– ಶಾಸಕ ನಿರಂಜನಕುಮಾರ್ ಅಧ್ಯಕ್ಷತೆಯಲ್ಲಿ ವೈದ್ಯರು-ಸಿಬ್ಬಂದಿ ಸಭ

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‍ಗಳ ಕೊರತೆಯಿಂದ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿ ನೀಡಬೇಕೆಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಮುಂದೆ ಹಲವು ಮಂದಿ ವೈದ್ಯರು ಸಮಸ್ಯೆ ಬಿಚ್ಚಿಟ್ಟರು.

ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವೈದ್ಯರು, ಕೂಡಲೇ ಆಸ್ಪತ್ರೆಗೆ ನಿಗಧಿತ ವೈದ್ಯರು, ನರ್ಸ್ ಮತ್ತು ಸಿಬ್ಬಂದಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಸೂಪರ್ಡೆಂಟ್ ಕಪ್ಪಣ್ಣಯ್ಯ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದ ಹಿನ್ನಲೆಯಲ್ಲಿ ನಿಮ್ಮ ಕೆಲಸ ಏನು ಎಂದು ನಿಮಗೆ ಗೊತ್ತಿಲ್ಲ. ನಿವೊಬ್ಬರು ಆಸ್ಪತ್ರೆಗೆ ಸೂಪಡೆರ್ಂಟ್? ಇದೇನು ಖಾಸಗಿ ಆಸ್ಪತ್ರೆಯಲ್ಲ, ಇಲ್ಲಿಗೆ ಜನ ಸೇವೆ ಮಾಡಲು ಬಂದಿದ್ದೀರಾ? ಸುಮ್ಮನೆ ಬಿಟ್ಟಿ ಸಂಬಳ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಶಾಸಕ ನಿರಂಜನಕುಮಾರ್ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಗಳು ನಿಗಧಿತ ಸಮಯಕ್ಕೆ ಸಂಬಳ ಬರುತ್ತಿಲ್ಲ. ಹೀಗಾದರೆ ಕೆಲಸ ಮಾಡುವುದು ಹೇಗೆ ಎಂದು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿಗಳು ದೂರಿದರು.

ಎರಡು ತಿಂಗಳಿಗಿಂತ ಹೆಚ್ಚಿನ ಸಂಬಳ ಉಳಿಸಿಕೊಂಡರೆ ಗುತ್ತಿಗೆ ಪಡೆದುಕೊಂಡ ಕಂಪೆನಿಯ ವಿರುದ್ದ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಶಾಸಕರು ಸೂಚಿಸಿದರು.

ಜೆನರಿಕ್ ಔಷಧ ಕೇಂದ್ರದಲ್ಲಿ ಎಲ್ಲಾ ಔಷಧ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಮೈಸೂರು ಮತ್ತು ಚಾಮರಾಜನಗರ ಜೆನೆರಿಕ್ ಕೇಂದ್ರದಲ್ಲಿ ದೊರಕುವ ಔಷಧಿಗಳು ಏಕೆ ದೊರಕುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಊಟ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ನೀಡಿ, ಇರುವ ವೈದ್ಯಕೀಯ ಸಿಬ್ಬಂದಿಗಳು ಮತ್ತು ನರ್ಸ್‍ಗಳ ಸಹಾಯದಿಂದ ಉತ್ತಮ ಗುಣಮಟ್ಟದ ಸೇವೆ ನೀಡಬೇಕು ಎಂದು ಶಾಸಕರು ಸೂಚನೆ ನೀಡಿದರು.

ಒಪಿಡಿಯಲ್ಲಿ ವೈದ್ಯರಿಲ್ಲ ಎಂದು ದೂರು ಹೆಚ್ಚು ಬರುತ್ತಿದೆ. ಈ ಬಗ್ಗೆ ಗಮನ ನೀಡಬೇಕು ಶಾಸಕರು ತಿಳಿಸಿದರು. ವೈದ್ಯರೊಬ್ಬರು ಆಸ್ಪತ್ರೆಯಲ್ಲಿ ಮ್ಯಾನೆಜ್‍ಮೆಂಟ್ ಸಮಸ್ಯೆ ಇದೆ. ಅದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.

