ಮೈಸೂರಿನಲ್ಲಿ ತನ್ನ 163 ನೇ ಮಳಿಗೆಯನ್ನು ಆರಂಭಿಸಿದ ರಾಯಲ್‌ಓಕ್ ಫರ್ನಿಚರ್

ಮೈಸೂರು ನ.೧೧ ಭಾರತದ ಪ್ರಮುಖ ಪೀಠೋಪಕರಣ ಬ್ರಾಂಡ್ ಆಗಿರುವ ರಾಯಲ್‌ಓಕ್ ಫರ್ನಿಚರ್, ಮೈಸೂರಿನಲ್ಲಿ ಎರಡನೇ ಮಳಿಗೆಗೆ ಚಾಲನೆ ನೀಡುವ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ. ದೇಶದಲ್ಲಿ ೧೬೩ ನೇ ಮಳಿಗೆಯಾಗಿದೆ. ರಾಯಲ್‌ಓಕ್ ಇನ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರಾದ ವಿಜಯ್ ಸುಬ್ರಮಣ್ಯಂ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ನೂತನ ಮಳಿಗೆ ಉದ್ಘಾಟಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಥನ್ ಸುಬ್ರಮಣ್ಯಂ ಈ ಸಂದರ್ಭದಲ್ಲಿ ಹಾಜರಿದ್ದರು. ಈ ವಿಸ್ತರಣೆಯು ಮೈಸೂರಿನ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪೀಠೋಪಕರಣಗಳನ್ನು ಒದಗಿಸುವ ರಾಯಲ್‌ಓಕ್ನ ಬದ್ಧತೆಗೆ ಸಾಕ್ಷಿಯಾಗಲಿದೆ.

ರಾಯಲ್‌ಓಕ್ ಇನ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರಾದ ವಿಜಯ್ ಸುಬ್ರಮಣ್ಯಂ ಮಾತನಾಡಿ, “ಇದು ಇಡೀ ರಾಯಲ್‌ಓಕ್ ತಂಡಕ್ಕೆ ಒಂದು ಗಮನಾರ್ಹ ಮೈಲಿಗಲ್ಲು. ನಮ್ಮ ೧೬೩ ನೇ ಮಳಿಗೆಯ ಉದ್ಘಾಟನೆಯೊಂದಿಗೆ ನಾವು ಇನ್ನೊಂದು ಹೆಜ್ಜೆ ಮುಂದಿಡುತ್ತೇವೆ. ಕರ್ನಾಟಕದಲ್ಲಿ, ವಿಶೇಷವಾಗಿ ಮೈಸೂರಿನ ನಮ್ಮ ಎರಡನೇ ಮಳಿಗೆಯೊಂದಿಗೆ ನಮ್ಮ ವಿಸ್ತರಣೆ ಮುಂದುವರಿದಿದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಪೀಠೋಪಕರಣ ಪರಿಹಾರಗಳನ್ನು ತಲುಪಿಸುವಲ್ಲಿ ಬದ್ಧತೆ ಮತ್ತು ಸಮರ್ಪಣೆಯ ಪ್ರತೀಕವಾಗಿದೆ” ಹಾಗೂ ನಮ್ಮ ಮಳಿಗೆಗಳು ರಾಷ್ಟ್ರವ್ಯಾಪಿ ೨೦೦ ಕ್ಕೂ ಹೆಚ್ಚು ರೀಟೇಲ್ ಮಳಿಗೆಗಳ ಜಾಲದೊಂದಿಗೆ, ರಾಯಲ್ ಓಕ್ ಹೈದರಾಬಾದ್, ಮುಂಬೈ, ಕೋಲ್ಕತ್ತಾ, ಚೆನ್ನೈ, ನವದೆಹಲಿ ಮತ್ತು ಅಹಮದಾಬಾದ್ ಸೇರಿದಂತೆ ೧೧೬ ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಅಸ್ತಿತ್ವವನ್ನು ಹೊಂದಿದೆ.
ಫ್ರಾಂಚೈಸ್ ಮುಖ್ಯಸ್ಥ ಕಿರಣ್ ಛಾಬ್ರಿಯಾ, ಗಿರೀಶ್ ಕುರುಪ್-ರಾಜ್ಯ ಮುಖ್ಯಸ್ಥ, ಕರ್ನಾಟಕ, ತಮ್ಮಯ್ಯ-ಡೆಪ್ಯೂಟಿ ಜಿಎಂ, ಮಾದಪ್ಪ ಎಂ- ಭೂಮಾಲೀಕ, ಶ್ರೀನಿವಾಸ ಎಪಿ, ರವಿ ರಾವ್-ಫ್ರಾಂಚೈಸ್ ಮ್ಯಾನೇಜರ್ ಸೇರಿದಂತೆ ರಾಯಲ್‌ಓಕ್ ತಂಡದ ಸದಸ್ಯರ ಉಪಸ್ಥಿತರಿದ್ದರು.