ಕೃಷ್ಣರಾಜ ಕ್ಷೇತ್ರದ್ಯಾದಂತ ವರ್ಷದಲ್ಲಿ 3 ಬಾರಿ ಖಾಲಿ ನಿವೇಶನ ಸ್ವಚ್ಛಗೊಳಿಸುವ ಉದ್ದೇಶದಿಂದ ಜೆಪಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿಯವರ ಪುತ್ಥಳಿಯ ಬಳಿ ಇರುವ ಖಾಲಿ ನಿವೇಶನ ಸ್ವಚತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಜೆ.ಪಿ ನಗರದ ಹೃದಯ ಭಾಗದಲ್ಲಿ ಅಕ್ಕಮಾಹಾದೇವಿಯ ಪುತ್ಥಳಿಯನ್ನ 23 ನೇಯ ತಾರೀಖಿನಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ನಾನು ಜಿಲ್ಲಾ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ನಗರದ ಖಾಲಿ ನಿವೇಶನಗಳು ಮತ್ತು ಬಯಲು ಪ್ರದೇಶವನ್ನು ವರ್ಷಕ್ಕೆ 3 ಬಾರಿ ಸ್ವಚ್ಛಗೊಳಿಸುವ ಯೋಜನೆಯನ್ನು ಜಾರಿಗೊಳಿಸಿದ್ದೆವು.

ಇದರ ಅನುಗುಣವಾಗಿ ಇಂದು 40 ಲಕ್ಷ ರೂ ವೆಚ್ಚದಲ್ಲಿ ವಲಯ ಕಚೇರಿ 2 ರ ವ್ಯಾಪ್ತಿಯಲ್ಲಿ ಬರುವಂತಹ ವಾರ್ಡ್ ನಂ. 48,56,59,60,62,63 ರಲ್ಲಿ ಸ್ವಚ್ಛತಾ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಮೈಸೂರು ನಗರವನ್ನ ಮತ್ತೊಂದು ಬಾರಿಗೆ ಸ್ವಚ್ಛ ನಗರವನ್ನಾಗಿ ಉಳಿಸಿಕೊಂಡು ಹೋಗಲು ಜನಸಾಮಾನ್ಯರೆಲ್ಲರೂ ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಕೋರಿದರು.

ಸದರಿ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕಾ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಮುಖಂಡರಾದ ಕೇಬಲ್ ನಾಗೇಂದ್ರ, ಆರ್.ಟಿ ಓಂ ಶ್ರೀನಿವಾಸ್, ದೇವರಾಜೇ ಗೌಡರು. ಜೆ.ಪಿ.ನಗರದ ಶರಣ ವೇದಿಕೆ ಅಧ್ಯಕ್ಷರಾದ ಪುಟ್ಟರಾಜಪ್ಪ, ಸದಾಶಿವು, ನಂದೀಶ್, ನಾಗರಾಜ್, ಶಿವಾನಂದ್, ಅಕ್ಷಯ್, ಭಾಗ್ಯ ಹಾಗೂ ವಲಯ ಕಚೇರಿ 2 ರ ನಗರಪಾಲಿಕೆ ಅಭಿವೃದ್ಧಿ ಅಧಿಕಾರಿ ನಂಜುಂಡೇ ಗೌಡರು,ಅಭಿಯಂತರರಾದ ದಯಾನಂದ, ಮುತ್ತಣ್ಣ, ಆರೋಗ್ಯ ಪರಿವೀಕ್ಷಕರಾದ ಶಿವಪ್ರಸಾದ್, ಕಂದಾಯ ಪರಿಶೀಲಕರಾದ ರಮೇಶ್ ಮತ್ತು ಗುತ್ತಿಗೆದಾರರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.

By admin