ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಮಧ್ಯಭಾಗದಲ್ಲಿರುವ ಶ್ರೀ ಗವಿ ಸಿದ್ಧೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಮೇಗಳಕೊಪ್ಪಲು ಅಕ್ಕಪಕ್ಕದ 7ಹಳ್ಳಿಗಳ ಗ್ರಾಮಸ್ಥರು ಸರ್ಕಾರದ ಅನುದಾನ ಪಡೆಯದೆ ಸಮಾನ ವಂತಿಕೆ ಹಾಕಿಕೊಂಡು ಗವಿ ಸಿದ್ದೇಶ್ವರ ಬೆಟ್ಟಕ್ಕೆ ತ್ವರಿತಗತಿಯಲ್ಲಿ ರಸ್ತೆ ನಿರ್ಮಿಸುತ್ತಿದ್ದಾರೆ.


ಮೇಗಳಕೊಪ್ಪಲು ಹಾಗೂ ಅಕ್ಕಪಕ್ಕದ 7ಹಳ್ಳಿಗಳ ಗ್ರಾಮಸ್ಥರು ಇಂದು ಕಾಮಗಾರಿ ಪರಿಶೀಲನೆ ನಡೆಸಿದರು.
ಗವಿಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಮುಖಂಡ ಟಿ. ಎಸ್. ಯಶೋಧರ ಮಾತನಾಡಿ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಮಧ್ಯಭಾಗದಲ್ಲಿರುವ ಗವಿ ಸಿದ್ಧೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಅಲ್ಲಿಗೆ ಸಿಮೆಂಟು, ಕಬ್ಬಿಣ, ಸಲಕರಣೆಗಳನ್ನು ಸಾಗಿಸಲು ಮೇಗಳಕೊಪ್ಪಲು ಹಾಗೂ ಅಕ್ಕಪಕ್ಕದ 7ಹಳ್ಳಿಗಳ ಗ್ರಾಮಸ್ಥರು ವಂತಿಕೆ ಹಾಕಿಕೊಂಡು ಬೆಟ್ಟಕ್ಕೆ ರಸ್ತೆ ನಿರ್ಮಿಸುತ್ತಿದ್ದೇವೆ.

ಇದೊಂದು ಮೈಸೂರು ಜಿಲ್ಲೆಯಲ್ಲೇ ಸುಂದರ ಪ್ರವಾಸಿ ತಾಣವಾಗಲಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಸ್ತೆ ಡಾಂಬರೀಕರಣಕ್ಕೆ ಹಾಗು ದೇವಾಲಯ ಜೀರ್ಣೋದ್ಧಾರ ಮಾಡಲು 3ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗವಿಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಮುಖಂಡರಾದ ತಿಪ್ಪೇಗೌಡ , ಮಲ್ಲಿಕಾರ್ಜುನ್, ಸಣ್ಣಪ್ಪ ಜಿ ಗೌಡ ಸತೀಶ್ , ಕೆಳಗಿನ ಕೊಪ್ಪಲು ಕೃಷ್ಣೇಗೌಡ ,ಸ್ವಾಮಿಗೌಡ , ರಮೇಶ್, ಮೋಹನ್, ಮಲ್ಲೇಶ್, ಸಿದ್ದರಾಮೇಗೌಡ,ಸ್ವಾಮಿಗೌಡ, ಗಿರಿಮಲ್ಲೇಗೌಡ , ಅಪ್ಪಾಜಿಗೌಡ, ಸಣ್ಣತಮ್ಮೇಗೌಡ ,ಹಾಗು ಡೇವಿಡ್ ಗ್ರಾಮಸ್ಥರು ಹಾಜರಿದ್ದರು .