ಸಕಲೇಶಪುರ: ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಲ್ಲಿ ಸಕಲೇಶಪುರ ಪುರಸಭೆ ವಿಫಲವಾಗಿದ್ದು ಪರಿಣಾಮ ನಗರದ ಶ್ರೀನಿವಾಸ ಕಲ್ಯಾಣ ಮಂಟಪದ ಹಿಂಭಾಗ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದ್ದು, ಸುತ್ತಮುತ್ತಲಿನ ಜನ ಮೂಗು ಮುಚ್ಚಿಕೊಂಡು ಜೀವನ ನಡೆಸುವಂತಾಗಿದೆ.
ಪುರಸಭಾ ವ್ಯಾಪ್ತಿಯ ಎಲ್ಲ ಇಪ್ಪತ್ಮೂರು ವಾರ್ಡ್‌ಗಳಲ್ಲಿ ಹಣ ಸಂಗ್ರಹಿಸಿ ಖಾತೆ ಬದಲಾವಣೆ ಮಾಡುವ ಸಂದರ್ಭದಲ್ಲಿ ಕಸದ ತೆರಿಗೆ. ನೀರಿನ ತೆರಿಗೆ ಮತ್ತು ಇನ್ನಿತರೆ ತೆರಿಗೆಗಳನ್ನು ಪುರಸಭೆ ವಸೂಲಿ ಮಾಡಿದರೂ ಕಸ ವಿಲೇವಾರಿ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದು ಇದರ ಪರಿಣಾಮ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನಾದರೂ ಈಗಿರುವ ಕಸದ ರಾಶಿಯನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ಕಸ ಸಂಗ್ರಹಣೆಗೆ ಚಿಂತನೆ ನಡೆಸುವುದರೊಂದಿಗೆ ಪಟ್ಟಣವನ್ನು ಶುಚಿಯಾಗಿಡಲು ಕ್ರಮ ವಹಿಸಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.