ಮೈಸೂರು ಮಹಾರಾಜರ ಆಸ್ಥಾನದಲ್ಲಿ ಉದ್ಯೋಗ ಗಿಟ್ಟಿಸಿದ್ದ ಈಕೆಯ ತಂದೆ ಜಯರಾಮನ್ ಅಯ್ಯಂಗಾರ್ ತಮ್ಮ ಪತ್ನಿ ಸಂಧ್ಯಾ ಮತ್ತು ಪುತ್ರಿ ಜಯಲಲಿತಾರೊಡಗೂಡಿ ಮೈಸೂರಿನಲ್ಲಿ ನೆಲೆಸಿದ್ದರು. ಕಾಲಕ್ರಮೇಣ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಸಂಧ್ಯ ಮತ್ತವರ ಮಗಳು ಜಯಲಲಿತ ತಮಿಳುನಾಡು ಮೂಲದವರಾದರು ಬಾಲ್ಯದಿಂದಲು ಇವರಿಗೆ ಆಶ್ರಯವಾಗಿದ್ದು ಕರ್ನಾಟಕ ರಾಜ್ಯ ಮತ್ತು ದಯಾಮಯಿ ಕನ್ನಡಿಗರು!

ಸಂಧ್ಯಾ ಮತ್ತು ಜಯಲಲಿತಾ ಇಬ್ಬರೂ ಮಂಡ್ಯ ಜಿಲ್ಲೆಯ ಮೇಲುಕೋಟೆ ಹಾಗೂ ಮೈಸೂರು ನಗರದ ಲಕ್ಷ್ಮೀಪುರಂನಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಇವರ ಮೂಲ ಹೆಸರು ವೇದವಲ್ಲಿ ಮತ್ತು ಕೋಮಲವಲ್ಲಿ. ಜಯಲಲಿತಾ ಎಂದು ಪುನರ್ ನಾಮಕರಣಗೊಳಿಸಿದವರು ಮೈಸೂರು ದೊರೆಗಳು?!

ಜಯಲಲಿತಾಗೆ ಪ್ರಾರಂಭದಿಂದಲೂ ಕನ್ನಡದ ಬಗ್ಗೆ ಆಸಕ್ತಿ ಬ(ಇ)ರಲಿಲ್ಲ? ತಮಿಳುನಾಡು ರಾಜ್ಯದ ಮುಖ್ಯ ಮಂತ್ರಿ ಆದಮೇಲೆ ಕನ್ನಡ ಮತ್ತು ಕನ್ನಡಿಗರ ಬಗ್ಗೆ ಈಕೆಗೆ ಸ್ವಲ್ಪವೂ ಗೌರವ ಇರಲಿಲ್ಲ? ಕನ್ನಡದ ಮೊಟ್ಟಮೊದಲ ಕಲರ್ ಸಿನಿಮ ಅಮರಶಿಲ್ಪಿಜಕಣಾಚಾರಿ ಚಿತ್ರದಲ್ಲಿ ನೃತ್ಯಗಾರ್ತಿಯಾಗಿ ಚಿಕ್ಕಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಯಲಲಿತ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.

ಆ ನಂತರ ಕಲ್ಯಾಣಕುಮಾರ್ ಜೊತೆಗೆ ಹೀರೋಯಿನ್ ಆಗಿ ನಟಿಸಿದ ಪ್ರಥಮ ಫಿಲಂ ಕನ್ನಡದ “ಚಿನ್ನದಗೊಂಬೆ” ನಂತರ ಕಲ್ಯಾಣ್‍ಕುಮಾರ್ ಜತೆಗೆ ಹತ್ತಾರು ಕನ್ನಡ ಚಿತ್ರದಲ್ಲಿ ನಟಿಸಿ ಹೆಸರು ಗಳಿಸಿದರು. ಜಯಲಲಿತಾರ ತಾಯಿ ಹಿರಿಯ ನಟಿ ಸಂಧ್ಯಾ ರಣಧೀರ ಕಂಠೀರವ ಸೇರಿದಂತೆ ರಾಜ್‍ಕುಮಾರ್ ಮತ್ತಿತರ ಜನಪ್ರಿಯ ನಟರ ಜತೆ ಹತ್ತಾರು ಕನ್ನಡ ಚಿತ್ರಗಳಲ್ಲಿ ನಟಿಸಿದರು.

