ಮೈಸೂರು. ಜನವರಿ 10 :- ಕೆ.ಆರ್.ನಗರ ಪುರಸಭಾಕೌಶಲ್ಯಾಭಿವೃದ್ಧಿ ಶೀಲತೆ ಮತ್ತುಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯಯೋಜನೆ ಹಾಗೂ ರಾಷ್ಟ್ರೀಯ ನಗರಜೀವನೋಪಾಯಅಭಿಯಾನ (ಡೇ ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಗೌರವಧನಆಧಾರದ ಮೇಲೆ ತಾತ್ಕಾಲಿಕವಾಗಿಒಂದು ವರ್ಷದಅವಧಿಗೆಅರ್ಜಿಯನ್ನುಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆ.ಆರ್. ನಗರ ನಿವಾಸಿಯಾಗಿರುವುದರ ಜೊತೆಗೆ ಪಿ.ಯು.ಸಿಯಲ್ಲಿ ಉತ್ರ್ತೀಣರಾಗಿರಬೇಕು. 18 ರಿಂದ 45 ವರ್ಷದೊಳಗಿನ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಲುಅರ್ಹರಾಗಿರುತ್ತಾರೆ. ಕಂಪ್ಯೂಟರ್ ನಿರ್ವಾಹಣೆಯಜ್ಞಾನ ಹೊಂದಿರಬೇಕು. ಆಯ್ಕೆಯಾದವರಿಗೆ ಮಾಸಿಕ ವೇತನ 8000 ರೂ. ಇದ್ದು, 2000 ರೂ. ಗೌರವಧನ ನೀಡಲಾಗುತ್ತದೆ. ಪುರಸಭೆಯಡೇ ನಲ್ಮ್‍ಯೋಜನೆಯಡಿಯಪ್ರದೇಶ ಮಟ್ಟದಒಕ್ಕೂಟಅಥವಾ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ 3 ವರ್ಷದಿಂದ ಸದಸ್ಯರಾಗಿರಬೇಕು. ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು.
ಆಸಕಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಪುರಸಭಾಕಛೇರಿಯಲ್ಲಿ ಪಡೆದು 2022ರ ಜನವರಿ 17ರೊಳಗಾಗಿ ಆರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿಕೆ.ಆರ್.ನಗರ ಪುರಸಭೆಯಡೇ-ನಲ್ಮ್‍ಶಾಖೆಯನ್ನು ಸಂಪರ್ಕಿಸಬಹುದುಎಂದುಕೆ.ಆರ್.ನಗರ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.