ಇಂದು ಬೆಳಿಗ್ಗೆ 10.00 ಗಂಟೆಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಎಸ್.ಎಫ್.ಸಿ ಶಾಸಕರ ವಿವೇಚನಾ ಅನುದಾನದಲ್ಲಿ ಕೆಳಕಂಡ ಅಭಿವೃದ್ದಿ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ ಎಲ್. ನಾಗೇಂದ್ರರವರ ರವರು ವಾರ್ಡ್ ನಂ:5 ರ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಉಷಾ ಕುಮಾರ್ ರವರ ಉಪಸ್ಥಿತಿಯಲ್ಲಿ ಕುಂಬಾರಕೊಪ್ಪಲು ಮೊದಲನೇ ಬಸ್ ನಿಲ್ದಾಣದಲ್ಲಿ ಹೈಟೆಕ್ ಮಾದರಿಯ ಬಸ್ ನಿಲ್ದಾಣ ಕಟ್ಟಡ ನಿರ್ಮಾಣದ ಕಾಮಗಾರಿಯ ರೂ. 35.00 ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಭಾ.ಜ.ಪ, ಅಧ್ಯಕ್ಷರಾದ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿಗಳಾದ ಪುನೀತ್ & ರಮೇಶ್ ಉಪಾಧ್ಯಕ್ಷರಾದ ಕುಮಾರಗೌಡ, ಆಶ್ರಯ ಸಮತಿ ಸದಸ್ಯರಾದ ಮಹೇಶ್ ರಾಜೆಅರಸ್, ಬಸವೇಗೌಡ, ಚಿಕ್ಕವೆಂಕಟು, ಪ್ರಮೋದ್ ಯುವ ಮೋರ್ಚಾ ಉಪಾಧ್ಯಕ್ಷರು, ಮುಖಂಡರುಗಳಾದ ಭೈರಪ್ಪ, ಮಂಜಪ್ಪ, ಅಶ್ವಥ್, ಸತೀಶ್, ನವೀನ್, ಕೆ.ಟಿ.ಗಿರೀಶ್, ನರಸಿಂಹ, ಕಿರಣ್, ಮಾಜಿ ಮಹಾನಗರಪಾಲಿಕೆ ಸದಸ್ಯರಾದ ದೇವರಾಜು, ಯುವ ಮೋರ್ಚಾದ ಗೋವಿಂದು, ಪದ್ಮ, ಪದ್ಮಶ್ರೀ, ಶೋಭ, ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಮನುಗೌಡ, ಅಭಿಯಂತರರಾದ ಅಭಿಲಾಶ್, ಕೆ.ಎಸ್.ಆರ್.ಟಿ.ಸಿ, ಸಂಸ್ಥೆಯ ದಿ.ಟಿ.ಓ, ಮರಿಗೌಡ, ಗುತ್ತಿಗೆದಾರರಾದ ಭೈರಪ್ಪ, ಮುಂತಾದವರು ಹಾಜರಿದ್ದರು,