ಚಾಮರಾಜನಗರ: ನಗರದ ಈಶ್ವರಿ ಟ್ರಸ್ಟ್ ಸಂಸ್ಥೆ ವತಿಯಿಂದ ಚಿತ್ರನಟ ದಿ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಗರದ ಭುವನೇಶ್ವರಿವೃತ್ತದಿಂದ ಸುಲ್ತಾನ್ ಷರೀಪ್ ವೃತ್ತದವರಗೆ 100 ಗಿಡನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮಕ್ಕೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಚಿತ್ರನಟ ದಿ.ಪುನೀತ್‌ರಾಜ್ ಕುಮಾರ್ ಅವರು ತಮ್ಮ ಮರಣಾ ನಂತರವೂ ತಮ್ಮ ಎರಡು ಕಣ್ಣುಗಳನ್ನು ದಾನಮಾಡುವ ಮೂಲಕ ನಾಲ್ವರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ತಮ್ಮ ಪಿಆರ್‌ಕೆ ಬ್ಯಾನರ್ ಅಡಿ ಯುವನಿರ್ದೇಶಕರಿಗೆ ಚಿತ್ರನಿರ್ದೇಶಿಸುವ ಅವಕಾಶ ಕಲ್ಪಿಸಿದ್ದಾರೆ. ಮಹಿಳಾಸಬಲೀಕರಣ, ವೃದ್ಧಾಶ್ರಮಗಳಿಗೆ ಸಹಾಯಹಸ್ತ ಚಾಚಿದ ಪುನೀತ್ ರಾಜ್ ಅವರ ಸಾಮಾಜಿಕ ಕಾರ್ಯಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.
ಕಳೆದ ೬ ವರ್ಷಗಳಿಂದ ಖ್ಯಾತಗಾಯಕರು, ಚಲನಚಿತ್ರ ನಟರ ಹೆಸರಿನಲ್ಲಿ ನಗರದ ಪ್ರಮುಖರಸ್ತೆಗಳಲ್ಲಿ ೮ ಸಾವಿರಕ್ಕೂ ಹೆಚ್ಚುಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ ಎಂದರು.
ಟ್ರಸ್ಟ್ ಸದಸ್ಯೆ ಜಯಲಕ್ಷ್ಮೀ ಮಾತನಾಡಿ, ಟ್ರಸ್ಟ್ ವತಿಯಿಂದ ಶಾಲಾಮಕ್ಕಳಲ್ಲಿ ಪರಿಸರ, ಮರಸಂರಕ್ಷಣೆ ಮಾಡುವ ಕುರಿತು ಜಾಗೃತಿ ಮೂಡಿಸಲು ಪ್ರಬಂಧ, ಚಿತ್ರಕಲೆ, ಆಶುಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿ.ಹರಿಕೃಷ್ಣ, ವಿ.ನೀಲಕಂಠನ್, ಪುನೀತ್, ಪ್ರಕೃತಿ,ಭಾರತಿ ಹಾಜರಿದ್ದರು.
