ಮೈಸೂರು ನಗರದ ಸೌತ್‌ನಲ್ಲಿದ್ದ ಸಂಪ್ರದಾಯಸ್ಥ ಕುಟುಂಬದ ಮೇಷ್ಟ್ರ ಮಗ ಸಂಪತ್‌ಕುಮಾರ್.  ಪೋಷಕರ ಆಸೆಯಂತೆ ಪದವೀಧರನಾಗುವ ಬದಲು, ದೈವೇಚ್ಚೆಯಂತೆ ಕಲಾಧರನಾಗಿ 'ವಂಶವೃಕ್ಷ' ಚಿತ್ರದ ಮೂಲಕ ಎಂಟ್ರಿ ಕೊಟ್ಟ ಕಾಲದಲ್ಲಿ ಶ್ರೀನಾಥ್, ಲೋಕೇಶ್, ಚಂದ್ರಶೇಖರ್, ರಾಮಕೃಷ್ಣ, ಅಂಬರೀಷ್, ಅನಂತನಾಗ್, ಶಂಕರನಾಗ್ ಮುಂತಾದ ಅನೇಕ ನಟರೂ ಪಾದಾರ್ಪಣೆ ಮಾಡಿದ್ದರು. ಅವರೆಲ್ಲರಿಗೆ ಪೈಪೋಟಿ ನೀಡಿ ಮುನ್ನುಗ್ಗುವುದು ಸುಲಭದ ಮಾತಾಗಿರಲಿಲ್ಲ. ಮೇರುಪರ್ವತಗಳಾದ ರಾಜ್‌ಕುಮಾರ್ ಉದಯಕುಮಾರ್ ಕಲ್ಯಾಣಕುಮಾರ್ ರಾಜೇಶ್ ಗಂಗಾಧರ್ ಅಂಥವರ ಚಿತ್ರಗಳನ್ನು ಎದುರಿಸಬೇಕಾದ ಟಫ಼್ ದಿನಗಳವು?! ಚಂದನವನವು ಸಮರ್ಥ ಹೀರೋಗಳ ಸಮೃದ್ಧಿಯಿಂದಾಗಿ ತೀವ್ರ ಸ್ಫರ್ಧೆಯಿಂದ ಕೂಡಿತ್ತು.  ಅಂಥ ಸುನಾಮಿಯಲ್ಲಿ ಈಜಿ ದಡಸೇರಿ ಉತ್ತಮ ಕಲಾವಿದನಾಗಿ ಬೇರೂರಿದ್ದು ಸಾಮಾನ್ಯದ ಸಾಮರ್ಥ್ಯವಲ್ಲ! ಗಾಡ್‌ಫ಼ಾದರ್ ಪುಟ್ಟಣ್ಣಕಣಗಾಲ್, ಸಿದ್ಧಲಿಂಗಯ್ಯ, ಎಸ್.ವಿ.ರಾಜೇಂದ್ರ ಸಿಂಗ್‌ಬಾಬು, ಡಿ.ರಾಜೇಂದ್ರಬಾಬು, ದ್ವಾರಕೀಶ್, ಭಾರ್ಗವ, ರವಿ, ಜೋಸೈಮನ್, ಸಾಯಿಪ್ರಕಾಶ್, ಪಿ.ವಾಸು, ವಿಜಯಾನಂದ್, ಮುಂತಾದ ಅತಿರಥ ಮಹಾರಥರ ಗರಡಿಯಲ್ಲಿ ಪಳಗಿ ಚಂದನವನದ ಮೈಲಿಗಲ್ಲಾದರು. ದಕ್ಷಿಣ ಭಾರತ ಚಿತ್ರರಂಗದ ನಾಯಕ ನಟರಲ್ಲಿ ಅಗ್ರಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದರು! 





