
ಮೈಸೂರು,ಫೆಬ್ರವರಿ 02- ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಸಂಸ್ಥೆಯಾದ ಮೆಃ ಎಂ.ಎಸ್.ಟಿ.ಸಿ ಲಿಮಿಟೆಡ್ ಮೂಲಕ ಮೈಸೂರು ಘಟಕದ ಕೆ.ಎಸ್.ಆರ್.ಪಿಯ 5ನೇ ಘಟಕಕ್ಕೆ ಸೇರಿದ 8 ಸಂಖ್ಯೆಯ ವಿವಿಧ ಮಾದರಿಯ ಅನುಪಯುಕ್ತ ಪೊಲೀಸ್ ವಾಹನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಮೈಸೂರಿನ ಕೆ.ಎಸ್.ಆರ್.ಪಿ ಘಟಕದ 5ನೇ ಪಡೆಯ ಕಮಾಂಡೆಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಎ-09-ಜಿ-458 ಹೀರೋಹೊಂಡ ಮೋ.ಸೈಕಲ್, ಕೆ.ಎ-09-ಜಿ-459 ಹೀರೋಹೊಂಡ ಮೋ.ಸೈಕಲ್, ಕೆ.ಎ-09-ಜಿ-516 ಯಮಾ ಮೋ.ಸೈಕಲ್, ಕೆ.ಎ-09-ಜಿ-572 ಫಿಯಾರೋ ಮೋ.ಸೈಕಲ್, ಕೆ.ಎ-09-ಜಿ-426 ಮಹೀಂದ್ರಾ ಜೀಪು, ಕೆ.ಎ-09-ಜಿ-508 ಟಾಟಾಸ್ಪೇಷಿಯೋ ಜೀಪು, ಕೆ.ಎ-09-ಜಿ-541 ಮ. ಮಾರ್ಷಲ್ ಜೀಪು, ಕೆ.ಎ-03-ಜಿ-7057 ಈ ಎಲ್ಲಾ ವಾಹನಗಳನ್ನು ಹಾರಾಜು ಮಾಡಲಾಗುತ್ತಿದೆ.
ಆಸಕ್ತಿ ಇರುವ ಬಿಡ್‌ದಾರರು ಮೆಃ ಎಂ.ಎಸ್.ಟಿ.ಸಿ.ಲಿಮಿಟೆಡ್ www.mstcindia.co.in ವೆಬ್‌ಸೈಟ್‌ನಲ್ಲಿ ಹೆಸರನ್ನು ನೊಂದಾಯಿಸಿಕೊಡು ಫೆಬ್ರವರಿ 15 ರಂದು ಬೆಳಿಗ್ಗೆ 11 ರಿಂದ ಸಂಜೆ 6.30 ಗಂಟೆಯವರೆಗೆ ಇ-ಹರಾಜುವಿನಲ್ಲಿ ಭಾಗವಹಿಸಿ ಬಿಡ್ ಮೂಲಕ ವಾಹನಗಳನ್ನು ಪಡೆಯಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.