2020-21 ನೇ ಸಾಲಿನ ಅಪೆಂಡಿಕ್ಸ್ – ಇ ಅನುದಾನದಡಿಯಲ್ಲಿ ಕನ್ನೆಗೌಡ ಕೊಪ್ಪಲ್ ನ್ಯೂ ಕಾಂತರಾಜ ಅರಸ್ ರಸ್ತೆಯಿಂದ ಜಯನಗರ – ಶ್ರೀರಾಂಪುರ ಮಾರ್ಗ – ಮಾನಂದವಾಡಿ ರಸ್ತೆಗೆ ಸೇರುವ  ‘ರಸ್ತೆ ಅಭಿವೃದ್ಧಿ ಕಾಮಗಾರಿಗೆ’ ಮಾನ್ಯ ಶಾಸಕರು ಮತ್ತು ಸ್ಥಳೀಯ ನಗರ ಪಾಲಿಕೆ ಸದಸ್ಯರೊಂದಿಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ವಿಶೇಷವಾಗಿ ರಸ್ತೆಗಳು ವ್ಯಾಪಾರದ, ವ್ಯವಹಾರದ ಅಭಿವೃದ್ಧಿಯ ಸಂಕೇತ ಎಂದು ಈ ದೇಶಕ್ಕೆ ತಿಳಿಸಿಕೊಟ್ಟರು ಸನ್ಮಾನ್ಯ ಮಾಜಿ ಪ್ರಧಾನಿಗಳಾದ  ವಾಜಪೇಯಿ ಅವರು. ಮೈಸೂರು ಮಹಾನಗರದಲ್ಲೂ ಸಹ ರಸ್ತೆಗಳ ಅಭಿವೃದ್ಧಿಯಾಗಬೇಕು ಎಂಬುದಕ್ಕೋಸ್ಕರ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಾಗೂ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ವಿಶೇಷ ಅನುದಾನವನ್ನು ಕೊಡಲು ಪ್ರಾರಂಭಿಸಿದರು. ನಮ್ಮ ಕ್ಷೇತ್ರದಲ್ಲಿರುವ ರಸ್ತೆಗಳನ್ನು ಅಭಿವೃದ್ಧಿ ಮಾಡಲು ವಿಶೇಷ ಅನುದಾನಗಳು ಬೇಕೆಂದು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಬಳಿಗೆ ಮನವಿ ಮಾಡಿದೆವು, ಮೋದಿ ಯುಗ ಉತ್ಸವದಲ್ಲಿ ಒಂದು ನಿರ್ಧಾರವನ್ನು ಕೈಗೊಂಡೆವು ಕೃಷ್ಣರಾಜ ಕ್ಷೇತ್ರವನ್ನು ಸೇಫ್ಟಿ ರೋಡ್ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡುತ್ತೇವೆ.

 ನಮ್ಮ ಕ್ಷೇತ್ರದಲ್ಲಿ 422 ಕಿ.ಮೀ ರಸ್ತೆ ಇದ್ದು ಅದರಲ್ಲಿ 225 ಕಿ.ಮೀ ರಸ್ತೆಗಳನ್ನು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಉಳಿದಂತಹ 194 ಕಿಮೀ ರಸ್ತೆಗಳಿಗೆ ಚಾಲನೆ ಕೊಡುವ ಕೆಲಸವನ್ನು ಮಾಡಿದ್ದೇವೆ. ಈ ಸದರಿ ರಸ್ತೆ  ಮೂರು ವಾರ್ಡ್ ಗಳ ವ್ಯಾಪ್ತಿಗೆ ಬರಲಿದೆ, ಆದ್ದರಿಂದ ಸುಸಜ್ಜಿತವಾದ ರಸ್ತೆ ನಿರ್ಮಿಸಲು 06 ಕೋಟಿ ರೂ ಗಳ ಹಣ ವನ್ನು ಬಿಡುಗಡೆ ಮಾಡಿದ್ದೇವೆ. ರೋಡ್ ಸೇಫ್ಟಿ ಯ ದೃಷ್ಟಿಯಿಂದ ನಾವು ಆಯಾ ಪ್ರದೇಶದಲ್ಲಿರುವ ನಾಗರೀಕರನ್ನು ಆ ರಸ್ತೆಯನ್ನು ನೋಡಿಕೊಳ್ಳುವುದಕ್ಕೋಸ್ಕರ ಸಮಿತಿಗಳನ್ನು ರಚನೆ ಮಾಡುತ್ತಿದ್ದೇವೆ, ಈ ರಸ್ತೆ ಪೂರ್ಣವಾದ ಮೇಲೆ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿತ್ತೋ ಅಲ್ಲಲ್ಲಿ ಸಿಸಿಟಿವಿ ಯನ್ನು ಅಳವಡಿಸುವವರಿದ್ದೇವೆ.

 ನಮ್ಮ ಕ್ಷೇತ್ರದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ರೋಡ್ ಸೇಫ್ಟಿ ಗೆ ಬೇಕಾದ ಹಣವನ್ನು ತೆಗೆದಿಟ್ಟಿದ್ದೇವೆ. ನಮ್ಮ ಕ್ಷೇತ್ರದಲ್ಲಿರುವ 120 ಪಾರ್ಕ್  ಗಳನ್ನು ಪರಿಕಲ್ಪನೆ ಆಧಾರಿತವಾಗಿ 40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವವರಿದ್ದೇವೆ, ಹಾಗೂ ಜಯನಗರದಲ್ಲಿ ಹಿರಿಯ ನಾಗರಿಕರ ಡೇ ಕೇರ್ ಕೇಂದ್ರವನ್ನು ಕೂಡಾ ಪ್ರಾರಂಭ ಮಾಡುವವರಿದ್ದೇವೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರೀಮತಿ ಶೋಭಾ, ಶ್ರೀಮತಿ ಗೀತಾಶ್ರೀ ಯೋಗಾನಂದ್, ಮೈಸೂರು ಜಿಲ್ಲೆ ಬಿಜೆಪಿ ಪ್ರಭಾರಿಗಳದ ಮೈ.ವಿ.ರವಿಶಂಕರ್ ಸ್ಥಳೀಯ ಭಾಜಪಾ ಮುಖಂಡರಾದ ರಾಮ ಪ್ರಸಾದ್, ಸೋಮಣ್ಣ, ಗಿರೀಶ್, ಶ್ರೀಮತಿ ಗೌರಿ, ಯೋಗಾನಂದ್ , ರಾಜೀವ, ಪ್ರದೀಪ್, ಮಧು, ರಾಕೇಶ್, ಮಹಾದೇವ್, ಕುಮಾರ್, ರವಿ, ಕೃಷ್ಣ, ಶಿವರಾಜ್, ರಾಜಣ್ಣ, ಅಧಿಕಾರಿಗಳಾದ ರಾಜು, ಉಮೇಶ್, ಗುತ್ತಿಗೆದಾರ ನಂದೀಶ್ ಇನ್ನಿತರರು ಹಾಜರಿದ್ದರು