ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ೨೬.೦೧.೨೦೨೨ ರಂದು ೭೩ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸೇನಾ ಶಾರ್ಟ್ ಕಮೀಷನ್ಡ್ ಅಧಿಕಾರಿಯಾದ ಕ್ಯಾಪ್ಟನ್ ರಾಮದಾಸ್ ಮಂಜೇಶ್ವರ ಕಾಮತ್ ರಾಷ್ಟ್ರಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಿಸಲಾಯಿತು. ನಂತರ ಮಾತನಾಡಿದ ಅವರು ದೇಶಸೇವೆ ಮಾಡಲು ಸೈನ್ಯಕ್ಕೇ ಸೇರಬೇಕಾಗಿಲ್ಲ ನಾವು ಮಾಡುವ ಕೆಲಸವನ್ನು ಪ್ರೀತಿಸುತ್ತ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿ ಎಲ್ಲರೊಂದಿಗೂ ಶಾಂತಿ ಸಹಬಾಳ್ವೆಯಿಂದ ಇದ್ದರೆ ಅದೂ ಸಹ ದೇಶ ಸೇವೆಯೇ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ನಾವೆಲ್ಲರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಹಾನ್ ನಾಯಕರನ್ನು ಇಂತಹ ಘಳಿಗೆಯಲ್ಲಿ ಸ್ಮರಿಸುತ್ತ ಅವರ ಅದರ್ಶಗಳನ್ನು ನಾವೂ ಸಹ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ಅದೇ ನಾವು ಅವರಿಗೆ ಕೊಡುವ ಗೌರವ ಎಂದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ.ಅರ್. ರಾಜಣ್ಣ, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಡೀನ್ ಶೈಕ್ಷಣಿಕ ಡಾ.ಕಾಂಬ್ಳೆ ಅಶೋಕ್, ಡೀನ್ ಅಧ್ಯಯನ ಡಾ.ಷಣ್ಮುಖ, ಕುಲಪತಿಗಳ ವಿಶೇಷಾಧಿಕಾರಿ ಪ್ರೊ.ದೇವರಾಜ್, ಉಪಕುಲಸಚಿವ ಚಂದ್ರೇಶ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಹಾಗು ವಿವಿಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂಧಿ ಭಾಗವಹಿಸಿದ್ದರು.