ಆಸ್ಪತ್ರೆಯಲ್ಲಿ ಸೂಜಿ ಹಾಕುವ ನರ್ಸ್‍ಗಳು ರೋಗಿಗಳ ಜೊತೆಗೆ ಸೌಮ್ಯದಿಂದ ವರ್ತಿಸುವುದಿಲ್ಲ ಎಂದು ದೂರು ಬರುತ್ತಿದೆ. ಅಂತವರನ್ನು ಬೇರೆ ಕೆಲಸಕ್ಕೆ ನೇಮಿಸಿ ಸ್ಪಂದಿಸುವವರನ್ನ್ಲುಲ್ಲಿಗೆ ಹಾಕಿ ಎಂದು ವೈದ್ಯರಿಗೆ ಶಾಸಕರು ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿ ಮಾತನಾಡಿ, ಲೋಪದೋಷಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಿ, ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಾರ್ವಜನಿಕ ಉತ್ತಮ ಸೇವೆ ನೀಡಲು ಶ್ರಮಿಸಬೇಕು. ಯಾರೋ ಒಬ್ಬರು ಮಾಡುವ ತಪ್ಪಿನಿಂದ ವೈದ್ಯರು ಲಸ ಮಾಡುತ್ತಿಲ್ಲ ಎಂಬ ಸಂದೇಶ ಸಾರ್ವಜನಿಕ ವಲಯದಲ್ಲಿ ಬರಬಾರದು ಎಂದು ತಿಳಿಸಿದರು.

ವೈದ್ಯರು ಮತ್ತು ಸಿಬ್ಬಂದಿ ವರ್ಗದವರ ಸಮಸ್ಯೆ ಆಲಿಸಿ ಮಾತನಾಡಿದ ಶಾಸಕ ಸಿ.ಎಸ್. ನಿರಂಜನಕುಮಾರ್, ಸಾರ್ವಜನಿಕರ ಆಸ್ಪತ್ರೆಗೆ ದಿನನಿತ್ಯ ಹೆಚ್ಚಿನ ರೋಗಿಗಳು ಬರುತ್ತಿದ್ದು, ಇಲ್ಲಿನ ಸಿಬ್ಬಂದಿ ನಿಸ್ವಾರ್ಥದಿಂದ ಸೇವೆ ನೀಡಬೇಕು. ರಾತ್ರಿ ಪಾಳಿಯಲ್ಲಿನ ವೈದ್ಯರನ್ನು ಹೆಚ್ಚಿನ ರೀತಿಯಲ್ಲಿ ನೇಮಿಸಬೇಖು. ಚಿಕಿತ್ಸೆ ಇಲ್ಲ ಎಂದು ಯಾವೊಬ್ಬ ರೋಗಿಯನ್ನು ಮೈಸೂರು ಹಾಗೂ ಚಾಮರಾಜನಗರಕ್ಕೆ ಕಳುಹಿಸಬಾರದು. ಆಂಬುಲೆನ್ಸ್ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಪ್ರಸ್ತುತ ಇರುವ ಮಾನವ ಸಂಪನ್ಮೂಲದಲ್ಲಿಯೇ ಉತ್ತಮ ಸೇವೆ ಣೀಡಬೇಖು ಎಂದು ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ರವೀಂದ್ರ, ಡಾ. ಮಂಜುನಾಥ್, ಡಾ.ಲಲಿತಾ, ಡಾ.ವಿಕ್ರಮ್, ಡಾ.ಸಂದ್ಯಾ, ಡಾ.ಅರುಣ್, ಡಾ.ಮಹದೇವಮೂರ್ತಿ, ನರ್ಸ್‍ಗಳಾದ ಭಾಗ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin