ಚಾಮರಾಜನಗರ: ಚಾಮರಾಜನಗರ ತಾಲೂಕಿನ ಆಲೂರು ಚಂದಕವಾಡಿ ಅರಳೀಪುರ ಗ್ರಾಮಗಳಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ರಸ್ತೆ,ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ ಶಾಸರು ಆಲೂರು ಗ್ರಾಮದಲ್ಲಿ ವಿಶೇಷ ಘಟಕ ಯೋನಾಡಿಯಲ್ಲಿ ೨೬ಲಕ್ಷ ಚಂದಕವಾಡಿ ಮುಖ ರಸ್ತೆಯಿಂದ ಡೈರಿಮಾರ್ಗರಸ್ತೆಗೆ ೨೬ಲಕ್ಷ ಅರಳೀಪುರ ಗ್ರಾಮದಲ್ಲಿ ಕುರುಬರಬೀದಿ ಹಾಗೂ ಕುಂಬಾರ ಬೀದಿಗೆ ೨೦ಲಕ್ಷ ರೂಗಳಲ್ಲಿ ಸಿಸಿ ರಸ್ತೆ ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕಾಗಿ ತಮ್ಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಅಭಿವೃದ್ದಿ ಕಾಮಗಾರಿಗಳು ಹಲವಾರು ಗ್ರಾಮಗಳಲ್ಲಿ ಪೂರ್ಣ ಗೂಂಡಿದು ಇನ್ನು ಕೆಲವು ಗ್ರಾಮಗಳಲ್ಲಿ ಪ್ರಗತಿಯಲ್ಲಿವೆ ಎಂದರು.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಅಗತ್ಯವಾಗಿ ಬೇಕಾದ ರಸ್ತೆ,ಚರಂಡಿ, ಕುಡಿಯುವ ನೀರು, ವಸತಿ,ಸೇರಿದಂತೆ ಎಲ್ಲಾ ಸಮುದಾಯದವರಿಗೂ ಸಮುದಾಯಭವನಗಳನ್ನು ನಿರ್ಮಿಸಿಕೊಡಲಾಗುತ್ತಿದೆ.
ಸರಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸುವುದೇ ಜನಪ್ರತಿನಿಧಿಗಳ ಕಾರ್ಯವಾಗಿದೆ, ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯವು ಶಾಶ್ವತವಾಗಿದ್ದು ಗುಣಮಟ್ಟವ ಕಾಯ್ಧುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಗ್ರಾ.ಪಂ.ಅಧ್ಯಕ್ಷ ಎ.ಸಿಮಹದೇವಸ್ವಾಮಿ ಉಪಾಧ್ಯಕ್ಷ ಶಂಕರ್‌ನಾಯಕ್ ಚಂದಕವಾಡಿ ಗ್ರಾ,ಪಂ ಅಧ್ಯಕ್ಷೆ ವರಲಕ್ಷೀ ಉಪಾಧ್ಯಕ್ಷ ರಾಜೇಂದ್ರ ಹೆಬ್ಬಸೂರು ಗ್ರಾ.ಪಂಅಧ್ಯಕ್ಷ ಮಹದೇವಸ್ವಾಮಿ ಮಾಜಿಗ್ರಾ.ಪಂ.ಅಧ್ಯಕ್ಷ ಸಿದ್ದಪ್ಪಾಜಿ ಗ್ರಾ,ಪಂ ಸದಸ್ಯರುಗಳು, ಹಾಗೂ ಮುಖಂಡರಾದ ವೀರಭದ್ರಸ್ವಾಮಿ ರಂಗಸ್ವಾಮಿ ಕುಮಾರ್ ಬಸವರಾಜು ಅಬ್ದುಲ್‌ಖಾದರ್ ಮಹದೇವಸ್ವಾಮಿ ಮಹೇಶ್ ಪುಟ್ಟಸ್ವಾಮಿ ಶೇಷಣ್ಣ ರವಿಕುಮಾರ್ ಕಾವೇರಿ ನೀರಾವರಿ ನಿಗಮದ ಇಂಜೀನಿಯರ್ ಮಹದೇವಸ್ವಾಮಿ ಸೇರಿಧಂತೆ ಜನಪ್ರತಿನಿಧಿಗಳು ಹಾಜರಿದ್ದರು.
