ಇಂದು ಬೆಳಗ್ಗೆ ಜೆ ಪಿ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2ನೇ ಡೋಸ್ ಕೋವೀಡ್ ವ್ಯಾಕ್ಸಿನೇಷನ್‌ಗೆ ಚಾಲನೆಯನ್ನು ಹಾಗೂ ಇದೇ ಸಂದರ್ಭದಲ್ಲಿ ವಿವಿಧ ಸಾಮಾಜಿಕ ಭ್ರದತಾ ಯೋಜನೆಯ ಪಿಂಚಣಿಗಾಗಿ ಅರ್ಜಿಯನ್ನು ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡುವ ಕಾರ್ಯಕ್ಕೆ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಚಾಲನೆ ನೀಡಿದಿದರು.

ಯಾವುದೇ ಒಂದು ಕಾರ್ಯವಾಗಬೇಕಾದರೆ ಒಬ್ಬನಿಂದ ಮಾಡಲು ಸಾಧ್ಯವೇ ಇಲ್ಲ, ಒಂದು ತಂಡವಾಗಿ ಕೆಲಸ ಮಾಡಿದರೆ ಮಾತ್ರ ಪ್ರತಿಫಲ ಸಿಕ್ಕುತ್ತದೆ. ನಮ್ಮ ಕ್ಷೇತ್ರದಲ್ಲಿ 1.60 ಲಕ್ಷಕ್ಕೂ ಅಧಿಕ ಲಸಿಕೆಯನ್ನು ಕ್ಷೇತ್ರಾದ್ಯಂತ ನೀಡಿದ್ದೇವೆ. ಜನಸಾಮಾನ್ಯರ ಸಹಕಾರವನ್ನು ತೆಗೆದುಕೊಂಡಾಗ ಮಾತ್ರ ಒಂದು ಸಾಧನೆ ಮಾಡಲು ಸಾಧ್ಯ. ಈ ದೇಶದಲ್ಲಿ ವಿರೋಧ ಪಕ್ಷಗಳು ಲಸಿಕೆ ಬಗ್ಗೆ ಇಲ್ಲ ಸಲ್ಲದ ಅಪವಾದಗಳನ್ನು, ಸುಳ್ಳುಗಳನ್ನು ಹಬ್ಬಿಸಿದ್ದರು, ಆದರೂ ಸಹ ದೇಶದ ಜನ ಅದನ್ನೆಲ್ಲ ನಂಬದೆ ದೊಡ್ಡ ಮಟ್ಟದಲ್ಲಿ ಲಸಿಕೆಯನ್ನು ಪಡೆಯುತ್ತಿದ್ದಾರೆ. ಒಂದನೇ ಡೋಸ್ ಮುಗಿದಿದ್ದವರಿಗೆ ಎರಡನೇ ಡೋಸ್ ಲಸಿಕೆಗೆ ಚಾಲನೆ ನೀಡಬೇಕಿದೆ. ಕೋವಿಡ್ ನಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ,ಕೆ.ಆರ್ ಕ್ಷೇತ್ರದಲ್ಲಿ ಸಾವನ್ನಪ್ಪಿದವರ  ಮನೆಗೆ ತೆರಳಿ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿದ್ದೇವೆ.

ಸಾಕಷ್ಟು ಜನರಿಗೆ ಪಿಂಚಣಿಯೂ ಸಹ ಕೋವಿಡ್ ಸಂದರ್ಭದಲ್ಲಿ ನಿಂತುಹೋಗಿದ್ದು, ಅಂಥವರನ್ನು ಗುರುತಿಸಿ ಪುನಃ ಪಿಂಚಣಿ ಕೊಡಿಸುವ ಜವಾಬ್ದಾರಿ ನಮ್ಮದಾಗಿದೆ. ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ರೂ ಗಳನ್ನಜ್ ಘೋಷಣೆ ಮಾಡಿದೆ, ಅದನ್ನೂ ಕೂಡಾ ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುವವರಿದ್ದೇವೆ.  ನಮ್ಮ ವೈಯುಕ್ತಿಕ ಜವಾಬ್ದಾರಿ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ನಮ್ಮ ಮೇಲಿದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು.ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು,

 ಉಪ ತಹಶೀಲ್ದಾರ್ ರೂಪಾ, ತಾಲ್ಲೂಕು ವೈದ್ಯಾಧಿಕಾರಿ ಡಾ. ಮಹದೇವ ಪ್ರಸಾದ್, ಭಾಜಪಾ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್ , ಜೆ ನಾಗೇಂದ್ರ ಕುಮಾರ್, ಪ್ರಮುಖರಾದ ಈಶ್ವರ್, ಬಂಗಾರಿ ಸುರೇಶ್.  ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.

By admin