ಹಸಿರು ಮೈಸೂರು, ಲಕ್ಷ ವೃಕ್ಷ ಆಂದೋಲನ, ಸ್ವಚ್ಛ ಮೈಸೂರು ಅಭಿಯಾನಗಳ ಮೂಲಕ ನಗರದ ಜನತೆಯ ಮನೆಮಾತಾಗಿರುವ ಹೆಚ್ ವಿ ರಾಜೀವ್ ಸ್ನೇಹ ಬಳಗದ ಸದಸ್ಯರು ಪಬ್ಲಿಕ್ ಟಿವಿಯ ಜ್ಞಾನದೀವಿ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ಉಚಿತವಾಗಿ ಕೊಡುವ ಕಾರ್ಯಕ್ರಮಕ್ಕೆ ಸ್ಪಂದಿಸಿ ದಿನಾಂಕ 07-01-2021 ರಂದು ಹಸಿರು ಮೈಸೂರು ಸಸ್ಯಧಾಮ ಆವರಣದಲ್ಲಿ ಪಬ್ಲಿಕ್ ಟಿವಿಯ ಪ್ರತಿನಿಧಿ ಯವರಿಗೆ ಬಳಗದ ಅಧ್ಯಕ್ಷರಾದ  ಹೆಚ್ ವಿ ರಾಜೀವ್ ಹಾಗೂ ಸದಸ್ಯರುಗಳು ಒಟ್ಟುಗೂಡಿ ರೂ ಒಂದು ಲಕ್ಷ ರೂಪಾಯಿಗಳನ್ನು ಕಿರು ದೇಣಿಗೆಯಾಗಿ ನೀಡಿದರು .

ಈ ಸಂದರ್ಭದಲ್ಲಿ ಬಳಗದ ಸದಸ್ಯರು ಹಾಗೂ ಮಾಜಿ ಮಹಾಪೌರರಾದ  ಭೈರಪ್ಪನವರು, ಹಸಿರು ಮೈಸೂರು ಮೇಲ್ವಿಚಾರಕರಾದ ಶೇಷಪ್ರಸಾದ್,ಎಸ್ ರಂಗನಾಥ್ ಮತ್ತು ಬಳಗ ಹುಡ್ಕೂ ಕುಮಾರ್, ನಾಗೇಶ್, ಬಸವರಾಜು,ಆಟೋ ಕುಮಾರ್,  ಲಲಿತ, ದೇವೇಂದ್ರ ಪ್ರಸಾದ್ ರಾಮಪ್ರಸಾದ್ , ನಂದಾ ಸಿಂಗ್, ಅಶೋಕಪುರಂ ಕುಮಾರ,ಥಾಮಸ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

By admin