 ಸ್ಯಾಂಡಲ್‌ವುಡ್ನ ಪ್ರಪ್ರಥಮ ಎಡಗೈ/ಎಡಚ ಸ್ಮಾರ್ಟ್ ಹ್ಯಾಂಡ್ಸಮ್ ಹೀರೋ! ವಿಷ್ಣುವರ್ಧನನಾಗಿ ನಾಮಕರಣಗೊಂಡು ನಟಿಸಿದ ಮೊದಲ ಈಸ್ಟ್‌ಮನ್‌ಕಲರ್ ಸ್ಲೋಮೋಶನ್ ಫ಼ಿಲಂ ನಾಗರಹಾವು ಡಾ||ರಾಜ್‌ಕುಮಾರ್‌ನಂತರ ಮೊದಲಸ್ಥಾನವನ್ನು ೩೦ವರ್ಷಕಾಲ ಉಳಿಸಿಕೊಂಡಿದ್ದ ಜನಪ್ರಿಯ ನಟ. ಮೈಸೂರು[ರತ್ನ]ಹುಲಿ ಸಾಹಸಸಿಂಹ ಗೌ||ಡಾಕ್ಟರೇಟ್ ಮುಂತಾದ ಅನೇಕ ಬಿರುದಾಂಕಿತ ನಟ. ಅತಿಹೆಚ್ಚು ರೀಮೇಕ್ ಚಿತ್ರಗಳಲ್ಲಿ ಮತ್ತು ಕನ್ನಡೇತರ [ಹಿಂದಿ,ಮರಾಠಿ,ತೆಲುಗು,ತಮಿಳು, ಮಲೆಯಾಳಂ,ತುಳು,ಕೊಂಕಣಿ] ಚಿತ್ರಗಳಲ್ಲಿ ನಟಿಸಿದ ಪ್ರಪ್ರಥಮ ಕನ್ನಡ ಹೀರೋ!  ಒಟ್ಟು ೮ಭಾಷೆಗಳ ೨೨೨ಚಿತ್ರಗಳಲ್ಲಿ ನಟಿಸಿದ ಅಭಿನಯಭಾರ್ಗವ.  ಮೈಸೂರಿನ ಲಕ್ಷ್ಮೀ ಟಾಕೀಸಲ್ಲಿ ವಿಷ್ಣುವಿನ (ಚೊಚ್ಚಲ ತಮಿಳ್ ಫ಼ಿಲಂ 'ಅಲೈಗಳ್' ಸೇರಿದಂತೆ) ಅತಿಹೆಚ್ಚು ಚಿತ್ರಗಳು ಪ್ರದರ್ಶನ ಕಂಡಿದೆ!  ಅತಿಹೆಚ್ಚು ಚಿತ್ರಗಳಲ್ಲಿ ಅತಿಥಿ/ಗೌರವ ನಟನಾಗಿ ಕಾಣಿಸಿಕೊಂಡ ಪ್ರಥಮ ನಾಯಕನಟ. ಅತಿಹೆಚ್ಚು [೫೯] ಹೀರೋಯಿನ್ ಜತೆ ಅಭಿನಯಿಸಿದ ಪ್ರಥಮ ಹೀರೋ. ಜಿಮ್ಮಿಗಲ್ಲು [ತುತ್ತು ಅನ್ನ ತಿನ್ನೋಕೆ] ಮೂಲಕ ಹಿನ್ನೆಲೆ ಗಾಯಕರಾದರು. ೮ಖಳನಟರು ಅಭಿನಯಿಸಿದ್ದ ಮೊಟ್ಟಮೊದಲ ಕನ್ನಡಚಿತ್ರ ಸಾಹಸಸಿಂಹ! ವಿಷ್ಣುವರ್ಧನ್-ಸಂಗೀತ ಬಿಜಲಾನಿ ಜೋಡಿಯ 'ಪೊಲೀಸ್‌ಮತ್ತುದಾದಾ' ಹಾಗೂ 'ಇನ್ಸ್‌ಪೆಕ್ಟರ್‌ಧನುಷ್' (ಕನ್ನಡ+ಹಿಂದಿ) ಎರಡೂ ಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಗೊಂಡ ಕನ್ನಡ ನಟನ ಪ್ರಥಮ ಚಿತ್ರ! ಖ್ಯಾತ ನಟ-ಗಾಯಕ ರಾಜ್‌ಕುಮಾರ್ ಮತ್ತೊಬ್ಬ ಖ್ಯಾತ ನಟ-ಗಾಯಕನಿಗೆ ಹಿನ್ನೆಲೆ ಗಾಯಕನಾಗಿ [ಧಣಿ ಚಿತ್ರದಲ್ಲಿ 'ನೀ ಕಂಡ ಆ ಲೋಕ'] ಹಾಡಿದ್ದು ಪ್ರಪಂಚದ ಸಿನಿಮಾ ಚರಿತ್ರೆಯಲ್ಲೇ ಚಿರಸ್ಮರಣೀಯ ದಾಖಲೆ!!



