಪಾರದಲ್ಲಿ ಬಹಳ ನಷ್ಟ ಉಂಟಾದ್ದರಿಂದ ವಿಧಿಯಿಲ್ಲದೆ ತನ್ನ ಕುಟುಂಬದೊಡನೆ ಈಕೆಯ ತಂದೆ ಮದ್ರಾಸ್ ನಗರಕ್ಕೆ ವಲಸೆ ಹೋದರು. ಅನಿವಾರ್ಯವಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ ತಾನೇ ಉದ್ಯೋಗ ಹುಡುಕಿ ಕೊಳ್ಳಬೇಕಾಯಿತು. ತನ್ನ ಕುಟುಂಬದ ಹೊಣೆ ಹೊತ್ತು ಸ್ವಯಂ ದುಡಿದು ಎಲ್ಲರನ್ನು ಸಾಕಿ ಸಲಹುವ ಜವಾಬ್ಧಾರಿ ಈಕೆಯ ಪಾಲಿಗೆ ಒದಗಿತು. ಸುಂದರಿಯಾಗಿದ್ದ ವಸುಂಧರಾದೇವಿಗೆ ವಿಮಾನದ ಗಗನಸಖಿ ಹುದ್ದೆ ಲಭಿಸಿ ಜೀವನೋಪಾಯಕ್ಕೆ ಸರಿದಾರಿ ದೊರಕಿತು! ಒಮ್ಮೆ ಸ್ವಂತ ತಂದೆಯವರಿಂದಲೇ ಮೋಸಹೋಗಿ ತಮ್ಮ ಪರಿಶ್ರಮದಲ್ಲಿ ಗಳಿಸಿದ್ದ ಆಸ್ತಿಯನ್ನು ನ್ಯಾಯಾಲಯದ ಮೂಲಕ ಕೇಸ್ ಗೆದ್ದು ಮರುವಶಕ್ಕೆ ಪಡೆದರು. ದೈವಲೀಲೆಯೊ ವಿಧಿಲೀಲೆಯೊ ಎಂಬಂತೆ ಇವರಿಗೆ ಮದುವೆ ಕಂಕಣಬಲ ದೊರಕಲೇಇಲ್ಲ. ಹಾಗಾಗಿ ಇವತ್ತಿಗೂ ಅವಿವಾಹಿತೆಯಾಗೆ ಉಳಿದುಕೊಂಡಿದ್ದಾರೆ. ತಂದೆ ವಿರುದ್ಧ ಕೇಸ್ ಗೆದ್ದು ಮರಳಿ ಪಡೆದ ಅಂದಾಜು ೨೫ಕೋಟಿ ರೂ. ಬೆಲೆಯುಳ್ಳ ಚೆನ್ನೈನ ಟಿ.ನಗರದಲ್ಲಿರುವ ಸ್ವಯಾರ್ಜಿತ ಆಸ್ತಿಯನ್ನು ೨೦೧೦ರಲ್ಲಿ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ದಾನ ಮಾಡಿದ ಅದ್ಭುತಮಾನವ ಈಅಭಿನೇತ್ರಿ!

ಕಾಲಕ್ರಮೇಣ ಖ್ಯಾತ ನಿರ್ದೇಶಕ ಸಿ.ವಿ.ಶ್ರೀಧರ್‌ರವರ ಮಿತ್ರನೊಬ್ಬ ಒಂದಿನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಈಕೆಯ ಪರಿಚಯವಾಗಿ ಆಮೂಲಕ ಅನಿರೀಕ್ಷಿತವಾಗಿ ಚಲನಚಿತ್ರ ಪ್ರಪಂಚಕ್ಕೆ ಇವರನ್ನು ಪರಿಚಯಿಸಲಾಯಿತು. ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ೧೯೬೩ರಲ್ಲಿ ಶ್ರೀಧರ್ ನಿರ್ಮಿಸಿದ ಬ್ಲಾಕ್ ಬಸ್ಟರ್ ಫಿಲಂ ಕಾದಲಿಕ್ಕ ನೇರಮಿಲ್ಲೈ ಚಿತ್ರದ ಮೂಲಕ ಸಿನಿಲೋಕಕ್ಕೆ ಎಂಟ್ರಿ ನೀಡಿದರು. ಅಂದಿನ ಚಿತ್ರರಂಗದ ಖ್ಯಾತ ನಟಿ ವೈಜಯಂತಿಮಾಲಾ ತಾಯಿ ಹಿರಿಯ ನಟಿಯ ಹೆಸರೂ ಸಹ ವಸುಂಧರಾದೇವಿ ಆಗಿದ್ದುದರಿಂದ ಇವರ ಹೆಸರನ್ನು ಕಾಂಚನ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಹಿಂದಿರುಗಿ ನೋಡದ ಬ್ಯುಟಿಫುಲ್ ನಟಿ ಕಾಂಚನಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೆ ಜನಪ್ರಿಯ ನಟಿಯರ ಸಾಲುಸೇರಿ ಸೈ ಎನಿಸಿ ಕೊಂಡರು.