ತಾಯಿ-ಮಗಳಿಗೆ ಪುನರ್ಜನ್ಮ ಕೊಟ್ಟವರು ಕನ್ನಡದವರಾದರೂ ಇವರಿಗೆ ಒಲವು ವ್ಯಾಮೋಹ ಇದ್ದುದು ಮಾತ್ರ ತಮಿಳುನಾಡು ಮತ್ತು ತಮಿಳು ಚಿತ್ರರಂಗ? ನಟ ಎಂ.ಜಿ.ಆರ್. ನಿಧನರಾದ ಸಂದರ್ಭದಲ್ಲಿ (ಉಪ) ಪತ್ನಿ? ಸ್ಥಾನದಲ್ಲಿ ಜಯಲಲಿತ ತನ್ನ ಹಕ್ಕು ಚಲಾಯಿಸಲು ಪಬ್ಲಿಕ್ ಸೀನ್ ಕ್ರಿಯೇಟ್ ಮಾಡಿ ರಾದ್ಧಾಂತ ಎಬ್ಬಿಸಿದಾಗ ರೊಚ್ಚಿಗೆದ್ದ ಎಂ.ಜಿ.ಆರ್.-ವಿ.ಎನ್. ಜಾನಕಿಯವರ ಅಭಿಮಾನಿಗಳು ಕಪಾಳ ಮೋಕ್ಷಮಾಡಿದ ಘಟನೆಯನ್ನು ಮರೆಯುವಂತಿಲ್ಲ?!ಒಬ್ಬನೇ ಹೀರೋ (M.G.Ramachandran)ಜತೆಗೆ ತಾಯಿ-ಮಗಳು ಇಬ್ಬರೂ ಹೀರೊಯಿನ್‍ಆಗಿ ನಟಿಸಿದ್ದು ಕೂಡ ಒಂದು ನೂತನ ದಾಖಲೆ!

ದುರದೃಷ್ಟವಶಾತ್ ತಮಿಳುನಾಡು ಪ್ರಜೆಗಳು 3 ಬಾರಿ ಸಿ.ಎಂ. ಮಾಡಿ ಮೆರೆಸಿದ್ದಲ್ಲದೆ ಈಕೆಯ ದೇವಾಲಯ ಕಟ್ಟಿಸಿ ಪೂಜಿಸಿದ್ದು ವಿಚಿತ್ರ?! ಕಾಲಕ್ರಮೇಣ ತನ್ನ (ಶೋಭನ್‍ಬಾಬು-ಜಯಲಲಿತ) ಮಗನನ್ನೆ ದತ್ತುಪುತ್ರ? ಎಂದು ಬಿಂಬಿಸಿ ವಿಜೃಂಭಣೆಯಿಂದ ಮದುವೆ ಮಾಡಿದ್ದು ಇತಿಹಾಸದ ಪುಟ ಸೇರಿತು. ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕ ರಾಜ್ಯದ ಅಂದಿನ ಮುಖ್ಯ ಮಂತ್ರಿಗೆ ಚಾಲೆಂಜ್ ಮಾಡಿದ್ದನ್ನು ಕನ್ನಡಿಗರು ಎಂದೆಂದೂ ಮರೆಯುವಂತಿಲ್ಲ. ಅದರಲ್ಲಿಯೂ ದೇಶದ ಅಂದಿನ ಪ್ರಧಾನ ಮಂತ್ರಿಗೆ ರಾಜಕೀಯ ಬ್ಲಾಕ್ ಮೇಲ್ [ಕು]ತಂತ್ರ ಮಾಡುವ ಮೂಲಕ ಕಾವೇರಿ ಪ್ರಾಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಘಟನೆಯನ್ನು ಕರ್ನಾಟಕ ರಾಜ್ಯ (ಮಂಡ್ಯದ) ರೈತರೂ, ಕುಡಿಯುವ ನೀರು ಸಿಗದ ನಾಗರಿಕರೂ, 5 ಕೋಟಿ ಕನ್ನಡ ಜನತೆಯೂ, ಮರೆಯುವಂತಿಲ್ಲ?! ಈ ನಡುವೆ ನಮಗೆ ನೆನಪಿಗೆ ಬರುವಂಥ 1970ರ ದಶಕದಲ್ಲಿನ ಒಂದು ಆಶ್ಚರ್ಯಕರ ಘಟನೆ ಇಲ್ಲಿದೆ:
ಚಂದನವನದ 8ನೇ ಅದ್ಭುತ:- ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾದ ರಮೇಶ್ ಮೂವೀಸ್ ರವರ “ಚೆಲ್ಲಿದರಕ್ತ” ಕಲರ್ ಚಿತ್ರದಲ್ಲಿ ರಾಜ್‍ಕುಮಾರ್ ಮತ್ತು ಜಯಲಲಿತ ನಾಯಕ-ನಾಯಕಿ (ಹೀರೊ-ಹೀರೊಯಿನ್) ಆಗಿ ಅಭಿನಯಿಸುವ ಬಗ್ಗೆ ತೀರ್ಮಾನವಾಗಿತ್ತು. ಅಂತಿಮ ಮಾತುಕತೆ ಮುಗಿದು ಈ ಬಗ್ಗೆ ಇಬ್ಬರಿಂದಲೂ ಕಾಲ್‍ಶೀಟ್ ಕೂಡ ಪಡೆದು ಮುಹೂರ್ತದ ದಿನಾಂಕ ಗೊತ್ತುಪಡಿಸಲಾಗಿತ್ತು! ಬೊಂಬಾಟ್ ಪಬ್ಲಿಸಿಟಿಯೂ ಜಬರ್ರಾಗಿ ನಡೆದಿತ್ತು. ಆದರೆ [ದುರ] ಅದೃಷ್ಟವಶಾತ್ ಈ ಸಿನಿಮಾದ ನಿರ್ಮಾಣಕಾರ್ಯ ಯಶಸ್ವಿಯಾಗಲಿಲ್ಲ! ಚಿತ್ರದ ಮುಹೂರ್ತವೇ ನಡೆಯಲಿಲ್ಲ? ಹಾಗಾಗಿ ‘ಚೆಲ್ಲಿದರಕ್ತ’ ಸಿನಿಮಾ ಸೆಟ್ ಏರಲಿಲ್ಲ! ಇದೂ ಸಹ ಜಯಲಲಿತಾಳ ಮತ್ತೊಂದು ಟ್ರ್ಯಾಜಿಡಿ ಹಿ(ಮಿ)ಸ್ಟರಿ!?