 ಭಾರತಿ ನಟಿಸಿದ ೧೦೦ನೇಚಿತ್ರ 'ಭಾಗ್ಯಜ್ಯೋತಿ' ಚಿತ್ರೀಕರಣದ ವೇಳೆ ಆಕೆಯೊಡನೆ ವಿಷ್ಣುವಿನ ವಿವಾಹ!  ಈ ಚಿತ್ರದ 'ದಿವ್ಯಗಗನ ನಿವಾಸಿನಿ' ಸಂಸ್ಕೃತ ಯುಗಳಗೀತೆಗೆ ನಾಯಕ ನಾಯಕಿಯಾಗಿ ಅಭಿನಯಿಸಿದ ಪ್ರಪ್ರಥಮ ತಾರಾದಂಪತಿ! ಭೂತಯ್ಯನ ಮಗ ಅಯ್ಯು ಚಿತ್ರೀಕರಣ ಸಂದರ್ಭದಲ್ಲಿ, ತಂದೆ ನಿಧನ ವಾರ್ತೆ ಕೇಳಿದರೂ ಚಿತ್ರೀಕರಣ ನಿಲ್ಲಿಸದೆ ಮುಂದು ವರೆಸಿದ್ದಾಗ ಚಿತ್ರತಂಡದ ಒತ್ತಾಯಕ್ಕೆ ಮಣಿದು ಪಿತಾಶ್ರೀ ಅಂತ್ಯಕ್ರಿಯೆಗೆ ತೆರಳಿದ ಮಹಾನ್‌ಕಲಾವಿದ! ಬಿಡುವಿನ ವೇಳೆ ಪುಸ್ತಕ ಓದುವ ಹವ್ಯಾಸವಿದ್ದ ಅಪರೂಪದನಟ. ರೋಬ್ಬರಿ ೨೦೦ಕನ್ನಡ ಚಿತ್ರಗಳಲ್ಲಿ ನಟಿಸಿದ ಪ್ರಪ್ರಥಮ ನಾಯಕನಟ! ಮುತ್ತಿನಹಾರ;-ಮೈನಸ್ ೫-೧೦ಡಿಗ್ರಿ ಸೆಲ್ಶಿಯಸ್‌ನ ಹಿಮಾಲಯದ ಪಾಕಿಸ್ತಾನ್-ಇಂಡಿಯ ಬಾರ್ಡರ್‌ನಲ್ಲಿ ಚಿತ್ರೀಕರಿಸಿದ ಚೊಚ್ಚಲ ಕನ್ನಡ ಚಿತ್ರ. ಆ ಸಂದರ್ಭದಲ್ಲಿ ಗಾಯಗೊಂಡು ಅನಾರೋಗ್ಯದ ನೋವು ಅನುಭವಿಸಿದರೂ ನೈಜತೆಗೆ ಒತ್ತು ನೀಡಲು ತಲೆಗೂದಲು ಬೋಳಿಸಿಕೊಂಡು[ವಿಗ್‌ಧರಿಸದೆ] ನಟಿಸಿ ಚಿತ್ರರಂಗವೆ ಅಚ್ಚರಿ ಪಡುವಂತೆ ಮಾಡಿದ ಧೀರ! ತಮ್ಮ ೫೦ನೇ ಹುಟ್ಟುಹಬ್ಬದ ನಂತರ ಸ್ವಯಂ ಇಷ್ಟಪಟ್ಟು ವೈರಾಗ್ಯದೆಡೆಗೆ ಜಾರಿಕೊಂಡ ನಟಶ್ರೇಷ್ಠ! ಆಪ್ತಮಿತ್ರ-ಆಪ್ತರಕ್ಷಕ ಚಿತ್ರಗಳು ಅವರ ಮನಸ್ಸಿನ ಮೇಲೆ ಅಗಾಧ/ಗಂಭೀರ ಪರಿಣಾಮವುಂಟುಮಾಡಿದ್ದವು? ನಿರ್ಲಿಪ್ತತೆಯೆಡೆಗೆ ಒಲವುತೋರಿಸಿ ಆಧ್ಯಾತ್ಮಿಕತೆ ಅ[ಒ]ಪ್ಪಿಕೊಂಡ ಅಸಾಧಾರಣ ನಟ!

ವಿಷ್ಣುವರ್ಧನ್ ಸ್ವಯಂ ತಾವೇ ಹೇಳಿದ್ದಂತೆ ಅವರ:-
ಅಂತಿಮಆಸೆ ಮೈಸೂರಿನಲ್ಲಿ ನೆಲೆಸುವುದು, ಮೆಚ್ಚಿನವೃತ್ತಿ ಉಪಾಧ್ಯಾಯವೃತ್ತಿ, ಮೆಚ್ಚಿನಕಾರು ಮರ್ಸಿಡೆಸ್‌ಬೆಂಜ಼್, ಮೆಚ್ಚಿನ ಗೆಳೆಯ ಅಂಬರೀಶ್, ಮೆಚ್ಚಿನನಿರ್ಮಾಪಕ ದ್ವಾರಕೀಶ್, ಮೆಚ್ಚಿನನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು, ಮೆಚ್ಚಿನನಟಿ ಕಲ್ಪನಾ, ಮೆಚ್ಚಿನಕ್ರೀಡೆ ಕ್ರಿಕೆಟ್[ತತ್ಪರಿಣಾಮ’ವಿಷ್ಣುಕಪ್ ಕ್ರಿಕೆಟ್ ಪಂದ್ಯಾವಳಿ’] ಮೆಚ್ಚಿನಫ಼ಿಲಂಸ್ : ಹಿಂದಿಯ ಮದರ್‌ಇಂಡಿಯ, ಕನ್ನಡದ ಸತ್ಯಹರಿಶ್ಚಂದ್ರ, ತೆಲುಗಿನ ಶಂಕರಾಭರಣಮು, ತಮಿಳಿನ ಮರೋಚರಿತ್ರ ಹಾಗೂ ಅವರದ್ದೇ ಚಿತ್ರಗಳಲ್ಲಿ ಹೆಚ್ಚು ಇಷ್ಟವಾದುದು; ಮಲಯಮಾರುತ! ಮೆಚ್ಚಿನ ನಟರು:ರಾಜ್‌ಕಪೂರ್,ದಿಲೀಪ್‌ಕುಮಾರ್,ಮೀನಕುಮಾರಿ,ರೇಖ,ಶಿವಾಜಿಗಣೇಶನ್,ರಜನಿಕಾಂತ್,ಕಮಲಹಾಸನ್,ಡಾ||ರಾಜ್‌ಕುಮಾರ್, ಶಂಕರ್‌ನಾಗ್, ಸುದೀಪ್. ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಮಾಡುವುದರಿಂದ ತೃಪ್ತಿಇದೆ ಎಂದೂ ಹೇಳಿದ್ದ ಮಹಾನುಭಾವ!

