ಬೆಂಗಳೂರು: ಕೋವಿಡ್-19 ರ ಲಾಕ್ಡೌನ್ ಸಮಯದಲ್ಲಿ ರಾಜ್ಯದ ರೈತರು ಅದರಲ್ಲೂ ಮುಖ್ಯವಾಗಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳ ರೈತರಿಗೆ ಕಾಲಕಾಲಕ್ಕೆ ಕೃಷಿ ತಾಂತ್ರಿಕ ಮಾಹಿತಿ ಹಾಗೂ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲು ಕಳೆದ ಬಾರಿಯಂತೆ ಈ ಬಾರಿಯೂ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, “ಯು.ಎ.ಎಸ್.(ಬಿ) ಅಗ್ರೀವಾರ್ ಘಟಕ ಮತ್ತು “ಜಿಲ್ಲಾ ಸಮನ್ವಯ ಸಮಿತಿಗಳನ್ನು ರಚಿಸಿದೆ.
ಯು.ಎ.ಎಸ್.(ಬಿ) ಅಗ್ರೀವಾರ್ ಘಟಕವು ಜಿ.ಕೆ.ವಿ.ಕೆ. ಯ ಮುಖ್ಯದ್ವಾರದಲ್ಲಿರುವ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರು ಉಚಿತ ದೂರವಾಣಿ ಸಂಖ್ಯೆ: 18004250571 ಗೆ ಕರೆ ಮಾಡಿ ತಮ್ಮ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು. ಇದಲ್ಲದೇ ವಾಟ್ಸ್ಆಫ್ ಸಂಖ್ಯೆ: 9482477812ಗೆ ಕೃಷಿ ಸಮಸ್ಯೆಯ ಚಿತ್ರವನ್ನು ಕಳುಹಿಸಿ ಸೂಕ್ತ ಪರಿಹಾರವನ್ನು ಪಡೆದುಕೊಳ್ಳಬಹುದು. ಮುಂದುವರೆದು “ಕೃಷಿ ಬೆಳೆಗಳ ಆಧುನಿಕ ಬೇಸಾಯ ಪದ್ಧತಿಗಳು” ಪುಸ್ತಕದ ಪಿ.ಡಿ.ಎಫ್. ಪ್ರತಿಯನ್ನು ಉಚಿತವಾಗಿ ವಾಟ್ಸ್ಆಫ್ ಮೂಲಕ ಮೊಬೈಲ್ನಲ್ಲಿ ಪಡೆಯಲು ಮೊಬೈಲ್ ಸಂಖ್ಯೆ: 9591347043, 9972035456 ಗೆ ವಾಟ್ಸ್ಆಫ್ ಸಂದೇಶವನ್ನು ಕಳುಹಿಸಿ ಪಡೆಯಬಹುದು. ಅಗ್ರೀವಾರ್ ಘಟಕ ಮತ್ತು ಜಿಲ್ಲಾ ಸಮನ್ವಯ ಸಮಿತಿಗಳ ವಿವರವೂ ಇಲ್ಲಿದೆ.