ಶ್ರೀ ವಾಸುದೇವ್ ಮಹರಾಜ ಪೌಂಢೇಶನ್ ಮತ್ತು ಹಿಮಾಲಯ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಧ್ಯಾರಣ್ಯಪುರಂ ಅವಧೂತ ವಾಸುದೇವ ಮಹರಾಜ ಕುಟೀರದಲ್ಲಿ ಆದಿ ಶ್ರೀ ಜಗದ್ಗುರು ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು. ಸಾಂಕೇತಿಕವಾಗಿ ಆಚರಿಸಲಾದ ಈ ಕಾರ್ಯಕ್ರಮ ದಲ್ಲಿ ಶ್ರೀ ಶಂಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಬಳಿಕ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ.ಕೆ ರಘುರಾಮ.ವಾಜಪೇಯಿ
ಅವರು ಭಗವಾನ್ ಶ್ರೀ ಶಂಕರಾಚಾರ್ಯರು. ಸನಾತನ ಧರ್ಮದ ಕ್ರಾಂತಿಕಾರಿ ಶ್ರೀ ಶಂಕರರು ಯೋಗಿ ಎಂದು ಬಣ್ಣಿಸಿದರು ೭.೮ ನೇ ಶತಮಾನದಲ್ಲಿ ಸನಾತನ ಧರ್ಮವು ಅಪಾರ್ಥಕ್ಕೆ ಈಡಾಗಿ, ಅಪಹಾಸ್ಯಕ್ಕೆ ಗುರಿಯಾಗಿತ್ತು ಇನ್ನೇನು ಸನಾತನ ಧರ್ಮ ನಾಮಾವ ಶೇಷವಾಗುವ ಸಂಧರ್ಭ ಒದಗಿತ್ತು ಭೌದ್ಧ, ಜೈನ ಧರ್ಮಗಳು ಉಚ್ಛಾಯ ಸ್ಥತಿ ತಲುಪುವ ಹಂತದಲ್ಲಿತ್ತು.

ಇಂತಹ ಪರ್ವ ಕಾಲದಲ್ಲಿ ಸನಾತನ ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ಭಗವಾನ್ ಶ್ರೀ ಶಂಕರರೇ ಅವತಾರವೆತ್ತಿ ಭಗವತ್ಪಾದ ಶ್ರೀ ಶಂಕರಚಾರ್ಯರೆ ಆದರು
ಸನಾತನ ಧರ್ಮಕ್ಕೆ ಹೊಸ ಹೊಳಪು ಪ್ರಕಾಶ ನೀಡಿ ಚಿಂಥನ ಮಂಥನಕ್ಕೆ ಆಸ್ಪದ ಒದಗಿಸಿ ನಿಜವಾದ ಸನಾತನ ಧರ್ಮ ತತ್ವಮೀಮಾಂಸೆ ವಾಜ್ಞ್ಮಯದ ಹಿರಿಮೆಯನ್ನು ಮೆರೆಸಿದರು ಎಂದು ಹೇಳಿದರು.
ನಂತರ ಮಾತನಾಡಿದ ಕ್ರಾಂಗೇಸ್ ಯುವ ಮುಖಂಡ ಶ್ರೀ ಎಂ.ಎನ್ ನವೀನ್ ಕುಮಾರ್ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರಾಚಾರ್ಯರು ತಮ್ಮ ಕಾಲ್ನಡಿಗೆಯಲ್ಲಿಯೇ ಭಾರತಾದ್ಯಂತ ಸಂಚರಿಸಿ ಸನಾತನ ಧರ್ಮವನ್ನು ಜಾಗೃತಿಗೊಳಿಸಿದರು ಹಾಗೂ ಶ್ರೀ ಶಂಕರಾಚಾರ್ಯರ ಭೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಎಂ.ಎನ್ ದೊರೆಸ್ವಾಮಿ ಹಿಮಾಲಯ ಫೌಂಡೇಶನ್ ಅನಂತ್ ಕಾರ್ಯದರ್ಶಿ ಹರ್ಷ ವರ್ಧನ.ನಾಗೇಂದ್ರ ಬಾಬು ಹಾಗೂ ಪತ್ರಕರ್ತ ರಾದ ಮಹೇಶ ನಾಯಕ್ ಅವರು ಹಾಜರಿದ್ದರು.