 ಡಾ||ರಾಜ್ ಅಭಿಮಾನಿಗಳ ಸಂಘ ಸ್ಥಾಪಿಸಿದ ಶ್ರೀ ಎಂ.ರಾಮೇಗೌಡರೆ 'ಡಾ||ವಿಷ್ಣು ವರ್ಧನ್ ಅಭಿಮಾನಿಗಳ ಸಂಘ' ಸ್ಥಾಪಿಸಿದರು. ದತ್ತುಪುತ್ರಿ-ಅಳಿಯನಲ್ಲಿ ನೆಮ್ಮದಿ ಕಂಡು, ಸ್ವಂತ ಮಕ್ಕಳಿಲ್ಲವೆಂಬ ಚಿಂತೆ ಮರೆತ ಹೃದಯಸಿರಿವಂತ! ಎಲ್ಲಾವರ್ಗದ ಎಲ್ಲಾವಯಸ್ಸಿನ ಶ್ರೀಸಾಮಾನ್ಯರೊಡನೆ ಬೆರೆಯುತ್ತಿದ್ದ ಜನನಾಯಕ. 'ವಿಷ್ಣುವರ್ಧನ್ ಚಾರಿಟಬಲ್ ಟ್ರಸ್ಟ್' ಮೂಲಕ ರಾಜ್ಯಾದ್ಯಂತ ಅನೇಕ ಸಹಾಯವಾಣಿ ಕೇಂದ್ರಗಳಿವೆ. ಡಾ||ವಿಷ್ಣು ಸೇನಾ ಸಮಿತಿಯೂ ಅಸ್ತಿತ್ವಕ್ಕೆ ಬಂದು ಕನ್ನಡ ಕಲೆ, ಸಾಹಿತ್ಯ, ನಾಟಕ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಮಾಡುತ್ತಿದೆ. ೩೦.೧೨.೨೦೦೯ರಂದು ಹೃದಯಾಘಾತದಿಂದ ಮೈಸೂರು ವಿಕ್ರಂ ಆಸ್ಪತ್ರೆಯಲ್ಲಿ ದೈವಾಧೀನರಾದರು. ವಿಷ್ಣುವರ್ಧನ್ ಸ್ವರ್ಗಸ್ಥರಾದಮೇಲೆ ೨೦೧೨ರಲ್ಲಿ ಸುದೀಪ್ ನಟಿಸಿದ ವಿಷ್ಣುವರ್ಧನ ಚಿತ್ರ ೦iiಶಸ್ವಿಯಾಯ್ತು.  ಇದರ ನಿರ್ಮಾಪಕರೂ ವಿಷ್ಣು ಮೆಚ್ಚಿದ್ದ ಕುಳ್ಳದ್ವಾರಕೀಶ್! ೨೦೧೬ರಲ್ಲಿ 'ಗ್ರಾಫ಼ಿಕ್ಸ್‌ವಿಷ್ಣುವರ್ಧನ್' ಸೃಷ್ಟಿಸಿ ಮತ್ತೊಂದು 'ನಾಗರಹಾವು' ಸಿನಿಮಾ ಬಿಡುಗಡೆ? ಇಂಥಹದ್ದೊಂದು ಪ್ರಯತ್ನ-ಪ್ರಯೋಗ ಚಂದನವನದಲ್ಲಿ ನೂತನ ದಾಖಲೆ ನಿರ್ಮಿಸಿತು! 

ವಿಷ್ಣುವರ್ಧನ್‌ಬಗ್ಗೆ ಗಣ್ಯರ ಚೆನ್ನುಡಿಗಳು:-


ಅನಿಲ್‌ಕಪೂರ್; ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮೇರುನಟ. ಕನ್ನಡದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಮೂಲಕ ನಾನು ಪಾದಾರ್ಪಣೆ ಮಾಡಿದ್ದರೂ ವಿಷ್ಣು ಜತೆ ನಟಿಸಬೇಕೆಂಬ ಆಸೆ ಕಡೆಗೂ ಈಡೇರಲೆ ಇಲ್ಲ ಎಂಬುದೆ ನನ್ನ ಕೊರಗು!


ಅಮಿತಾಬ್‌ಬಚ್ಚನ್; ಕನ್ನಡ ಸಿನಿಮಾದ ಹ್ಯಾಂಡ್ಸಮ್ ಅಂಡ್ ಸ್ಮಾರ್ಟ್ ಹೀರೋ ವಿಷ್ಣು. ನಾನು ಅವರನ್ನು ತುಂಬಾ ಮೆಚ್ಚಿಕೊಂಡಿದ್ದೇನೆ.


