ಮೈಸೂರು: ರೋಟರಿ ಬೆಂಗಳೂರು ಬ್ರಿಗೇಡ್ಸ್ ವತಿಯಿಂದ ಚಾಮರಾಜನಗರ ಜೆಎಸ್‌ಎಸ್ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸ ನ್ಟ್ರೇಟರ್‌ಗಳನ್ನು ಸದಸ್ಯರಾದ ಅಕ್ಷಯ್ ಮಲ್ಲಪ್ಪ, ದುಗ್ಗಹಟ್ಟಿ ವಿ. ಮಲ್ಲಿಕಾರ್ಜುನಸ್ವಾಮಿಯವರು ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಚಿವರಾದ ಎಸ್. ಸುರೇಶ್‌ಕುಮಾರ್‌ರವರ ಮೂಲಕ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮಾಜಿ ಸಚಿವ ಎನ್. ಮಹೇಶ್ ಹಾಗೂ ಆರ್. ಮಹೇಶ್, ಡಾ. ಕುಲದೀಪ್ ಇದ್ದರು.