ಅಧೋಗತಿ ತಲುಪಿದ ಜಯಲಲಿತ ಸ್ಥಿತಿ:- ಮಾಡಿದ್ದುಣ್ಣೊ ಮಾರಾಯತಿ ಎಂಬಂತೆ ಕೊನೆಗೂ ಜಯಲಲಿತ ತಾನು ಅತಿಯಾಗಿ ನಂಬಿದ್ದ ತನ್ನ ಪರಮಾಪ್ತ ಗೆಳತಿ ಶಶಿಕಲಾಳಿಂದ ನಂಬಿಕೆದ್ರೋಹಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದ ಜೈಲುವಾಸ ಅನುಭವಿಸಿದ್ದು, ಹಿತ-ಶತ್ರುಗಳ ಷಡ್ಯಂತ್ರದಿಂದ ಫುಡ್ ಪಾಯಸನ್ (ಇಂಡೈರೆಕ್ಟ್ ಮರ್ಡರ್?) ಆಗಿ ಅಂತ್ಯ ಕಂಡಿದ್ದು? ಎಲ್ಲವೂ ಒಂದು ಪೂರ್ವಯೋಜಿತದ ದೊಡ್ಡ ಮೆಲೊಡ್ರಾಮ ಮತ್ತು ಇವೆಲ್ಲ ಪ್ರಶ್ನೆಗಳು ಇವತ್ತಿಗೂ ಪ್ರಶ್ನೆಯಾಗೇ ಉಳಿದಿವೆ?!


ಜಯಲಲಿತಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹೀರೋಯಿನ್. ದಕ್ಷಿಣ ಭಾರತದ ಐದು ಭಾಷೆಗಳ 200ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತರಾದರು. ತಮಿಳುನಾಡಿನ ಜನಪ್ರಿಯ ಸಿ.ಎಂ.ಎನಿಸಿದ್ದ ಖ್ಯಾತ ನಟ MGR ಜತೆಯಲ್ಲಿ 25ಕ್ಕೂ ಹೆಚ್ಚಿನ ತಮಿಳು ಚಿತ್ರಗಳಲ್ಲಿ ನಟಿಸಿ ಧೂಳೆಬ್ಬಿಸಿದ್ದ ಪುರಚ್ಚಿ ತಲೈವಿ ಬಿರುದಾಂಕಿತ ಡಾ.ಜಯಲಲಿತಾ MGR ನಂತರ ತಮಿಳುನಾಡು ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನೀಡುವ ಮೂಲಕ ರಾಜಕೀಯವಾಗಿ ಜನಪ್ರಿಯ ಮುತ್ಸದ್ಧಿ ಎನಿಸಿದ್ದರು! ಜಯಲಲಿತಾ ಜೀವನ ಭಾರತವು ಕಂಡ ಒಂದು ದುರಂತ ಇತಿಹಾಸ! ಇವರ ಸಾವು ಬಹಳ ವಿಚಿತ್ರವಾಗಿದ್ದು ಇವತ್ತಿಗೂ ಬಿಡಿಸಲಾರದ ಕಗ್ಗಂಟಾಗಿದೆ?

ಜಯಲಲಿತ ನಟಿಸಿರುವ ಕನ್ನಡ ಫಿಲಂಸ್:-
ರಾಣಿಹೊನ್ನಮ್ಮ (ಬಾಲನಟಿ-1960), ಶ್ರೀಶೈಲಮಹಾತ್ಮೆ, ಅಮರಶಿಲ್ಪಿಜಕಣಾಚಾರಿ, ಚಿನ್ನದಗೊಂಬೆ, ಮನೆಅಳಿಯ, ಮಾವನಮಗಳು, ನನ್ನಕರ್ತವ್ಯ, ಬದುಕುವದಾರಿ (ಕಟ್ಟಕಡೆಯ ಕನ್ನಡ ಫಿಲಂ)

-ಕುಮಾರಕವಿ ನಟರಾಜ್
 9036976471