ಚಿರಂಜೀವಿ; ವಿಷ್ಣುವರ್ಧನ್ ಕನ್ನಡದ ಸೂಪರ್ ಸ್ಟಾರ್ ಮಾತ್ರವಲ್ಲ ಆತನೊಬ್ಬ ಸೂಪರ್ ಹೀರೋ ಕೂಡ ಹೌದು
ಶಿವಾಜಿಪ್ರಭು; ವಿಷ್ಣು ಕರ್ನಾಟಕ ರಾಜ್ಯದ ಮತ್ತು ಕನ್ನಡಿಗರ ಪ್ರತಿನಿಧಿ


ದತ್ತಾತ್ರೇಯ(ದತ್ತಣ್ಣ); ವಿಷ್ಣು ೩೦ ವರ್ಷದಲ್ಲಿ ೨೦೦ ಸಿನಿಮಾದಲ್ಲಿ ನಟಿಸುವುದು ಸಾಮಾನ್ಯವಲ್ಲ. ಹಗಲಿರುಳು ದುಡಿಯುತ್ತಿದ್ದ ಕಾರಣಕ್ಕಾಗಿ ಅವರು ಜನಮಾನಸದಲ್ಲಿ ಇಂದಿಗೂ ‘ಯಜಮಾನ’ನಾಗಿ ಪ್ರಜ್ವಲಿಸುತ್ತಿದ್ದಾರೆ.


ರಾಜ್‌ಕುಮಾರ್; ಒಳ್ಳೆ ತೊಂಡೆ ಹಣ್ಣಂಥ ಚೆಲುವ. ಯಾವ ಪಾತ್ರವಾದ್ರೂಸರಿ ಮಾಡಬಲ್ಲ. ಅದರಲ್ಲೂ ರಾಮಾಚಾರಿಯಂಥ ರೋಷದ ಪಡ್ಡೆಹುಡುಗನ ಪಾತ್ರವನ್ನ ನನಗಿಂತ ಚೆನ್ನಾಗೇ ಮಾಡುವಂಥ ಕಲೆಗಾರ.


ಎಚ್.ಎಸ್.ವೆಂಕಟೇಶಮೂರ್ತಿ; ವಿಷ್ಣುವರ್ಧನ್ ತಮ್ಮ ನಟನೆಯ ಜತೆಗೇ ಸಾಹಿತ್ಯದ ನಂಟು ಬೆಳೆಸಿಕೊಂಡಿದ್ದ ಪುಸ್ತಕ ಓದುವ ಅಭಿರುಚಿಯುಳ್ಳ ನm.


ಡಾ||ಯು.ಆರ್. ಅನಂತಮೂರ್ತಿ; ಹೆಚ್ಚು ಸಾಹಿತ್ಯಾಭಿಮಾನಿಯಾದ ವಿಷ್ಣುವಿನಂತಹ ಚಿತ್ರನಟರು ಬಲು ಅಪರೂಪ.

ವಿಷ್ಣುವರ್ಧನ್ ನಟಿಸಿದ ಕನ್ನಡ ಫ಼ಿಲಂಸ್

ಕ್ರ.ಸಂ. ಚಿತ್ರ      ಕ್ರ.ಸಂ. ಚಿತ್ರ     

ಪ್ರಶಸ್ತಿ ಪುರಸ್ಕಾರ

೧            ವಂಶವೃಕ್ಷ/೧೯೭೨         ೩೯        ಅಮರನಾಥ್[ಅತಿಥಿನಟ]          

೨            ನಾಗರಹಾವು       ೪೦       ಭಲೇಹುಡುಗ  

೩            ಸೀತೆಯಲ್ಲಸಾವಿತ್ರಿ/೧೯೭೩         ೪೧       ಮಧುರಸಂಗಮ             

೪            ಮನೆ ಬೆಳಗಿದ ಸೊಸೆ       ೪೨       ಸಿಂಗಾಪುರಲ್ಲಿರಾಜಾಕುಳ್ಳ           

೫            ಗಂಧದಗುಡಿ[ಅತಿಥಿ ನಟ]            ೪೩       ಅಸಾಧ್ಯಅಳಿಯ/೧೯೭೯            

೬            ಭೂತಯ್ಯನಮಗಅಯ್ಯು            ೪೪       ವಿಜಯ್‌ವಿಕ್ರಮ್[ದ್ವಿಪಾತ್ರ]     

೭            ಪ್ರೊಫ಼ೆಸರ್‌ಹುಚ್ಚೂರಾಯ[ಅತಿಥಿ ನಟ]               ೪೫       ನಾನಿರುವುದೆನಿನಗಾಗಿ  

೮            ಅಣ್ಣ ಅತ್ತಿಗೆ      ೪೬       ಮಾನಿನಿ             

೯            ದೇವರ ಗುಡಿ/೧೯೭೫     ೪೭       ನೆಂಟರೋಗಂಟುಕಳ್ಳರೋ        

೧೦         ಕೂಡಿಬಾಳೋಣ             ೪೮       ನನ್ನರೋಷ ನೂರುವರುಷ       

೧೧         ಕಳ್ಳಕುಳ್ಳ             ೪೯       ರಾಮಪರಶುರಾಮ/೧೯೮೦      

೧೨         ಭಾಗ್ಯಜ್ಯೋತಿ    ೫೦       ಕಾಳಿಂಗ              

೧೩         ನಾಗಕನ್ಯೆ            ೫೧        ಹಂತಕನಸಂಚು             

೧೪        ಒಂದೇರೂಪಎರಡುಗುಣ           ೫೨        ಮಕ್ಕಳಸೈನ್ಯ     

೧೫        ದೇವರುಕೊಟ್ಟವರ/೧೯೭೬        ೫೩        ಬಿಳಿಗಿರಿಯಬನದಲ್ಲಿ[ಅತಿಥಿನಟ]           