ಸುಮಾರು ೪೦ವರ್ಷ ಅಭಿನಯ ಕಲಾಸೇವೆ ಮಾಡಿದ ಈಕೆ ಭಾರತೀಯ ಚಿತ್ರರಂಗದ ಮೇರು ನಟಿಯರ ಪಂಕ್ತಿಗೆ ಸೇರಿ ಕನ್ನಡ ತಮಿಳು ತೆಲುಗು ಮಲಯಾಳಮ್ ಹಿಂದಿ ಪಂಚಭಾಷೆಯ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ೧೯೬೩-೧೯೮೩ ಅವಧಿಯಲ್ಲಿ ಅವಿರತ ದರ್ಬಾರ್ ನಡೆಸಿದರು! ರಾಜಕುಮಾರ್ ಕಲ್ಯಾಣಕುಮಾರ್ ಉದಯಕುಮಾರ್ ವಿಷ್ಣುವರ್ಧನ್ ಅಂಬರೀಷ್ ಶಂಕರನಾಗ್ ಅನಂತನಾಗ್ ರವಿಚಂದ್ರನ್ ಶಿವಣ್ಣ ರಾಘಣ್ಣ ಅಪ್ಪು ದ್ವಾರಕೀಶ್ ಅಶ್ವಥ್ ಮುತ್ತುರಾಮನ್ ಎಂಜಿಆರ್ ಶಿವಾಜಿಗಣೇಶನ್ ಜೆಮಿನಿಗಣೇಶನ್ ಎನ್‌ಟಿಆರ್ ಎಎನ್‌ಆರ್ ರವಿಚಂದ್ರನ್ ಜೈಶಂಕರ್ ಎಸ್ಸೆಸ್‌ರಾಜೇಂದ್ರನ್ ಧರ್ಮೇಂದ್ರ ಜಿತೇಂದ್ರ ರಾಜೇಶ್‌ಖನ್ನ ಮುಂತಾದ ದಿಗ್ಗಜರೊಡನೆ ಅಭಿನಯಿಸಿ ಖ್ಯಾತರಾದರು. ಇವರು ನಟಿಸಿದ ಕನ್ನಡದ ಕಟ್ಟಕಡೇಯ ಫಿಲಂ ೧೯೮೮ರಲ್ಲಿ ತೆರೆಕಂಡ ಡಾ.ರಾಜಕುಮಾರ್ ಅಭಿನಯಿಸಿದ ಚಿತ್ರ ದೇವತಾಮನುಷ್ಯ.

ಕಾಂಚನಾ ಗಳಿಸಿದ ಪ್ರಶಸ್ತಿ ಬಹುಮಾನ ಬಿರುದುಗಳು:-
ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ-ಅತ್ಯುತ್ತಮ ನಟಿ
ಆಂಧ್ರಪ್ರದೇಶ ರಾಜ್ಯ ಸಿನಿಮಾ ಪ್ರಶಸ್ತಿ-ಅತ್ಯುತ್ತಮ ನಟಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ-ಅತ್ಯುತ್ತಮ ಪೋಷಕನಟಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೧೭
ಕಲೈಮಾಮಣಿ ಪ್ರಶಸ್ತಿ ತಮಿಳುನಾಡು ರಾಜ್ಯ ಸರ್ಕಾರ-೨೦೧೩
ಎ.ಎನ್.ಆರ್. ಸ್ವರ್ಣಕಂಕಣಂ ಪ್ರಶಸ್ತಿ-೨೦೦೭
ಎಂ.ಜಿ.ಆರ್. ಪ್ರತಿಷ್ಠಿತ ಪ್ರಶಸ್ತಿ-೨೦೦೫

ಕಾಂಚನಾ ಅಭಿನಯದ ಕನ್ನಡ ಫಿಲಂಸ್:-
ಮಕ್ಕಳರಾಜ್ಯ ರತ್ನಮಂಜರಿ ಪತಿಯೇದೈವ ಬಬ್ರುವಾಹನ ನಾನೊಬ್ಬಕಳ್ಳ ಶಂಕರ್‌ಗುರು ಬಿಳಿಗಿರಿಯಬನದಲ್ಲಿ ಆರದಗಾಯ ಪೆದ್ದಗೆದ್ದ ಜೀವಕ್ಕೆಜೀವ ಭಾಗ್ಯವಂತ ನ್ಯಾಯಎಲ್ಲಿದೆ? ಪ್ರಚಂಡಕುಳ್ಳ ಆನಂದಭೈರವಿ ಭಕ್ತಪ್ರಹ್ಲಾದ ಮರ್ಯಾದೆಮಹಲ್ ರಕ್ತತಿಲಕ ಬಂಧನ ಪ್ರಳಯಾಂತಕ ಸಮಯದಗೊಂಬೆ ವೀರಾಧಿವೀರ ನನ್ನಪ್ರತಿಜ್ಞೆ ಚದುರಂಗ ಬಿಡುಗಡೆಯಬೇಡಿ ರಥಸಪ್ತಮಿ ಬೀಗರಪಂದ್ಯ ಮದುವೆ ಮಾಡು ತಮಾಷೆ ನೋಡು ಆಫ್ರಿಕಾದಲ್ಲಿಶೀಲಾ ವಿಜಯೋತ್ಸವ ಜಯಸಿಂಹ ಸಿಂಹದಮರಿಸೈನ್ಯ ಚಿರಂಜೀವಿಸುಧಾಕರ್ ಧರ್ಮಪತ್ನಿ ಹಾಗೂ ದೇವತಾಮನುಷ್ಯ[೧೯೯೨-ಅಂತಿಮಚಿತ್ರ].

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು-೫೬೦೦೭೨