ಮೈಸೂರು: ವಿಶ್ವ ವ್ಯಂಗ್ಯ ಚಿತ್ರಕಾರರ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಯುವ ಬಳಗದ ವತಿಯಿಂದ ಆರ್.ಕೆ.ಲಕ್ಷ್ಮಣ್ ಸ್ಮೃತಿ ಪ್ರಶಸ್ತಿ ಪ್ರದಾನವನ್ನು ವಿದ್ಯಾರಣ್ಯಪುರಂನಲ್ಲಿರುವ ಎಸ್.ವಾಸುದೇವ್ ಮಹಾರಾಜ್ ಫೌಂಡೇಶನ್ ಆವರಣದಲ್ಲಿ ನಾಡಿನ ಖ್ಯಾತ ವ್ಯಂಗ್ಯ ಚಿತ್ರಗಾರ ಹಾಗೂ ಫುಲ್ ಬ್ರೈಟ್ ಎಂ.ವಿ ನಾಗೇಂದ್ರಬಾಬು ಮತ್ತು ದೊಡ್ಡಣ್ಣ ಹುಂಡಿ ರಾಜಣ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ.ರಘುರಾಂ ವಾಜಪೇಯಿ ಅವರು ಮೈಸೂರು ಈ ವ್ಯಂಗ್ಯಚಿತ್ರ ಪ್ರಾಕಾರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದು, ಆರ್.ಕೆ.ಲಕ್ಷ್ಮಣ್ ಅವರು ಪರಂಪರೆಯನ್ನು ಈ ಇಬ್ಬರೂ ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಲಾ ಪ್ರಕಾರವು ನಮ್ಮ ಯುವ ಪೀಳಿಗೆಯಲ್ಲಿ ಪೋಷಣೆ ಮಾಡುವಂತಹ ಸಂದರ್ಭ ಒದಗಿ ಬಂದಿದ್ದು, ಮೈಸೂರಿನಲ್ಲಿ ಬಾಲಕರು ಹಾಗೂ ಯುವಕರಿಗೆ ಈ ಕಲೆಯ ಪ್ರಾಕಾರವನ್ನು ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರದ ಮುಖೇನ ನೀವುಗಳು ಸನ್ಮಾನಿತರು ಅದನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದು ಕರೆಕೊಟ್ಟರು ಮುಂದಿನ ದಿನಗಳಲ್ಲಿ ವಿಶ್ವ ವ್ಯಂಗ್ಯಚಿತ್ರಕಾರರ ದಿನವನ್ನು ಮೈಸೂರಿನ ದೊಡ್ಡ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ಇದೇ ಸಂದರ್ಭ ಅವರು ತಿಳಿಸಿದರು.
ವ್ಯಂಗ್ಯ ಚಿತ್ರಕಲೆ ಅನ್ನುವುದು ಬಹುಶಃ ವಿಶಿಷ್ಟದಲ್ಲಿ ವಿಶಿಷ್ಟ ವ್ಯಂಗ್ಯಚಿತ್ರ ಕಲೆ ಸಂದರ್ಭೋಚಿತವಾಗಿ ಸಮಾಜಮುಖಿಯಾಗಿ ಕೇವಲ ಚಿತ್ರಗಳ ಮೂಲಕ ವಿಡಂಬನಾತ್ಮಕವಾಗಿ ಅಕ್ಷರದ ಅರಿವಿಲ್ಲದವರಿಗೆ ಅರಿವು ಮೂಡಿಸುವ ವಿಶಿಷ್ಟ ಕಲೆ ಸಮಾಜದಲ್ಲಿ ಎಷ್ಟೇ ತಂತ್ರಜ್ಞಾನ ಹೊಸ ಹೊಸ ಅವಿಷ್ಕಾರಗಳು ಆದರೂ ವ್ಯಂಗ್ಯ ಚಿತ್ರಕಲೆ ನಿತ್ಯ ನಿರಂತರ ಅಮರವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ.ಎನ್.ನವೀನ್ ಕುಮಾರ್, ಲಕ್ಷ್ಮೀದೇವಿ, ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ನವೀನ್ ಹಾಗೂ ಇನ್ನಿತರರು ಇದ್ದರು.

By admin