೧೬         ಹೊಸಿಲುಮೆಟ್ಟಿದಹೆಣ್ಣು             ೫೪        ಸಿಂಹಜೋಡಿ   

೧೭         ಮಕ್ಕಳಭಾಗ್ಯ     ೫೫        ರಹಸ್ಯರಾತ್ರಿ     

೧೮        ಬಂಗಾರದಗುಡಿ                ೫೬        ಬಂಗಾರದಜಿಂಕೆ             

೧೯         ಬಯಸದೆಬಂದಭಾಗ್ಯ/೧೯೭೭  ೫೭        ಡ್ರೈವರ್‌ಹನುಮಂತು  

೨೦         ಸೊಸೆತಂದಸೌಭಾಗ್ಯ     ೫೮        ಮನೆಮನೆಕಥೆ/೧೯೮೧

೨೧         ನಾಗರಹೊಳೆ[ಅತಿಥಿನಟ]           ೫೯        ನಾಗಕಾಳಭೈರವ            

೨೨         ಚಿನ್ನನಿನ್ನಮುದ್ದಾಡುವೆ              ೬೦         ಮಹಾಪ್ರಚಂಡರು        

೨೩         ಶ್ರೀಮಂತನಮಗಳು        ೬೧         ಗುರುಶಿಷ್ಯರು    

೨೪        ಸಹೋದರರಸವಾಲ್    ೬೨         ಸ್ನೇಹಿತರಸವಾಲ್          

೨೫        ಶನಿಪ್ರಭಾವ      ೬೩         ಅವಳಹೆಜ್ಜೆ      

೨೬         ಗಲಾಟೆಸಂಸಾರ               ೬೪        ಪ್ರೀತಿಸಿನೋಡು              

೨೭         ಕಿಟ್ಟುಪುಟ್ಟು     ೬೫        ಪೆದ್ದಗೆದ್ದ/೧೯೮೨[ಅತಿಥಿ ನಟ]               

೨೮        ಹೊಂಬಿಸಿಲು    ೬೬         ಸಾಹಸಸಿಂಹ   

೨೯         ಸಂದರ್ಭ/೧೯೭೮          ೬೭         ಕಾರ್ಮಿಕಕಳ್ಳನಲ್ಲ        

೩೦         ಕಿಲಾಡಿಕಿಟ್ಟು      ೬೮      ಊರಿಗೆಉಪಕಾರಿ            

೩೧         ವಂಶಜ್ಯೋತಿ    ೬೯        ಜಿಮ್ಮೀಗಲ್ಲು[ಹಿನ್ನೆಲೆಗಾಯಕ] 

