ಬೆಂಗಳೂರು: ರಾಜ್ಯಾದಾದ್ಯಂತ ಹರಡುತ್ತಿರುವ ಕೋವಿಡ್-19 (ಕೊರೋನಾ ವೈರಸ್) ವೈರಾಣುವಿನ ಎರಡನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೆಲವು ನೌಕರರು ಕೋವಿಡ್-19, ಕೊರೋನಾ ಸೊಂಕಿಗೆ ತುತ್ತ್ತಾಗಿದ್ದು, ಆಕ್ಸಿಜನ್ ಮತ್ತು ಮಾಸ್ಕ್ ಇನ್ನಿತರೆ ಸಾಮಗ್ರಿಗಳನ್ನು ಖರೀದಿಸಿ ವಿತರಿಸುವ ಸಂಬಂಧ ಕರ್ನಾಟಕ ರಾಜ್ಯ ಮುಖ್ಯವಿಶ್ವವಿದ್ಯಾನಿಲಯದ ಎಲ್ಲಾ ನೌಕರರ ಮೇ 2021೧ರ ಮಾಹೆಯ ವೇತನದಲ್ಲಿ ಒಂದು ದಿನದ ವೇತನವನ್ನು ಕೊಡುಗೆಯಾಗಿ ನೀಡಲಾಗಿದ್ದು, ಇದರಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹತ್ತು ಆಕ್ಸಿಜನ್ ಕಾನ್ಸೆನ್‌ಟ್ರೇಟರ್ ಹಸ್ತಾಂತರಿಸಿ, ಮಂಡಕಳ್ಳಿಯಲ್ಲಿರುವ ಕ.ರಾ,ಮು.ವಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಾರ್ವಜನಿಕ, ಕರಾಮುವಿಯ ನೌಕರರ ಅನುಕೂಲಕಕ್ಕಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಅಳವಡಿಸಲಾಗುವುದೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕುಲಸಚಿವರು ತಿಳಿಸಿದ್ದಾರೆ.

By admin