ಕನ್ನಡಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಪ್ರತಿಮೆಯನ್ನು ಬೆಂಗಳೂರಿನ ಮಾಗಡಿ ಟೋಲ್ ಗೇಟ್ ಬಳಿ ಕಿಡಿಗೇಡಿಗಳು ಧ್ವಂಸಗೊಳಿಸಿರುವದನ್ನು ಖಂಡಿಸಿ ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮೈಸೂರಿನ ಜಗನ್ಮೋಹನ ಅರಮನೆಯ ಮುಂಭಾಗ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು
ಇದೇ ಸಂಧರ್ಭದಲ್ಲಿ ಸಾಹಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ ಮಾತನಾಡಿ ವಿಷ್ಣುವರ್ಧನ್ ರವರ ಕೊಡುಗೆ ಕನ್ನಡಚಿತ್ರರಂಗಕ್ಕೆ ಅಪಾರ ಸಹಸ್ರಾರು ಕಲಾವಿದರಿಗೆ ಜೀವನರೂಪಿಸಿ ವೇದಿಕೆ ಕಲ್ಪಿಸಿಕೊಟ್ಟು ಆದರ್ಶರಾಗಿದ್ದಾರೆ, ವಿಷ್ಣುವರ್ಧನ್ ರವರು ಬದುಕಿದ್ದಾಗಲೂ ಸಹ ಬೆಳವಣಿಗೆಯನ್ನು ಸಹಿಸದ ತೊಂದರೆಕೊಡುತ್ತಿದ್ದರು ಈಗ ಸತ್ತಮೇಲೂ ಸಹ ವಿನಾಕಾರಣ ತೊಂದರೆ ಕೊಡುತ್ತಿರುವ ಕಿಡಿಗೇಡಿಗಳು ಪ್ರತಿಮೆ ಧ್ವಂಸ ಮಾಡುವವರೆಗೂ ಮುಂದುವರೆದಿರುವುದು ಕೊಟ್ಯಾಂತರ ವಿಷ್ಣು ಅಭಿಮಾನಿಗಳಿಗೆ ನೋವುಂಟಾಗಿದೆ, ವಿಷ್ಣುವರ್ಧನ್ ರವರು ಜನಪ್ರಿಯ ಕಲಾವಿದರಷ್ಟೆಯಲ್ಲದೇ ಸಾರ್ವಜನಿಕ ಆಸ್ತಿಯಾಗಿದ್ದಾರೆ, ಪ್ರತಿಮೆಯಿದ್ದ ಸ್ಥಳದಲ್ಲಿ ಯಾವುದೇ ತಕರಾರು ಇದ್ದರೇ ನ್ಯಾಯಯುತವಾಗಿ ಪರಿಹರಿಸಬೇಕಿತ್ತು ಅದನ್ನ ಬಿಟ್ಟು ಧ್ವಂಸಗೊಳಿಸಿರುವ ಉದ್ದೇಶದ ಬಗ್ಗೆ ತನಿಖೆಯಾಗಬೇಕು ಮತ್ತು ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಲು ಮುಂದಾಗಬೇಕು ಮತ್ತು ರಾಜ್ಯದ ನಾನಾಕಡೆ ವಿಷ್ಣು ಅಭಿಮಾನಿಗಳು ನಿರ್ಮಿಸಿರುವ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರೆ ನೀಡಿದರು
ಪ್ರತಿಭಟನೆಯಲ್ಲಿ ವಿಷ್ಣುವರ್ಧನ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ, ಯುವಮುಖಂಡ ಅಜಯ್ ಶಾಸ್ತ್ರಿ, ಗುರುರಾಜ್ ಶೆಣೈ, ಲೋಹಿತ್, ಹರೀಶ್ ನಾಯ್ಡು, ಬಸಪ್ಪ, ಅರುಣ್, ಸುಭಾಷ್, ಧನರಾಜ್,ಸಂತೋಷ್ ,ಬಸವರಾಜು ,ಹಾಗೂ ಇನ್ನಿತರರು ಹಾಜರಿದ್ದರು
[16:15, 12/26/2020] S ಮಹೇಶ್ ಸಂಜೆ ಸಮಾಚಾರ: ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀ M ಅಪ್ಪಣ್ಣನವರು ಇಂದು ಮೈಸೂರಿನ ಪ್ರಸಿದ್ಧ ಹೋಟೆಲ್ ಆದ ಲಲಿತ್ ಮಹಲ್ ಗೆ ಭೇಟಿ ನೀಡಿ ಮಹಲ್ ನಲ್ಲಿ ನಡೆಯಬೇಕಿರುವ ದುರಸ್ಥಿ ಕಾರ್ಯಗಳನ್ನು ವೀಕ್ಷಣೆ ಮಾಡಿ, ಹೋಟೇಲ್ ನ ಸ್ವಚ್ಛತೆ, ಪ್ರವಾಸಿಗರ ಸುರಕ್ಷತೆ, ಹೋಟೆಲ್ ನ ನಿರ್ವಹಣೆ, ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್ ರವರು, ಪ್ರಭಾಕರ್ ಹುಣಸೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ರವರು, ಲಲಿತ್ ಮಹಲ್ ನ ಮ್ಯಾನ್ಯಜರ್ ಆದ ಅನಿಕೇತ್ ರವರು, ಆಸಿಫ್, ನೂರಿ, ಸೋಮನಾಯಕ.ಮಲ್ಲಿಕಾರ್ಜುನ.ಮಧುವನಕುಮಾರ್. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By admin