೩೨         ಮುಯ್ಯಿಗೆಮುಯ್ಯಿ        ೭೦        ಸುವರ್ಣಸೇತುವೆ            

೩೩         ಸಿರಿತನಕ್ಕೆ ಸವಾಲ್         ೭೧        ಒಂದೇಗುರಿ        

೩೪        ಪ್ರತಿಮಾ              ೭೨        ಕಲ್ಲುವೀಣೆನುಡಿಯಿತು

೩೫        ನನ್ನಪ್ರಾಯಶ್ಚಿತ             ೭೩        ಸಿಡಿದೆದ್ದಸಹೋದರ/೧೯೮೩   

೩೬         ಸ್ನೇಹಸೇಡು       ೭೪       ಮುತ್ತದೆಭಾಗ್ಯ 

೩೭         ಕಿಲಾಡಿಜೋಡಿ                   ೭೫       ಗಂಧರ್ವಗಿರಿ    

೩೮        ವಸಂತಲಕ್ಷ್ಮಿ     ೭೬       ಗಂಡುಗಲಿರಾಮ            

೭೭         ಚಿನ್ನದಂಥಮಗ/೧೯೮೩              ೧೨೮    ನೀನುನಕ್ಕರೆ ಹಾಲುಸಕ್ಕರೆ          

೭೮        ಸಿಂಹಘರ್ಜನೆ  ೧೨೯     ಜಗದೇಕವೀರ/೧೯೯೧  

೭೯         ಪ್ರಚಂಡಕುಳ್ಳ[ಅತಿಥಿನಟ]         ೧೩೦     ಪೊಲೀಸ್‌ಮತ್ತುದಾದಾ

೮೦        ರುದ್ರನಾಗ/೧೯೮೪          ೧೩೧     ರಾಜಾಧಿರಾಜ/೧೯೯೨  

೮೧        ಖೈದಿ      ೧೩೨     ರವಿವರ್ಮ        

೮೨        ಬೆಂಕಿಬಿರುಗಾಳಿ               ೧೩೩     ಹರಕೆಯಕುರಿ  

೮೩        ಇಂದಿನರಾಮಾಯಣ   ೧೩೪     ನನ್ನಶತ್ರು          

೮೪        ಬಂಧನ                ೧೩೫     ಸಂಘರ್ಷ/೧೯೯೩         

೮೫        ಹುಲಿಹೆಜ್ಜೆ         ೧೩೬     ವೈಶಾಖದದಿನಗಳು        

೮೬        ಚಾಣಕ್ಯ               ೧೩೭     ನಾನೆಂದೂನಿಮ್ಮವನೆ  

೮೭        ಆರಾಧನೆ            ೧೩೮    ರಾಯರುಬಂದರುಮಾವನಮನೆಗೆ         

೮೮       ಮದುವೆಮಾಡುತಮಾಷೆನೋಡು           ೧೩೯     ವಿಷ್ಣುವಿಜಯ 

೮೯        ಕರ್ತವ್ಯ               ೧೪೦     ಮಣಿಕಂಠನಮಹಿಮೆ   

೯೦         ಮಹಾಪುರುಷ/೧೯೮೫   ೧೪೧   ನಿಷ್ಕರ್ಷ/೧೯೯೪           

೯೧         ವೀರಾಧಿವೀರ      ೧೪೨   ಟೈಮ್‌ಬಾಂಬ್

೯೨         ನೀಬರೆದಕಾದಂಬರಿ         ೧೪೩   ಕುಂತೀಪುತ್ರ      

೯೩         ಮರೆಯದಮಾಣಿಕ್ಯ         ೧೪೪  ಸಾಮ್ರಾಟ್         

೯೪        ನನ್ನಪ್ರತಿಜ್ಞೆ     ೧೪೫    ಮಹಾಕ್ಷತ್ರಿಯ 

೯೫        ಜೀವನಚಕ್ರ       ೧೪೬     ಹಾಲುಂಡತವರು          

೯೬         ನೀತಂದಕಾಣಿಕೆ               ೧೪೭     ಕಿಲಾಡಿಗಳು      

೯೭         ಕರ್ಣ/೧೯೮೬  ೧೪೮    ಕೋಣಈದೈತೆ[ಅತಿಥಿನಟ]        

೯೮        ಕಥಾನಾಯಕ   ೧೪೯     ಯಮಕಿಂಕರ   

೯೯         ಈಜೀವನಿನಗಾಗಿ              ೧೫೦     ಮೋಜುಗಾರಸೊಗಸುಗಾರ         

೧೦೦     ಸತ್ಯಜ್ಯೋತಿ       ೧೫೧     ದೀರ್ಘಸುಮಂಗಲಿ        

೧೦೧     ಕೃಷ್ಣಾನೀಬೇಗನೆಬಾರೋ            ೧೫೨     ಬಂಗಾರದಕಳಸ             

೧೦೨     ಮಲಯಮಾರುತ           ೧೫೩     ತುಂಬಿದಮನೆ  

೧೦೩     ಪ್ರೇಮಲೋಕ/೧೯೮೭[ಗೌರವ ನಟ]       ೧೫೪    ಕರುಳಿನಕುಡಿ   

೧೦೪     ಸೌಭಾಗ್ಯಲಕ್ಷ್ಮಿ ೧೫೫    ಹಿಮಪಾತ         

೧೦೫     ಕರುಣಾಮಯಿ ೧೫೬     ಅಪ್ಪಾಜಿ             

೧೦೬     ಜಯಸಿಂಹ        ೧೫೭     ಹಲೋಡ್ಯಾಡಿ 

೧೦೭     ಆಸೆಯಬಲೆ       ೧೫೮    ಕರ್ನಾಟಕಸುಪುತ್ರ        

೧೦೮    ಜೀವನಜ್ಯೋತಿ ೧೫೯     ಧಣಿ      

೧೦೯     ಶುಭಮಿಲನ      ೧೬೦     ಜೀವನದಿ           

೧೧೦     ಸತ್ಯಂಶಿವಂಸುಂದರಂ ೧೬೧     ಬಾಳಿನಜ್ಯೋತಿ               

೧೧೧     ಡಿಸೆಂಬರ್೩೧[ಅತಿಥಿ ನಟ]        ೧೬೨     ಮಂಗಳಸೂತ್ರ 

೧೧೨     ಒಲವಿನಆಸರೆ/೧೯೮೮               ೧೬೩     ಎಲ್ಲರಂಥಲ್ಲನನ್ನಗಂಡ              

೧೧೩     ನಮ್ಮೂರರಾಜ ೧೬೪     ಶೃತಿಹಾಕಿದಹೆಜ್ಜೆ            

೧೧೪     ಜನನಾಯಕ     ೧೬೫     ಜನನಿಜನ್ಮಭೂಮಿ        

೧೧೫     ಸುಪ್ರಭಾತ         ೧೬೬     ಲಾಲಿ   

೧೧೬     ಕೃಷ್ಣರುಕ್ಮಿಣಿ     ೧೬೭     ನಿಶ್ಯಬ್ಧ

೧೧೭     ದಾದಾ ೧೬೮    ಯಾರೇನೀನುಚೆಲುವೆ  

೧೧೮    ಮಿಥಿಲೆಯಸೀತೆಯರು[ಅತಿಥಿನಟ]         ೧೬೯     ಸಿಂಹದಗುರಿ     

೧೧೯     ಒಂದಾಗಿಬಾಳು ೧೭೦     ಹೆಂಡ್ತಿಗೆಹೇಳ್ತೀನಿ[ಅತಿಥಿನಟ]   

