ಗುಂಡ್ಲುಪೇಟೆ: ಮಡಹಳ್ಳಿ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಉತ್ತರ ಪ್ರದೇಶ ಮೂಲದ ಮೂವರು ಕೂಲಿ ಕಾರ್ಮಿಕ ಕುಟುಂಬಸ್ಥರಿಗೆ ಎಚ್.ಎಸ್.ಮಹದೇವಪ್ರಸಾದ್ ಸಂಗಮ ಪ್ರತಿಷ್ಠಾನ ಟ್ರಸ್ಟ್ ಹಾಗೂ ಕಾಂಗ್ರೆಸ್ ವತಿಯಿಂದ ತಲಾ 10 ಸಾವಿರ ರೂ. ಪರಿಹಾರ ಹಣ ನೀಡಲಾಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಎಂ.ಗಣೇಶಪ್ರಸಾದ್ ಮೃತಪಟ್ಟ ಕುಟುಂಸ್ಥರಿಗೆ ತಲಾ 10 ಸಾವಿರದಂತೆ ಮೂರು ಮಂದಿಗೆ ಒಟ್ಟು 30 ಸಾವಿರ ರೂ. ಎಚ್.ಎಸ್.ಮಹದೇವಪ್ರಸಾದ್ ಸಂಗಮ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕಬ್ಬಳ್ಳಿ ಮಹೇಶ್, ಪುರಸಭೆ ಸದಸ್ಯ ಮಧುಸೂಧನ್, ಪುತ್ತನಪುರ ಸುರೇಶ್, ಹಳ್ಳದಮಾದಳ್ಳಿ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮಿದ್ ಸೇರಿದಂತೆ ಇತರರು ಇದ್ದರು.
ವರದಿ: ಬಸವರಾಜು ಎಸ್.ಹಂಗಳ