ಮೈಸೂರು. ಜನವರಿ 7 – ಹೆಚ್.ಡಿ.ಕೋಟೆ ಪುರಸಭಾ ಕೌಶಲ್ಯಾಭಿವೃದ್ಧಿ ಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್) ಯೋಜನೆಯಡಿ ಮಹಿಳಾ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್.ಡಿ.ಕೋಟೆಯ ನಿವಾಸಿಯಾಗಿರುವುದರ ಜೊತೆಗೆ ಪಿ.ಯು.ಸಿಯಲ್ಲಿ ಉತ್ರ್ತೀಣರಾಗಿರಬೇಕು. 18 ರಿಂದ 45 ವರ್ಷದೊಳಗಿನ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಕಂಪ್ಯೂಟರ್ ನಿರ್ವಾಹಣೆಯ ಜ್ಞಾನ ಹೊಂದಿರಬೇಕು. ಪುರಸಭೆಯ ಡೇ ನಲ್ಮ್ ಯೋಜನೆಯಡಿಯ ಎ.ಎಲ್.ಎಪ್ ಅಥವಾ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ 3 ವರ್ಷದಿಂದ ಸದಸ್ಯರಾಗಿರಬೇಕು. ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು.


ಆಸಕಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಪುರಸಭಾ ಕಛೇರಿಯಲ್ಲಿ ಪಡೆದು 2022ರ ಜನವರಿ 14ರೊಳಗಾಗಿ ಆರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹೆಚ್.ಡಿ.ಕೊಟೆಯ ಪುರಸಭೆಯ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಹೆಚ್.ಡಿ.ಕೊಟೆಯ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.