೧೨೦     ಹೃದಯಗೀತೆ     ೧೭೧     ವೀರಪ್ಪನಾಯಕ            

೧೨೧     ರುದ್ರ     ೧೭೨     ಹಬ್ಬ   

೧೨೨     ದೇವ     ೧೭೩     ಸೂರ್ಯವಂಶ

೧೨೩     ಡಾಕ್ಟರ್‌ಕೃಷ್ಣ ೧೭೪     ಪ್ರೇಮೋತ್ಸವ   

೧೨೪     ಶಿವಶಂಕರ್/೧೯೯೦       ೧೭೫     ಸೂರಪ್ಪ            

೧೨೫     ಮುತ್ತಿನಹಾರ    ೧೭೬     ದೀಪಾವಳಿ        

೧೨೬     ಮತ್ತೆಹಾಡಿತುಕೋಗಿಲೆ  ೧೭೭     ನನ್ನಹೆಂಡ್ತಿಚೆನ್ನಾಗಿದ್ದಾಳೆ          

೧೨೭     ಲಯನ್‌ಜಗಪತಿರಾವ್/೧೯೯೧ ೧೭೮    ಯಜಮಾನ      

೧೭೯     ದಿಗ್ಗಜರು             ೧೯೦     ವರ್ಷ  

೧೮೦    ಕೋಟಿಗೊಬ್ಬ   ೧೯೧     ವಿಷ್ಣುಸೇನೆ       

೧೮೧    ಪರ್ವ   ೧೯೨     ನೀನೆಲ್ಲೊನಾನಲ್ಲೆ         

೧೮೨    ಜಮೀನ್ದಾರ್ರು ೧೯೩     ಸಿರಿವಂತ            

೧೮೩    ಸಿಂಹಾದ್ರಿಯಸಿಂಹ        ೧೯೪     ಏಕದಂತ           

೧೮೪    ರಾಜಾನರಸಿಂಹ              ೧೯೫     ಮಾತಾಡ್‌ಮಾತಾಡುಮಲ್ಲಿಗೆ   

೧೮೫    ಹೃದಯವಂತ  ೧೯೬     ಈ ಬಂಧನ        

೧೮೬    ಕದಂಬ                ೧೯೭     ನಮ್‌ಯಜಮಾನ್ರು      

೧೮೭    ಆಪ್ತಮಿತ್ರ           ೧೯೮    ಬಳ್ಳಾರಿನಾಗ     

೧೮೮    ಸಾಹುಕಾರ         ೧೯೯     ಸ್ಕೂಲ್‌ಮಾಸ್ಟರ್           

೧೮೯    ಜೇಷ್ಠ   ೨೦೦     ಆಪ್ತರಕ್ಷಕ          

ಇಸವಿ   ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು               ಇಸವಿ   ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳು

೧೯೭೨ ವಂಶವೃಕ್ಷ[ನಾಗರಹಾವು ಚಿತ್ರಕ್ಕೆ  ಲಭಿಸಲಿಲ್ಲ!]                ೧೯೭೩ ಸಂಕಲ್ಪ             

೧೯೭೪ ಭೂತಯ್ಯನ ಮಗ ಅಯ್ಯು          ೧೯೭೮ ಹೊಂಬಿಸಿಲು[೨ನೇ ಅತ್ಯುತ್ತಮ ಚಿತ್ರ]   

೧೯೮೪ ಬಂಧನ               ೧೯೮೫ ಂಧನ                

೧೯೯೦ ಮುತ್ತಿನಹಾರ    ೧೯೯೧ ಮುತ್ತಿನಹಾರ   

೧೯೯೨ ಹರಕೆಯಕುರಿ   ೧೯೯೮ ಲಾಲಿ[೨ನೇ ಅತ್ಯುತ್ತಮ ಚಿತ್ರ]   

೧೯೯೪ ಕೊಟ್ರೀಶಿಕನಸು               ೧೯೯೯ ವೀರಪ್ಪನಾಯಕ[೨ನೇ ಅತ್ಯುತ್ತಮ ಚಿತ್ರ]            

ಒಟ್ಟು ೪ಬಾರಿ ಫ಼ಿಲಂಫ಼ೇರ್ ಪ್ರಶಸ್ತಿ ಗಳಿಸಿದ್ದರು. ೨೦೧೦ ಆಪ್ತರಕ್ಷಕ [೨ನೇ ಅತ್ಯುತ್ತಮ ಚಿತ್ರ]          

ಕುಮಾರಕವಿ ನಟರಾಜ್ [೯೦೩೬೯೭೬೪೭೧]
ಬೆಂಗಳೂರು-೫೬೦೦೭೨